ಒಳಮೀಸಲಾತಿ; ಜಿಲ್ಲಾವಾರು ಜಾತಿ ಗೊಂದಲ ನಿವಾರಿಸಿ…
ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಜಿವಾರು ಜತಿಗಳ ಗೊಂದಲ ಗಳನ್ನು ನಿವಾರಿಸಬೇಕು ಎಂದು ಮಹಾಜನ್ ಜಗೃತ್ ಸಮಿತಿ ರಾಜಧ್ಯಕ್ಷ ಕೆ. ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ. ಆದರೆ ಕೇಂದ್ರಕ್ಕೆ ಶಿಫಾರಸು ಮಾಡಿರುವ ಕ್ರಮದಲ್ಲಿ ಒಂದಿಷ್ಟು ಗೊಂದಲ ಮತ್ತು ನ್ಯೂನತೆ ಇದೆ ಎಂದರು.
ಮಾದಿಗ (ಎಡಗೈ) ಜನಾಂಗವು ಮೀಸಲಾತಿಯ ವರ್ಗಿಕರಣದ ಪ್ರಕಾರ ಆದಿಕರ್ನಾಟದಲ್ಲಿ ಬರುತ್ತದೆಯೋ ಆದಿ ದ್ರಾವಿಡದಲ್ಲಿ ಬರುತ್ತದೆಯೋ ಎಂಬ ಗೊಂದಲ ಉಂಟಾಗಿದೆ. ಮುಖ್ಯವಾಗಿ ನಾವು ಆದಿಕರ್ನಾಕಟ ವರ್ಗದಲ್ಲಿಯೇ ಗುರುತಿಸಿಕೊಳ್ಳ ಬೇಕಾಗಿದೆ. ಆದಿ ದ್ರಾವಿಡ ಎಂಬುದು ಮೈಸೂರು ಭಾಗದಲ್ಲಿ ಮಾತ್ರ ಇರುತ್ತದೆ. ಹಾಗಾಗಿ ಅನೇಕ ಜಿಗಳಲ್ಲಿ ಇದು ಗೊಂದಲಕ್ಕೆ ಕಾರಣವಾಗಿದೆ. ಎಡಗೈ ಜನಾಂಗ ವನ್ನು ಆದಿ ಕರ್ನಾಟಕ ಎಂದೇ ಗುರುತಿಸಿ ಅದರಂತೆ ಮೀಸಲಾತಿ ನೀಡಬೇಕೆಂಬುದು ನಮ್ಮ ಬೇಡಿಕೆ ಎಂದರು.
ಒಳಮೀಸಲಾತಿ ವರ್ಗೀಕರಣ ಸಮಿತಿಯಲ್ಲಿ ತೀರ್ಮಾನಿಸಿದಂತೆ ೧೦೧ ಜತಿಗಳನ್ನು ನಾಲ್ಕು ವರ್ಗ ಗಳನ್ನಾಗಿ ವಿಭಾಗಿಸಲಾಗಿದೆ. ಗ್ರೂಪ್ ಒಂದರಲ್ಲಿ ಆದಿ ದ್ರಾವಿಡಕ್ಕೆ ಸಂಬಂಧಿಸಿದಂತೆ ಸಮಗಾರ, ಮೋಚಿ, ಬಾಂಚಿ, ಅರಳಯ್ಯ, ಚಮ್ಮಾರ ಮುಂತಾದ ಜತಿಗಳು ಇದ್ದರೆ, ಗ್ರೂಪ್ ಮೂರರಲ್ಲಿ ಮಾದಿಗ ಎಂದು, ನಾಲ್ಕರಲ್ಲಿ ಸಮಗಾರ ಎಂದು ನಮೂದಿಸಲಾಗಿದೆ. ಈ ಗುಂಪಿಗೆ ಶೇ.೬ರಷ್ಟು ಮೀಸಲಾತಿ ಇದೆ. ಆದರೆ ಗ್ರೂಪ್ ಎರಡರಲ್ಲಿ ಆದಿ ಕರ್ನಾಟಕ ಎಂದು ಅದರಲ್ಲಿ ಚಲವಾದಿ, ಚೆಲುವಾದಿ, ಚೆನ್ನಯ್ಯ, ದಾಸನ್ ಮುಂತಾದ ಹೆಸರುಗಳನ್ನು ನಮೂದಿಸಲಾಗಿದೆ. ಈ ವರ್ಗಗಳಿಗೆ ಶೇ.೫.೫ ಮೀಸಲಾತಿ ಇದೆ ಎಂದರು.
ಆದರೆ ಈ ಎ ಜತಿಗಳು ಅಸ್ಪೃಶ್ಯ ವರ್ಗಗಳಾಗಿವೆ. ಈ ವರ್ಗಗಳನ್ನು ಬೇರೆ ಬೇರೆ ಜಿ ಕೇಂದ್ರಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿzರೆ. ಉದಾಹರಣೆಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು ಜಿಗಳಲ್ಲಿ ಆದಿ ಕರ್ನಾಟಕ (ಎಡಗೈ) ಎಂದು ಗುರುತಿಸಲಾಗುತ್ತಿದೆ. ಇವರಿಗೆ ಜಾತಿ ದೃಢೀಕರಣ ಪತ್ರವನ್ನು ಆದಿ ಕರ್ನಾಟಕ ಎಂದು ನೀಡಲಾಗು ತ್ತದೆ. ಇವರ ಉದ್ಯೋಗ ಹಾಗೂ ಉಪಕಸುಬು ಕೂಡ ಬೇರೆ ಬೇರೆ ಇರುತ್ತದೆ. ಆದಿ (೨ನೇ ಪುಟಕ್ಕೆ)