ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿದ್ಯೆ ಕಲಿಸಿದ ಗುರುಗಳು -ವಿದ್ಯಾ ಮಂದಿರ ಮರೆಯದಿರುವುದು ಶ್ಲಾಘನೀಯ…

Share Below Link

ಭದ್ರಾವತಿ : ಪದವಿ ಪೂರ್ಣಗೊಳಿಸಿ ೨೫ ವರ್ಷ ಗಳ ನಂತರವೂ ಕಲಿಸಿದ ಗುರುಗಳು, ಓದಿದ ಕಾಲೇಜನ್ನು ವಿದ್ಯಾರ್ಥಿಗಳ ಮರೆಯದೇ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರು ವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಜಯದೇವಪ್ಪ ಹೇಳಿದರು.
ಭದ್ರಾತಿಯ ಸರ್ ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ೧೯೯೮ರಿಂದ ೨೦೦೦ನೇ ಸಾಲಿನಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗುರು -ಶಿಷ್ಯ ಪರಂಪರೆ ಇತ್ತೀಚೆಗೆ ಮರೆಯಾಗುತ್ತಿರುವ ಈ ಸಂದರ್ಭದಲ್ಲೂ ಕೂಡ ತಾವೆ ಸೇರಿ ಇಂತಹುದೊಂದು ಮಾದರಿ ಕಾರ್ಯಕ್ರಮ ನಡೆಸಿದ್ದೀರಿ. ಉತ್ತಮ ಜೀವನ, ನಡವಳಿಕೆ ರೂಢಿಸಿಕೊಳ್ಳಿ. ಸ್ನೇಹಿತರೆ ಸೇರಿ ಸಂಭ್ರಮಿಸುವುದೇ ಒಂದು ಸೊಬಗು. ನೀವು ಕನಿಷ್ಟ ಎರಡು ಮೂರು ವರ್ಷಗಳಿಗೊಮ್ಮೆ ಯಾದರೂ ಇಂತಹ ಕಾರ್ಯಕ್ರಮ ಗಳ ಮೂಲಕ ಜೊತೆಯಾಗಿರಿ ಎಂದರು.
ತರೀಕೆರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಸಬಿತಾ ಬನ್ನಾಡಿ ಮಾತನಾಡಿ, ನಿಮ್ಮ ಸ್ನೇಹಿತ ರೊಂದಿಗೆ ಸ್ನೇಹ, ಪ್ರೀತಿ, ವಿಶ್ವಾಸ ನಿರಂತರವಾಗಿರಲಿ ಎಂದರು.
ತರೀಕೆರೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಮಂಜುನಾಥ್, ಹೊಸಂಗಡಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲ ಪ್ರೊ. ಕಿರಣ್, ಶಿವಮೊಗ್ಗ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ವೀಣಾ, ನಿವೃತ್ತ ಪ್ರಾಧ್ಯಾಪಕರಾದ ಮಲ್ಲಪ್ಪ, ಜೀವಂಧರ್ ಕುಮಾರ್ ಹೋತಪೇಟಿ, ರೇಣುಗೋಪಾಲ್, ವಿಜಯಾದೇವಿ, ಇನಾಯತ್ ವು, ಚಂದ್ರಶೇಖರಯ್ಯ, ಬಾಲಚಂದ್ರ ಮೂರ್ತಿ, ಗಂಗರಾಜು, ವಸಂತಕುಮಾರ್, ಚಂದ್ರಮ್ಮ, ಶೈಲಜ ಮೊದಲಾದ ವರಿಗೆ ಗುರುವಂದನೆ ಸಲ್ಲಿಸಲಾಯಿತು.
ಲೋಕೇಶ್ ಪ್ರಾರ್ಥಿಸಿ, ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೀತಿ ಎನ್. ಎಸ್. ಸ್ವಾಗತಿಸಿದರು. ವೀಣಾ ವಂದಿಸಿದರು. ವೆಂಕಟಗಿರಿ ಮತ್ತು ಕುಮಾರಿ ಕಾರ್ಯಕ್ರಮ ನಿರೂಪಿಸಿದರು.