ಜಿಲ್ಲಾ ಸುದ್ದಿತಾಜಾ ಸುದ್ದಿ

ಲೋಕಕಲ್ಯಾಣಕೆ ಮುನ್ನ ಆತ್ಮ ಕಲ್ಯಾಣ ಮಾಡಿಕೊಳ್ಳುವುದು ಅಗತ್ಯ…

Share Below Link

ನ್ಯಾಮತಿ : ಲೋಕ ಕಲ್ಯಾಣವಾಗುವ ಮೊದಲು ಆತ್ಮಾವಲೋಕ ಕಲ್ಯಾಣವನ್ನು ಮಾಡಿಕೊಳಬೇಕಾಗಿದೆ ಎಂದು ಹೊಸದುರ್ಗ ತಾಲೂಕಿನ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಾಳಿಕಾಂಬ ಬೀದಿಯ ಶ್ರೀ ಕಾಳಿಕಾಂಬ ದೇವಿಯ ದೇಗುಲದಲ್ಲಿ ಶ್ರೀ ಕಾಳಿಕಾಂಬ ವಿಶ್ವಕರ್ಮ ಸೇವಾ ಸಮಿತಿ, ವಿವಿಧ ಸಮಾಜಗಳ ಸಮಿತಿಯೊಂದಿಗೆ ನಿನ್ನೆ ಶ್ರೀ ಕಾಳಿಕಾಂಬ ದೇವಿಯ ದಸರಾ , ಸನಾತನ ಧಮೋತ್ಸವ, ಶ್ರೀ ಕಾಳಿಕಾಂಬ ದೇವಿಯ ಅಂಬಾರಿ ಉತ್ಸವದ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಮಹಾಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.


ಲೋಕ ಕಲ್ಯಾಣಾರ್ಥವಾಗಿ ಎಂದು ಹೇಳುತ್ತೇವೆ. ನಮ್ಮ ಆತ್ಮ ಕಲ್ಯಾಣವಾಗಿದೆಯೇ? ಪ್ರತಿಯೊಬ್ಬರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ವ್ಯಕ್ತಿ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣ ಬಯಸುವುದು ಹೇಗೆ ಎಂದು ಚಿಂತನೆ ಮಾಡಬೇಕು ಅದಕ್ಕನುಗುಣವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಕೂಂಡಾಗ ಲೋಕ ಕಲ್ಯಾಣಾರ್ಥ ವಾಗಿ ಎಂಬ ಪದಕ್ಕೆ ಅರ್ಥ ಬರಬೇಕಾದರೆ ವೈeನಿಕ , ಆರ್ಥಿಕ, ಸಾಮಾಜಿಕ ಹಾಗೂ ಆಧುನಿಕ ಚಿಂತನೆ ಬರಬೇಕಾಗಿದೆ. ಅದರೆ ಇವತ್ತು ಸತ್ಯ , ಪ್ರಾಮಾಣಿಕತೆ, ನೀತಿ ಇವೆಲ್ಲವೂ ಗಾಳಿಗೆ ತೂರುವ ವಾತಾವರಣ ನಿರ್ಮಾಣವಾಗುತ್ತಿರುವುದು ವಿಷಾದನೀಯ ಎಂದ ಅವರು, ಜವಾಬ್ದಾರಿ ಸ್ಥಾನದಲ್ಲಿರುವವ ಪ್ರತಿಯೊಬ್ಬರರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಎಂದಿಗಿಂತ ಇವತ್ತು ಹೆಚ್ಚಿದೆ ಎಂದು ಹೇಳಿದರು.
ಅಸಮಾನತೆ ಎನ್ನುವುದು ಎ ಕಾಲದಲ್ಲಿಯೂ ಇತ್ತು. ಆದರೆ, ಐದು ಬೆರಳು ಒಂದಕ್ಕೊಂದು ಸಮವಿಲ್ಲದಿದ್ದರೂ, ಹೇಗೆ ಒಂದಾಗಿ ಕೆಲಸ ಮಾಡುತ್ತವೆಯೋ ಹಾಗೆ ನಮ್ಮ ನಡುವೆ ಏನೇ ಅಸಮಾನತೆ ಗಳಿದ್ದರೂ ಸಮಾಜಕಟ್ಟುವ ಕಾರ್ಯದಲ್ಲಿ ಒಂದಾಗಬೇಕು ಸಮಾಜವನ್ನು ತಿದ್ದುವುದಕ್ಕಿಂತ, ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ವ್ಯಕ್ತಿ ಸರಿಯಾದರೆ ದೇಶ, ಜಗತ್ತು ಸರಿಹೋಗುವುದು ಎಂದು ಹೇಳಿದರು.
ಹಾಸನ ಜಿಯ ಅರಕಲ ಗೂಡು ತಾಲೂಕಿನ ಅರೇಮಾದೇನ ಹಳ್ಳಿಯ ವಿಶ್ವಕರ್ಮ ಪೀಠದ ಅನಂತ ವಿಭೂಷಿತ ಶಿವಸುeನತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸನಾತನ ಸಂಸ್ಕೃತಿಯ ಸ್ವಾಭಿಮಾನ ಬೆಳೆಸುವಂತೆ ಮಾಡಬೇಕು, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ , ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು . ಸಂಸ್ಕಾರದ ಆಹಾರ ನೀಡಿ ಬೆಳೆಯುವಂತೆ ಮಾಡಬೇಕು, ಮನೆಯೇ ಮೊದಲ ಪಾಠಶಾಲೆ ಜನನಿ ಮೊದಲ ಗುರು ಹಾಗಾಗಿ ತಂದೆ ತಾಯಂದಿದರು ತಮ್ಮ ಮಕ್ಕಳಿಗೆ ಸಾಮರಸ್ಯ, ಸ್ನೇಹ, ಹೊಂದಾಣಿಕೆ, ಪ್ರಾಮಾಣಿಕತೆ ಯನ್ನು ಚಿಕ್ಕಂದಿನಿಂದಲೇ ಕಲಿಸ ಬೇಕು . ಮೂರು ವರ್ಷದ ಬುದ್ದಿ ನೂರು ವರ್ಷವೆಂಬಂತೆ ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಪ್ರಮುಖ ರಾದ ನಾಗರಾಜ್ ಆಚಾರ್, ಯರಗನಾಳು ಮಹೇಶ್ವರಪ್ಪ, ಮುರಿಗೇಂದ್ರಪ್ಪ ಗೌಡ, ದಿವಾಕರ್ ಆಚಾರ್ ಮತನಾಡಿದರು.