ಎಲ್ಲ ಪಕ್ಷದಲ್ಲಿರುವ ಅದೃಶ್ಯ ಮತದಾರರು ನನ್ನ ಕೈ ಹಿಡಿಯುತ್ತಾರೆ: ಕೆ.ಎಸ್.ಈಶ್ವರಪ್ಪ
ಸಾಗರ : ನಾನು ಸಾಮಾನ್ಯ ಜನರ ಮಧ್ಯೆಯಿದ್ದು, ಅವರಿಗೆ ಅಗತ್ಯ ಇರುವ ಕೆಲಸ ಮಾಡಿ ಕೊಂಡು ಬಂದವನು. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷ ದವರು, ಜನಸಾಮಾನ್ಯರು ನನಗೆ ಬೆಂಬಲ ನೀಡುತ್ತಿzರೆ. ಅದೃಶ್ಯ ಮತದಾ ರರು ನನ್ನ ಕೈ ಹಿಡಿಯು ತ್ತಾರೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಈಶ್ವರಪ್ಪ ಹೇಳಿದರು.
ಸಾಗರದ ರಾಷ್ಟ್ರ ಭಕ್ತರ ಬಳಗದ ಕಚೇರಿಯಲ್ಲಿ ಬುಧವಾರ ನಡೆದ ನಗರ ಹಾಗೂ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಐದು ಬಾರಿ ಗೆದ್ದು ಬಂದಾಗಲೂ ಬೊಗಳೆ ಭರವಸೆ ನಾನು ಕೊಟ್ಟಿಲ್ಲ, ಬದಲಾಗಿ ಸಮಾಜದ ಪ್ರತಿ ವರ್ಗವರ ಅವಶ್ಯಕತೆಗಳನ್ನು ಅರಿತು, ಅವರಿಗೆ ಬೇಕಿರುವ ಎಲ್ಲ ಕೆಲಸಗಳನ್ನೂ ಮಾಡಿ ತೋರಿಸಿದ್ದೇನೆ. ಜನರಿಗೆ ಅಗತ್ಯವಿರುವ ಅಭಿವೃದ್ಧಿ ವಿಚಾರ ಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಕ್ಕೆ ಹಿಂದೇಟು ಹಾಕು ವುದಿಲ್ಲ. ಹೀಗಾಗಿ ನಾನು ಬಿಜೆಪಿ ಯವರಂತೆ ಸುಳ್ಳು ಹೇಳಿಕೊಂಡು ಜನರ ಬಳಿ ಮತ ಕೇಳುತ್ತಿಲ್ಲ ಎಂದು ಕುಟುಕಿದರು.
ಈ ಜಿಯ ಜನ ಈಶ್ವರಪ್ಪ ಯಾವ ಕಾರಣಕ್ಕೆ ಚುನಾವಣೆಗೆ ಇಳಿದಿzರೆ ಎನ್ನುವುದನ್ನು ಗುರುತಿಸಿzರೆ. ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರು, ಸಮಾಜದ ನೂರಾರು ಗಣ್ಯ ವಕ್ತಿಗಳು ವಕೀಲರು, ವೈದ್ಯರು, ವ್ಯಾಪಾರಿಗಳು, ಜನಸಾಮಾನ್ಯರು ಬೆಂಬಲ ನೀಡುತ್ತಿzರೆ. ಪ್ರಮುಖವಾಗಿ ಅದಶ್ಯಮತ ದಾರರು ನನ್ನ ಕೈ ಹಿಡಿಯುತ್ತಾರೆ ಎನ್ನುವುದು ಗೊತ್ತಾಗಿದೆ ಎಂದರು.
ನಾನು ೫ ಬಾರಿ ಶಾಸಕರಾಗಿz ಗಲೂ ಇಷ್ಟು ಜನ ಬೆಂಬಲ ಸಿಕ್ಕಿರಲಿಲ್ಲ. ಶಿವಮೊಗ್ಗದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜನ ಬರುತ್ತಿ zರೆ. ಸಾಗರ ತಾಲೂಕಿನ ಹತ್ತಾರು ಕಾಂಗ್ರೆಸ್ ಪ್ರಮುಖರು ಕರೆ ಮಾಡಿ ಮಾತನಾಡಿzರೆ. ಕಾಂಗ್ರೆಸ್ ಪಕ್ಷ ದುರ್ಬಲ ಅಭ್ಯರ್ಥಿ ಹಾಕಿಸಿ ಕೊಂಡು ಬಂದಿzರೆ ಎಂದು ಹೇಳುತ್ತಿzರೆ. ಮುಖ್ಯವಾಗಿ ಕ್ಷೇತ್ರದ ಸಾಮಾನ್ಯ ಜನ ಈಶ್ವರಪ್ಪ ರನ್ನು ಬೆಂಬಲಿಸುವ ಮಾತನಾಡಿzರೆ ಎಂದರು.
ಸಭೆಯಲ್ಲಿ ಇದೇ ವೇಳೆ ಹಲವು ಕಾರ್ಯಕರ್ತರು ಬಳಗಕ್ಕೆ ಸೇರ್ಪಡೆ ಯಾದರು. ಕೃಷ್ಣಮೂರ್ತಿ, ಅಣ್ಣಪ್ಪ ಪೂಜಾರಿ, ರೇಣುಕಾಮೂರ್ತಿ, ಸತೀಶ್, ಗೌರೀಶ್, ಮೆದಲಾದವರು ಹಾಜರಿದ್ದರು.