ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಿಕ್ಷಕರು ಪರಿಣಾಮಕಾರಿ ಬೋಧನಾಕ್ರಮ ಅಳವಡಿಸಿಕೊಳ್ಳುವುದು ಅವಶ್ಯಕ…

Share Below Link

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಠಿಯಿಂದ ಶಿಕ್ಷಕರು ತಂತ್ರeನದ ಸದುಪಯೋಗ ಪಡೆದುಕೊಂಡು ಪರಿಣಾಮಕಾರಿ ಬೋಧನಾ ಕ್ರಮ ಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯ ದರ್ಶಿ ಎಸ್.ರಾಜಶೇಖರ್ ಹೇಳಿ ದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿeನ ಹಾಗೂ ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣ ದಲ್ಲಿ ಡಿವಿಎಸ್ ಇಂಗ್ಲೀಷ್ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಇಂಗ್ಲೀ ಷ್ ವಿಭಾಗ ಹಾಗೂ ಕಾಲೇಜು ಆಂಗ್ಲ ಶಿಕ್ಷಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಎನ್‌ಇಪಿ ಇಂಗ್ಲೀ ಷ್ ಪಠ್ಯಕ್ರಮ : ಮಲ್ಯಮಾಪನ ಹಾಗೂ ಬೋಧನಾ ಕ್ರಮಗಳು ಕುರಿತ ವಿಶೇಷ ಉಪನ್ಯಾಸ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾ ಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಬಂದ ನಂತರದಲ್ಲಿ ಎದುರಾಗುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಹಂತದಲ್ಲಿ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.
ಕಾಲೇಜು ಆಂಗ್ಲ ಶಿಕ್ಷಕರ ವೇದಿಕೆ ಅಧ್ಯಕ್ಷೆ ಡಾ. ಎಂ.ಕೆ.ವೀಣಾ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಅವಕಾಶಗಳ ಜತೆ ಯಲ್ಲಿ ಸಮಸ್ಯೆಗಳು ಸಹ ಎದುರಾ ಗಿವೆ. ವಿದ್ಯಾರ್ಥಿಗಳ ಮಲ್ಯ, ಕೌಶಲ್ಯ, eನ ವೃದ್ಧಿಸುವ ದಿಸೆ ಯಲ್ಲಿ ಶಿಕ್ಷಕರು ಹೊಸ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳ ಬೇಕು. ಶಿಕ್ಷಣ ಬೋಧನಾ ಕ್ರಮವು ಯಾಂತ್ರೀಕ ಆಗಿರಬಾರದು. ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾ ಗುವ ರೀತಿಯಲ್ಲಿ ಶಿಕ್ಷಣ ನೀಡ ಬೇಕು ಎಂದು ಹೇಳಿದರು.
ಕಾಲೇಜು ಆಂಗ್ಲ ಶಿಕ್ಷಕರ ವೇದಿಕೆ ಕಾರ್ಯದರ್ಶಿ ಡಾ. ಟಿ.ಅವಿನಾಶ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ತುಂಬಾ ಗೊಂದಲ ಮೂಡಿಸುವ ರೀತಿಯಲ್ಲಿದೆ. ಶಿಕ್ಷಣ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರದ ಕುರಿತು ಸಮಾ ಲೋಚನೆ ನಡೆಸಬೇಕಿದೆ. ಸಮಸ್ಯೆಗ ಳಿಂದ ಹೊರಬರುವುದು ಹೇಗೆ ಎನ್ನುವುದಕ್ಕೆ ಉತ್ತರ ಕಂಡುಕೊಳ್ಳ ಬೇಕಿದೆ. ಹೊಸ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಶಿಕ್ಷಕರು ಸಿದ್ಧತೆ ನಡೆಸಬೇಕು ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಫ್ರೊಫೆಸರ್ ಡಾ. ಪ್ರವೀಣ್ ಶೆಟ್ಟಿ ಉಪನ್ಯಾಸ ನೀಡಿದರು. ಕುವೆಂಪು ವಿಶ್ವವಿದ್ಯಾಲಯದ ಡಾ. ನಾಗ್ಯಾನಾಯ್ಕ ಬಿ.ಎಚ್., ಡಿವಿಎಸ್ ಕಲಾ, ವಿeನ ಹಾಗೂ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಕೇತನಾ ಆರ್ತಿ ಎನ್., ಐಕ್ಯೂಎಸಿ ಸಂಚಾಲಕ ಕುಮಾರಸ್ವಾಮಿ, ಚೈತ್ರಾ ಎಂ.ಆರ್. ಮತ್ತಿತರರು ಉಪಸ್ಥಿತರಿದ್ದರು.