ಸೇವಾ ಕಾರ್ಯಗಳನ್ನು ಮಾಡಿ ನಿಖರವಾದ ವರದಿ ನೀಡುವುದೂ ಅಗತ್ಯ: ಸಪ್ನಾ ಸುರೇಶ್…
ಸಾಗರ : ಲಯನ್ಸ್ ಸಂಸ್ಥೆಗಳು ಸೇವಾ ಕಾರ್ಯ ಮಾಡುವುದರ ಜೊತೆಗೆ ಅವುಗಳ ನಿಖರ ವರದಿಯನ್ನು ನೀಡುವುದೂ ಅಗತ್ಯ ಎಂದು ಲಯನ್ಸ್ ಜಿ ೩೧೭ಸಿ ಗವರ್ನರ್ ಸಪ್ನ ಸುರೇಶ್ ಸಲಹೆ ನೀಡಿದರು.
ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧದ ವತಿಯಿಂದ ನಡೆದ ಪ್ರಾಂತ್ಯ ಮಟ್ಟ ದ ನಾಯಕತ್ವ ಶಿಬಿರದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಮಾತನಾಡಿ ದರು.

ಸೇವಾ ಸಂಸ್ಥೆಗಳು ವಿವಿಧ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತವೆ. ಹೀಗೆ ಮಾಡಿದ ಸೇವಾಕಾರ್ಯಗಳ ವಿವರಗಳನ್ನು ದಾಖಲೆ ಸಹಿತ ಮೇಲ್ಮಟ್ಟದ ಕ್ಲಬ್ ಗಳಿಗೆ ಸಲ್ಲಿಸಬೇಕು. ಇವುಗಳಿಂದ ಯಾವ ಯಾವ ಕ್ಲಬ್ಗಳು ಎಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡು ತ್ತವೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಹಾಗೆಯೇ ಮಾಡಿದ ಸೇವಾಕಾರ್ಯಗಳು ಜನರಿಗೆ ಹೇಗೆ ತಲುಪುತ್ತವೆ ಎಂಬುದೂ ಮುಖ್ಯ ವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಪ್ರಾಂತ್ಯ ಅಧ್ಯಕ್ಷ ಕೆ.ಬಿ.ಮಹಾಬಲೇಶ್ ಶಿಬಿರ ಉದ್ಘಾಟಿಸಿ ಮಾತನಾಡಿ, ನಾಯ ಕತ್ವ ಹೇಗಿರಬೇಕು. ಯಾವ ರೀತಿ ಸಂಸ್ಥೆಯ ಸದಸ್ಯರೊಂದಿಗೆ ಸಂಸ್ಥೆ ಯನ್ನು ಮುನ್ನಡೆಸಿಕೊಂಡು ಹೋಗ ಬೇಕು. ಯಾವ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡಬೇಕು ಇತ್ಯಾದಿ ವಿಷಯಗಳನ್ನು ನಿರ್ಧರಿ ಸುವ ಮೂಲಕ ನಾಯಕತ್ವ ಗುಣ ಗಳನ್ನು ಮೈಗೂಡಿಸಿಕೊಳ್ಳಲು ಇಂಥ ಶಿಬಿರಗಳು ಹೇಗೆ ಉಪಯುಕ್ತ ವಾಗುತ್ತವೆ ಎಂಬ ಮಾಹಿತಿ ತಿಳಿ ಯುತ್ತದೆ. ಹಾಗಾಗಿ ಎಲ್ಲ ಕ್ಲಬ್ ಪದಾಧಿಕಾರಿಗಳು ಇಂಥ ಶಿಬಿರದ ಸದುಪಯೋಗ ಪಡೆದುಕೊಳ್ಳ ಬೇಕು ಎಂದರು.
ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್ಗಳು ಮಾಡುವ ಸೇವಾ ಕಾರ್ಯಗಳನ್ನು ಪರಿಗಣಿಸಿ ಅಂಕ ನೀಡಿ ಜಿ ಮಟ್ಟದಲ್ಲಿ ಪ್ರಶಸ್ತಿ ನೀಡುವುದರಿಂದ ಸ್ಪರ್ಧೆಯ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗ ಮಿಸಿದ್ದ ರವಿರಾಜ್ ನಾಯಕ್ ಅವ ರು, ಸಭೆ ನಡೆಸುವ ಬಗ್ಗೆ, ಪ್ರಕಾಶ್ ಬೆಟ್ಟಿನ್ ಅವರು ನಾಯಕತ್ವದ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಂತ್ಯ ೭ರ ವಲಯ ೧ ಮತ್ತು ೨ರ ಸಾಗರ, ಉಳವಿ, ಸೊರಬ, ಮಾಸ್ತಿಕಟ್ಟೆ, ಸಾಗರ ಶ್ರೀಗಂಧ ಕ್ಲಬ್ ಪದಾಧಿಕಾರಿಗಳು ಭಾಗವಹಿಸಿ ದ್ದರು.
ಇದೇ ಸಂದರ್ಭದಲ್ಲಿ ಶಿಬಿರದ ಪ್ರಾಯೋಜಕತ್ವ ನೀಡಿದ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್, ದೇಣಿಗೆ ನೀಡಿದ ವಿನಯ್ಕುಮಾರ್ ಮತ್ತು ಬಿ. ಎಸ್.ಎಸ್.ಮೂರ್ತಿ ದಂಪತಿ ಯನ್ನು ಜಿ ಪ್ರಥಮ ಉಪ ಗವರ್ನರ್ ರಾಜೀವ್ ಕೋಟ್ಯಾನ್ ಮತ್ತು ದ್ವಿತೀಯ ಉಪ ಗವರ್ನರ್ ಹರಿಪ್ರಸಾದ್ ರೈ ಸನ್ಮಾನಿಸಿದರು.
ವಲಯ ೨ರ ಅಧ್ಯಕ್ಷ ಕುಮಾರಸ್ವಾಮಿ, ಇ.ಡಿ.ಶ್ರೀಧರ್, ಶೈಲೇಶ್, ಅಕ್ಷಯಕುಮಾರ್, ಸುರೇಶಕುಮಾರ್, ಪ್ರಭಾ ಶ್ರೀಧರ್ ಉಪಸ್ಥಿತರಿದ್ದರು.
ಸವಿತಾ ಮಹಾಬಲೇಶ್ ಪ್ರಾರ್ಥಿಸಿದರು. ಎನ್.ಆರ್. ವಿನಯ್ ಸ್ವಾಗತಿಸಿದರು. ಪ್ರಾಂತ್ಯ ಕಾರ್ಯದರ್ಶಿ ಮೇಜರ್ ನಾಗರಾಜ್ ವಂದಿಸಿದರು.

