ತ್ಯಾಗದಿಂದ ಪಡೆದ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ: ನಿಶ್ಚಿಲ್
ಶಿವಮೊಗ್ಗ : ನಗರದ ಮೈತ್ರಿ ಶಿಕ್ಷಣ ಮಹಾವಿದ್ಯಾಲಯ ದಲ್ಲಿ ೭೭ ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಮೈತ್ರಿ ಶಿಕ್ಷಣ ಸಮೂಹದ ಸಿಇಓ ನಿಶ್ಚಿತ್ ಕೆ.ಹೆಚ್. ಅವರು ಮಾತನಾಡಿ, ನಾವು ಇಂದು ತ್ರಿವರ್ಣ ಧ್ವಜದ ನೆರಳಿನಲ್ಲಿ ನಮ್ಮನ್ನು ೩೦೦ ಮಿಲಿಯನ್ ಜನರಿಂದ ೧.೪ ಬಿಲಿಯನ್ ಕುಟುಂಬವನ್ನಾಗಿ ರೂಪಿಸಿದ ಭಾರತದ ಸಂವಿಧಾನದ ಮಹತ್ವನ್ನು ಸ್ಮರಿಸಲು ಒಂದಾಗಿದ್ದೇವೆ. ವಿಶ್ವದ ಅತಿಧೀರ್ಘ ಸಂವಿಧಾನವು ನಮಗೆ ೬ ಮೂಲಭೂತ ಹಕ್ಕುಗಳ ಜೊತೆಗೆ ೧೧ಮೂಲಭೂತ ಕರ್ತವ್ಯಗಳನ್ನು ನೀಡಿದೆ. ನಿಜವಾದ ಪ್ರಗತಿ ಗಗನಚುಂಬಿಗಳಲ್ಲ. ಮಾನವೀಯ ಮೌಲ್ಯಗಳಲ್ಲಿ ಅಡಗಿದೆ. ತ್ಯಾಗದಿಂದ ಪಡೆದ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಯುವಶಕ್ತಿಯೊಂದಿಗೆ ನಾವು ಭಾರತದ ಭವಿಷ್ಯದ ನಿರ್ಮಾತೃಗಳು, ನವೋದ್ಯಮಿಗಳು ಮತ್ತು ಜವಾಬ್ದಾರಿಯುತ ನಾಗರಿಕರು ಭಾರತದಿಂದ ನಮ್ಮ ಗುರುತು ಆರಂಭವಾಗಲಿ. ಜಗತ್ತಿಗೆ ನಮ್ಮ ಕೊಡುಗೆ ತಲುಪರಿ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಮೈತ್ರಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ಶಾಲಿನಿ ಜೆ, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಶ್ರೀಮತಿ ಅರ್ಚನ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


