ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹಿರಿಯರಿಗೆ ಹೇಗೆ ಗೌರವಿಸಬೇಕೆಂಬ ಕುರಿತು ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ…

Share Below Link

ಶಿವಮೊಗ್ಗ (ಹೊಸನಾವಿಕ): ಕುಟುಂಬದಲ್ಲಿ ಹಿರಿಯರಿಗೆ ಗೌರವ ಕೊಡುವುದು ಹೇಗೆ ಎಂಬುದರ ಬಗ್ಗೆ ಪಠ್ಯಕ್ರಮದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಜಿಪಂ ಉಪಕಾರ್ಯದರ್ಶಿ ಸುಜತ ಹೇಳಿದರು.
ಅವರು ಇಂದು ಡಾ. ಅಂಬೇಡ್ಕರ್ ಭವನದಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಹಿರಿಯ ನಾಗರೀಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ-೨೦೨೫ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಇಂದು ಸಮಾಜದಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಿರಿಯರಿಗೆ ಹೇಗೆ ಗೌರವ ನೀಡಬೇಕು ಎಂಬುದೇ ಮಕ್ಕಳಿಗೆ ತಿಳಿಯದ ವಿಷಯವಾಗಿದೆ. ಈ ಕಾರಣಕ್ಕಾಗಿ ಮಲ್ಯಗಳ ಬಗ್ಗೆ ತಿಳುವಳಿಕೆ ನೀಡುವ ಅಗತ್ಯ ಹೆಚ್ಚಾಗಿದೆ ಎಂದ ಅವರು, ಇಂದಿನ ಮಕ್ಕಳು ನಾಳೆಯ ನಾಗರೀಕರು ನಂತರ ಹಿರಿಯ ನಾಗರೀಕರು ಆಗುತ್ತಾರೆ. ಹಿರಿಯ ನಾಗರೀಕರಿಗೆ ಅವರz ಆದ ಬದುಕು ಇದೆ. ಹಿರಿಯರಿಗೆ ನಾವು ಹೆಚ್ಚೇನು ಕೊಡಬೇಕಾಗಿದ್ದಿಲ್ಲ, ಅವರು ಚಿಕ್ಕ ಮಕ್ಕಳಂತೆ. ಅವರ ಮಾತನ್ನು ಕೇಳಿಸಿಕೊಳ್ಳುವ ಮನಸ್ಸು ಬೇಕಾಗಿದೆ ಎಂದರು.
ಕುಟುಂಬದ ಹಿರಿಯರಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳು ಅಭಿವೃದ್ದಿ ಯಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಇಂದು ನಾವು ನಮ್ಮ ಮಕ್ಕಳನ್ನು ಮಾತ್ರ ನೋಡುತ್ತೇವೆ. ಆದರೆ ಹಿರಿಯರಾದ ತಂದೆ- ತಾಯಿ ಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಿರಿಯ ಬಗ್ಗೆ ಕಾಳಜಿಯಿಲ್ಲ. ಹಿರಿಯರಿಗೆ ನಮ್ಮ ಪ್ರೀತಿಯ ಅಪ್ಪುಗೆ ಬೇಕು. ಅವರಿಗೆ ಗೌರವಯುತವಾದ ಸ್ವಾಭಿಮಾನದ ಬದುಕು ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಲ್ಲಿ ಮಲ್ಯಗಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಭಾರತಿ ಮಾತನಾಡಿ, ಇಂದು ನಮ್ಮ ಸಮಾಜದಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ. ಹಿರಿಯರ ಹಕ್ಕುಗಳು ಉಲ್ಲಂಘನೆಯಾಗಲು ನಾವು ಅವಕಾಶಕೊಡಬಾರದು, ಹಿರಿಯರಿಗೆ ಇಳಿ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆಯಿಂದಾಗಿ ಮಾನಸಿಕವಾಗಿ ಜರ್ಜರಿತವಾಗುತ್ತಿzರೆ. ಸರ್ಕಾರವು ಹಿರಿಯರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳ ಉಪಯೋಗ ಮಾಡಿಕೊಂಡು ಹಿರಿಯರು ಗೌರವಯುತವಾಗಿ ಬಾಳಲು ಸಹಕರಿಸಬೇಕು ಎಂದು ವಿನಂತಿಸಿದರು.
ಜಿ ಗ್ಯಾರೆಂಟಿ ಅನುಷ್ಟಾನ ಸಮಿತಿಯ ಜಿಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಸರ್ಕಾರಿ ಯೋಜನೆಗಳ ಅನುಷ್ಠಾನವನ್ನು ಜಿಯ ಎ ಅಕಾರಿಗಳು ಚೆನ್ನಾಗಿಯೇ ಮಾಡುತ್ತಿzರೆ. ಹಿರಿಯ ನಾಗರೀಕರ ಸಮಸ್ಯೆಗಳನ್ನು ಸರ್ಕಾರ ಗಮನಿಸಿ ಆ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾ ಗುತ್ತದೆ. ಹಿರಿಯ ನಾಗರೀಕರು ಹಿರಿಯರಾಗಿರಬೇಕು. ಹಿರಿಯರ ಅನುಭವವನ್ನು, ಅವರ ಮಾರ್ಗದರ್ಶನಗಳನ್ನು ಯುವಕರು ಪಡೆದು ಭವ್ಯಭಾರತದ ನಿರ್ಮಾಣದಲ್ಲಿ ತೊಡಗಿಕೊಳ್ಳ ಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಕಾರಿ ಅಭಿಷೇಕ್, ಹಿರಿಯ ನಾಗರೀಕರಿಗಾಗಿಯೇ ಸರ್ಕಾರ ಸೀನಿಯರ್ ಸಿಟಿಜನ್ ಮೈಂಟೇನನ್ಸ್ ಆಕ್ಟ್ ಎಂಬ ಪ್ರತ್ಯೇಕ ಕಾಯ್ದೆಯನ್ನೇ ಜರಿಗೆ ತಂದಿದೆ. ಈ ಕಾಯ್ದೆಯ ಮೂಲಕ ಹಿರಿಯ ನಾಗರೀಕರಿಗೆ ಸಮಾಜದಲ್ಲಿ ಗೌರವಯುತವಾಗಿ ಬಾಳು ನಡೆಸುವ ಸೌಲಭ್ಯವನ್ನು ಒದಗಿಸಿದೆ. ಈ ಕಾಯ್ದೆ ಮತ್ತು ಇಲಾಖೆಯ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಿ ಎಂದು ಹಿರಿಯ ನಾಗರೀಕರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆ ಪ್ರತಿeವಿ ಸ್ವೀಕರಿಸಲಾಯಿತು. ಹಿರಿಯ ನಾಗರೀಕ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕಿ ಸುವರ್ಣಾ ನಾಯ್ಕ್, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಡಿ.ಆರ್. ಸಂಗಮೇಶ್ವರ ಗವಾಯಿಗಳು, ಎಸ್‌ಡಿಪಿಐ ನಿವೃತ್ತ ಅಕಾರಿ ಚಂದ್ರಪ್ಪ, ಪಾಲಿಕೆಯ ಅಕಾರಿ ಅನುಪಮಾ ಭಟ್ ಮೊದಲಾದವರಿದ್ದರು.