ಒಳಮೀಸಲಾತಿ: ಬಂಜರ ಸಮುದಾಯದಿಂದ ಶವ ಇಟ್ಟು ಪ್ರತಿಭಟನೆ…
ಶಿವಮೊಗ್ಗ (ಹೊಸನಾವಿಕ): ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಸೆ.೧೨ರಿಂದ ಶಿವಮೊಗ್ಗ ಜಿ ಧಿಕಾರಿಗಳ ಕಛೇರಿ ಆವರಣ ದಲ್ಲಿ ಶಿವಮೊಗ್ಗ ಜಿ ಬಂಜರ ಸಂಘ, ಕರ್ನಾಟಕ ಬಂಜರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರ ಯದಲ್ಲಿ ನಡೆಯು ತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಇಂದು ೭ನೇ ದಿನಕ್ಕೆ ಕಾಲಿಟ್ಟಿದ್ದು, ಶಿವಮೂರ್ತಿ ವೃತ್ತದಲ್ಲಿ ರಸ್ತೆತಡೆ ನಡೆಸಿ, ಸರ್ಕಾರದ ಶವವನ್ನು ಇಟ್ಟು ಪ್ರತಿಭಟಿಸಿದರು.
ಬಳಿಕ ಶವಯಾತ್ರೆಯನ್ನು ಡಿಸಿ ಕಛೇರಿಯವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಬಂಜರ ಸಮುದಾಯಕ್ಕೆ ೪.೫ ಮೀಸಲಾತಿ ನೀಡಲಾಗಿತ್ತು. ಸುಪ್ರೀಂ ಕೋರ್ಟಿ ನ ಮಾನದಂಡಗಳನ್ನು ಸಂಪೂರ್ಣ ವಾಗಿ ಉಲ್ಲಂಘಿಸಿ ಸಿದ್ಧ ಪಡಿಸಲಾಗಿ ರುವ ನಾಗಮೋಹನ್ ದಾಸ್ ವರದಿಯು ನಿವೃತ್ತ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ಮುಂದುವರೆದ ಭಾಗದಂತ್ತಿದ್ದು, ಈ ವರದಿಯ ಸಾರಾಂಶಗಳು ವಾಸ್ತವಿಕ ಅಂಕಿ ಸಂಖ್ಯೆಗಳಿಂದ ದೂರವಾಗಿರು ವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿಅಂಶಗಳು ದಮ ನಿತ ಸಮುದಾಯಗಳ ಅನು ಮಾನಕ್ಕೆ ಕಾರಣವಾಗಿದೆ ಮತ್ತು ಈ ಅಂಕಿಅಂಶಗಳನ್ನು ಯಾವ ಮೂಲ ದಿಂದ ಪಡೆಯಲಾಗಿದೆ ಎಂಬು ದನ್ನು ಆಯೋಗ ಸ್ಪಷ್ಟಪಡಿಸ ಬೇಕಿದೆ. ಪರಿಶಿಷ್ಟ ಜತಿಯ ನಿಖರ ಅಂಕಿ ಸಂಖ್ಯೆಗಳನ್ನು ಸರ್ಕಾರದ ಇಲಾಖೆಗಳು ನೀಡಿಲ್ಲ. ಸರ್ಕಾರ ಈ ಅಪೂರ್ಣ ವರದಿಯನ್ನೇ ಸಣ್ಣ- ಪುಟ್ಟ ಬದಲಾವಣೆಯೊಂದಿಗೆ ಜರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ನ್ಯಾ. ನಾಗಮೋಹನ್ದಾಸ್ ವರದಿಯಲ್ಲಿ ಅನುಸರಿಸಿರುವ ೨೩ ಮಾನದಂಡಗಳಲ್ಲಿ ಡಿ ವರ್ಗದಲ್ಲಿ ರುವ ಲಂಬಾಣಿ ಸೇರಿದಂತೆ ಇತರೆ ಜತಿಗಳು ಏಳು ವಿಷಯಗಳಲ್ಲಿ ಮಾತ್ರ ಪ್ರಗತಿ ಹೊಂದಿರುವುದನ್ನು ಕಾಣಿಸಲಾಗಿದ್ದು, ಉಳಿದ ೧೬ ಮಾನದಂಡಗಳಲ್ಲಿ ಸಿ ವರ್ಗ ದವರೇ ಪ್ರಗತಿ ಹೊಂದಿರುವಾಗ, ಸಿ ವರ್ಗದ ವರಿಗೆ ಶೇ.೬ರಷ್ಟು ಮೀಸಲಾತಿ ನೀಡಿ ಡಿ ವರ್ಗದ ವರಿಗೆ ಶೇ.೪ ರಷ್ಟು ಮೀಸಲಾತಿ ನಿಗಧಿಗೊಳಿಸಿ ರುವುದು ಸರ್ಕಾರ ದಿಂದ ಆದ ಅನ್ಯಾಯವಾಗಿದ್ದು, ಕಳೆದ ಏಳು ದಿನಗಳಿಂದ ರಾಜ ದ್ಯಂತ ಬಂಜರ ಸಮುದಾಯ ಸರ್ಕಾರದ ಒಳಮೀಸಲಾತಿ ವರ್ಗೀ ಕರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಇಂದು ಅಣಕು ಶವ ಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದೆ. ನಾಳೆ ಅರೆ ಬೆತ್ತಲೆ ಪ್ರತಿ ಭಟನೆ ನಡೆಸಲಾಗು ವುದು. ಕೂಡ ಲೇ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ವಿಧಾನಸೌಧ ಚಲೋ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾ ಗುವುದು ಎಂದು ಅವರು ಎಚ್ಚರಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ಬಂಜರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆಜೆ. ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾ ನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಶಿವಮೊಗ್ಗ ತಾಲೂಕಿನ ಚಿಕ್ಕಮ ರಡಿ, ಕಾಟಕೆರೆ, ಅಬ್ಬಲೆಗೆರೆ, ಹುಣಸೋಡು, ಬಿಕ್ಕೋನಹಳ್ಳಿ, ಬೀರನಕೆರೆ, ಮೇಲಿನ ಕುಂಚೇನ ಹಳ್ಳಿ ಹಾಗೂ ಭದ್ರಾವತಿ ತಾಲ್ಲೂ ಕಿನ ಸಿದ್ಧಾಪುರ, ರಾಮಿನಕೊಪ್ಪ, ವೀರಾಪುರ, ಸಿರಿಯೂರು, ಬಿಳಿಕೆ, ಹೆಬ್ಬಂಡಿ, ಕೋಮಾರನಹಳ್ಳಿ, ಬಾಬಳ್ಳಿ, ನಾಗತಿಬೆಳಗಲು, ಹೊಸ ಹಳ್ಳಿ ತಾಂಡದ ನಾಯಕ್ ಡಾವ್ ಕಾರಾಬಾರಿ ಹಾಗೂ ತಾಂಡಾದ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

