ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ನ್ಯಾಯಾಧೀಶರಂತೆ ನಡೆದುಕೊಳ್ಳಬೇಕಿದ್ದ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಖಂಡನೀಯ…

Share Below Link

ಶಿವಮೊಗ್ಗ: ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ನಡೆ ಕರ್ತವ್ಯಚ್ಯುತಿಯಾಗಿದ್ದು ಅದು ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಜಂಟಿ ಅಧಿವೇಶನ ದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ಅವರ ಕರ್ತವ್ಯ ವಾಗಿದೆ. ಆದರೆ ಅವರು ಭಾಷಣ ವನ್ನು ಪೂರೈಸದೆ ರಾಷ್ಟ್ರಗೀತೆಯನ್ನೂ ಕೇಳಿಸಿಕೊಳ್ಳದೇ ಒಂದು ರೀತಿಯಲ್ಲಿ ಓಡಿ ಹೋಗಿzರೆ. ಇದು ಸರಿ ಯಲ್ಲ, ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಇಲ್ಲವೇ ರಾಜೀ ನಾಮೆ ಕೊಡಬೇಕು. ರಾಜ್ಯಪಾಲರು ಯಾವ ಪಕ್ಷಕ್ಕೂ ಸೀಮಿತ ವಾಗಬಾರದು. ನ್ಯಾಯಾಧೀಶರಂತೆ ನಡೆದುಕೊಳ್ಳಬೇಕು. ಆದರೆ ಅವರು ತನ್ನ ಪೂರ್ವಾಶ್ರಮವನ್ನು ನೆನಪು ಮಾಡಿಕೊಂಡವರಂತೆ ಕೇಂದ್ರದ ಕೈಗೊಂಬೆಯಂತೆ ವರ್ತಿಸಿ ಹೋಗಿ ರುವುದು ಅತ್ಯಂತ ಖಂಡನೀಯ. ಅವರು ಸಾಮಂತ ರಾಜರಲ್ಲ, ಬಿಜೆಪಿಯ ಪ್ರತಿನಿಧಿಯೂ ಅಲ್ಲ, ಅವರಿಂದ ಹಕ್ಕುಚ್ಯುತಿಯಾಗಿದೆ ಎಂದು ಕುಟುಕಿದರು.


ಕೇಂದ್ರದ ಬಿಜೆಪಿ ಸರ್ಕಾರ ಅತಿಯಾಗಿ ವರ್ತಿಸುತ್ತಿದೆ. ಮನರೇಗಾ ವಿಷಯದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿದೆ. ಗಾಂಧೀಜಿಯವರ ಹೆಸರನ್ನು ತೆಗೆಯಲು ಕಾರಣ ಏನಿತ್ತು? ಮನರೇಗಾ ವಿಶೇಷ ಅಧಿವೇಶನ ಕರೆದಿದ್ದು ವಿರೋಧಪಕ್ಷಗಳಿಗೆ ಚರ್ಚೆಮಾಡಲು ಅವಕಾಶ ಕೊಟ್ಟಿzರೆ. ಆದರೆ ಅವರು ಹಾಗೆ ಮಾಡಲೇ ಇಲ್ಲ. ಬಿಜೆಪಿಯವರಿಗೆ ಮನರೇಗಾ ಅರ್ಥವೇ ಆಗಿಲ್ಲ. ಈ ದೇಶದಲ್ಲಿ ೩೦ ಕೋಟಿ ಜನರಿಗೆ ಉದ್ಯೋಗ ಇಲ್ಲ. ಕೇಂದ್ರ ಸರ್ಕಾರ ದಿಂದ ಉದ್ಯೋಗ ಸೃಷ್ಟಿಯೂ ಇಲ್ಲ. ಸರ್ಕಾರಿ ಕೆಲಸ ನೀಡಲು ಸಾಧ್ಯವಿಲ್ಲ ನಿಜ. ಆದರೆ ಮನರೇಗಾದಂತಹ ಕಾರ್ಯಕ್ರಮದಲ್ಲಿ ನಿರುದ್ಯೋಗಿ ಗಳಿಗೆ ಅವಕಾಶ ಕೊಡಬಹುದು. ಇದು ಒಂದು ಸಾಮಾಜಿಕ ಕೆಲಸವೂ ಹೌದು. ದೇಶದಲ್ಲಿ ಸುಮಾರು ೨ ಲಕ್ಷ ಗ್ರಾಮ ಪಂಚಾಯ್ತಿಗಳಿವೆ. ಗ್ರಾ.ಪಂ.ಮಟ್ಟದಲ್ಲಿ ಯುವಕರ ಕೈಗೆ ಉದ್ಯೋಗವಿಲ್ಲ. ಈಗ ಈ ಉದ್ಯೋಗಕ್ಕೂ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಕಡಿವಾಣ ಹಾಕುತ್ತಿದೆ ಎಂದರು.


ಮನರೇಗಾ ಎಂಬುದು ಗ್ರಾಮೀಣ ಭಾರತದ ಕನಸು. ಕೇಂದ್ರದ ಹೊಸ ನಿರ್ಧಾರದಿಂದ ಗ್ರಾ.ಪಂ.ಗಳಿಗೆ ಯಾವ ಹಕ್ಕೂ ಇಲ್ಲ, ಎ ಅಧಿಕಾರವನ್ನು ಖಾಸಗಿ ಯವರಿಗೆ ನೀಡಲಾಗಿದೆ. ಕಳೆದ ೩ ವರ್ಷಗಳಿಂದ ಉದ್ಯೋಗಖಾತ್ರಿ ಯೋಜನೆಯಡಿ ಬರಬೇಕಾಗಿದ್ದ ಸುಮಾರು ೨೮೦೦ ಕೋಟಿ ರೂ. ಹಣ ಇನ್ನೂ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಶೇ.೪೦ರಷ್ಟು ಹಣ ನೀಡಬೇಕು ಎಂಬ ನಿಯಮವನ್ನು ಏಕೆ ಮಾಡಿzರೋ ಗೊತ್ತಿಲ್ಲ ಎಂದರು.
ಬಿಜೆಪಿ ಜಾತಿ, ಧರ್ಮದ ಆಧಾರದಲ್ಲಿ ಆಡಳಿತ ನಡೆಸಲು ಹೊರಟಿದೆ. ಅವರು ಹೇಳುವುದೇ ಒಂದು, ಮಾಡುವುದೇ ಮತ್ತೊಂದು ಒಂದು ರೀತಿಯಲ್ಲಿ ಸಕ್ಕರೆ ಲೇಪಿಸಿ ವಿಷ ಉಣಿಸುತ್ತಿzರೆ. ಒಕ್ಕೂಟ ವ್ಯವಸ್ಥೆಯನ್ನೇ ವಿರೋಧಿಸುತ್ತಿzರೆ. ಬಿಜೆಪಿಯವರಿಗೆ ಪ್ರಿಯವಾದ ಬಂಚ್ ಆಫ್ ಥಾಟ್ಸ್ ಎಂಬ ಪುಸ್ತಕದಲ್ಲಿ ಒಕ್ಕೂಟದ ವಿರುದ್ಧದ ಸ್ಪಷ್ಟ ನಿರ್ದೇಶನವಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿಯವರು ಇಲ್ಲಿನ ಜತಿ ವ್ಯವಸ್ಥೆಯ ಬಗ್ಗೆ ಏಕೆ ಮಾತನಾಡುವುದಿಲ್ಲ. ಜತಿಯ ವ್ಯವಸ್ಥೆ ಎಂಬುದು ಹೊಸ್ತಿಲ ಒಳಗೆ ಮತ್ತು ಹೊಸ್ತಿಲ ಹೊರಗೆ ಬೇರೆ ಬೇರೆ ಇರುತ್ತದೆಯೇ ಎಂದರು.


ಹೊಸ ಹೊಸ ಕಾರ್ಯಕ್ರಮ ಗಳನ್ನು ಹಿಂದೂ ಹೆಸರಿನಲ್ಲಿ ಮಾಡುವ ಮೂಲಕ ನಾವೆ ಒಂದು ಎಂದು ಹೇಳುವ ಬಿಜೆಪಿ ಗರಲ್ಲಿ ನಾವೆ ಒಂದೇ ಎಂಬ ಭಾವನೆ ಎಲ್ಲಿದೆ? ಅವರ ಪುಸ್ತಕ ಗಳಲ್ಲಿ ಮೀಸಲಾತಿಗಳ ವಿರೋಧವಿದೆ. ಸಂಸ್ಕೃತ ಒಂದೇ ಭಾಷೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಸಂಪ್ರದಾಯ ಉಳಿಸಬೇಕು ಎಂದು ಸಾರಿ ಸಾರಿ ಚಿಂತನಾಗಂಗಾ ಸೇರಿದಂತೆ ಅವರ ಅನೇಕ ಪುಸ್ತಕಗಳಲ್ಲಿ ಹೇಳಿzರೆ. ಇದನ್ನೂ ಇವರು ಒಪ್ಪುತ್ತಾರೆಯೇ ? ಧೈರ್ಯವಿದ್ದರೆ ಈ ಪುಸ್ತಕಗಳನ್ನು ವಿರೋಧಿಸಲಿ. ಒಂದು ಭಾಷೆ, ಒಂದು ದೇಶ ಎಂದರೆ ಸಮಗ್ರತೆ ಹೇಗೆ ಬರಲು ಸಾಧ್ಯ? ಇದು ಒಕ್ಕೂಟದ ವ್ಯವಸ್ಥೆ. ಇಲ್ಲಿ ಎ ಧರ್ಮಗಳು, ಭಾಷೆಗಳು ಇವೆ. ಇದೆಲ್ಲವನ್ನು ಬಿಟ್ಟು ಕೇವಲ ಧರ್ಮದ ಆಧಾರದಲ್ಲಿ ಒಗ್ಗೂಡು ವುದು ಹೇಗೆ ಸಾಧ್ಯ. ಸಾಮಾಜಿಕ ಸಾಮರಸ್ಯದ ಬಗ್ಗೆ ಇವರ ಕಾರ್ಯಕ್ರಮಗಳಲ್ಲಿ ಏನಾದರೂ ಸ್ಪಷ್ಟತೆ ಇದೆಯಾ? ಸ್ವದೇಶಪ್ರೇಮದ ಬಗ್ಗೆ ಮಾತನಾಡುವ ಇವರ ಮಕ್ಕಳುಗಳು ವಿದೇಶದಲ್ಲಿ ಸುಖ ವಾಗಿ ಇರುತ್ತಾರೆ. ಇವರ ನಡೆಗೂ- ನುಡಿಗೂ ಯಾವ ಸಂಬಂಧವೂ ಇಲ್ಲ. ರಾಷ್ಟ್ರಗೀತೆಗೆ ಗೌರವ ಕೊಡದೇ ಇರುವವರು ಒಂದೇ ಮಾತರಂ ಗೀತೆ ಹಿಡಿದುಕೊಂಡು ಒzಡುತ್ತಿ zರೆ ಎಂದು ಟೀಕಿಸಿದರು.
ಜಿ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಪೂರ್ಣೇಶ್, ಅಮರನಾಥ್‌ಶೆಟ್ಟಿ, ಆದರ್ಶ, ಜಯಕರಶೆಟ್ಟಿ, ಶ್ರೇಯಸ್‌ರಾವ್ ಇನ್ನಿತರರಿದ್ದರು.