ಇತರೆಜಿಲ್ಲಾ ಸುದ್ದಿ

ಕಳಪೆ ಮೊಬೈಲ್ ನೀಡಿ ಸೇವೆಗೆ ಅಪಮಾನ: ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರಿಂದ ಭಾರೀ ಪ್ರತಿಭಟನೆ

Share Below Link

ಶಿಕಾರಿಪುರ : ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಉದ್ದೇಶ ದಿಂದ ನೀಡಲಾದ ಸ್ಮಾರ್ಟ ಫೋನ್‌ಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು,ಕಳಪೆ ಮೊಬೈಲ್ ನೀಡಿ ಕಾರ್ಯಕರ್ತೆಯರ ಸೇವೆಗೆ ಅಗೌರವ ತೋರಲಾಗಿದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷೆ ಶೈಲಜಾ ಆರೋಪಿಸಿದರು.


ಅಂಗನವಾಡಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಕಳೆದ ೪ ವರ್ಷಗಳ ಹಿಂದೆ ಸ್ಮಾರ್ಟ ಫೋನ್ ಗಳನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೂಲಕ ಇಲಾಖೆ ವಿತರಿಸಿದ್ದು, ಮೊಬೈಲ್ ಮೂಲಕ ಕೇಂದ್ರದ ವ್ಯಾಪ್ತಿಯಲ್ಲಿನ ಫಲಾನುಭವಿಗಳ ನೋಂದಣಿ ( ಕುಟುಂಬ ಸರ್ವೆ,ಆಹಾರ ಹಂಚಿಕೆ, ಪೌಷ್ಟಿಕತೆ ಗುರುತಿಸುವುದು) ಮತ್ತಿತರ ಹಲವು ಸೇವೆಗಳನ್ನು ಪೋಷಣ್ ಟ್ರ್ಯಾಕ್ ಆಪ್ ಮೂಲಕ ಅಂಗನವಾಡಿಗೆ ಸಂಬಂಧಿಸಿದ ಎಲ್ಲ ಕಾರ್ಯ ಚಟುವಟಿಕೆ ಗಳನ್ನು ನೋಂದಾಯಿಸುವಂತೆ ಸೂಚಿಸಲಾಗಿದ್ದು ಈ ಪ್ರಕಾರವಾಗಿ ಇದುವರೆಗೂ ಕರ್ತವ್ಯ ನಿರ್ವಹಿಸಲಾಗಿದೆ ಎಂದು ತಿಳಿಸಿದ ಅವರು ಪ್ರಸ್ತುತ ಇಲಾಖೆ ವಿತರಿಸಿದ ಮೊಬೈಲ್ ಮೂಲಕ ಆನ್‌ಲೈನ್ ಕರ್ತವ್ಯ ನಿರ್ವಹಿಸಲು ಕಡಿಮೆ ಜಿ.ಬಿ ಡೇಟಾ, ನೆಟ್‌ವರ್ಕ್ ಸಮಸ್ಯೆ, ಕಳಪೆ ಬ್ಯಾಟರಿ, ಕಡಿಮೆ ಗುಣಮಟ್ಟ,ಅಪ್‌ಡೇಟ್ ವರ್ಷನ್ ಮತ್ತಿತರ ತೊಂದರೆಯಿಂದಾಗಿ ತೀವ್ರ ಸಮಸ್ಯೆಯನ್ನು ಕಾರ್ಯಕರ್ತೆಯರು ಎದುರಿಸುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಯ ಗಂಭೀರತೆಯನ್ನು ಅರಿತು ಇಲಾಖೆ ಮೊಬೈಲ್‌ಗಳನ್ನು ವಾಪಾಸ್ ಪಡೆಯುವಂತೆ ನಿರ್ದೇಶಕರು ಆದೇಶ ನೀಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಪರಿಹರಿಸುವಂತೆ ಅವರು ಆಗ್ರಹಿಸಿದ ಅವರು, ಕನಿಷ್ಠ ವೇತನ ನಿಗದಿಗೊಳಿಸಿ ಕೂಡಲೇ ಜಾರಿಗೊಳಿಸುವಂತೆ, ಇಎಸ್‌ಐ, ಪಿಎಫ್, ಪಿಂಚಣಿ, ಎಕ್ಸ್‌ಗ್ರೇಷಿಯಾ ಮತ್ತಿತರ ಸೌಲಭ್ಯ ವಿತರಿಸುವಂತೆ, ಏಕ ರೂಪದ ಸೇವಾ ನಿಯಮ ರೂಪಿಸುವ ಜತೆಗೆ ವಿವಿಧ ಬೇಡಿಕೆ ಈಡೇರಿಕೆಗೆ ಅವರು ಒತಾತಿಯಿಸಿದರು.
ನಂತರದಲ್ಲಿ ಎಲ್ಲ ಕಾರ್ಯಕರ್ತೆಯರು ಸಾಮೂಹಿಕ ವಾಗಿ ಮೊಬೈಲ್‌ನ್ನು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಮೂಲಕ ಇಲಾಖೆಗೆ ವಾಪಾಸ್ ನೀಡಿದರು.
ಈ ಸಂಧರ್ಬದಲ್ಲಿ ಸಮಿತಿಯ ತಾ. ಅಧ್ಯಕ್ಷೆ ಶ್ಯಾಮಲಾ, ಕಾರ್ಯದರ್ಶಿ ಆರತಿ, ಖಜಾಂಚಿ ದೀಪಾ, ನೀಲಮ್ಮ, ಅನಿತಾ, ಶಿಲ್ಪಾ, ವಿಜಯಕುಮಾರಿ, ಗಿರಿಜಮ್ಮ ಮತ್ತಿತರರು ಹಾಜರಿದ್ದರು.