ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಮತ್ತೆ ಫೀಲ್ಡಿಗಿಳಿದು ಸದ್ದು ಮಾಡಿದ ಇನ್ಸ್‌ಪೆಕ್ಟರ್ ದೇವರಾಜ್…

Share Below Link

ಶಿವಮೊಗ್ಗ : ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಹಲವು ಅಡೆತಡೆಗಳ ದೂರು ಬಂದ ಹಿನ್ನಲೆ ಯಲ್ಲಿ ಇಂದು ಸಂಚಾರಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ನೇತೃತ್ವದಲ್ಲಿ ಸಂಚಾರಿ ಪೊಲೀಸರ ತಂಡ, ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ.
ದುರ್ಗಿಗುಡಿ ಮುಖ್ಯರಸ್ತೆ ಯಲ್ಲಿ ಸಿಂಗರ್ ಶೋರೂಂ ವೃತ್ತ ದಿಂದ ಗೋಪಿವೃತ್ತದವರೆಗೆ ಏಕಮುಖ ಸಂಚಾರವಿದ್ದು ಬ್ಯಾರಿಕೇಡ್ ಹಾಕಿ ಫಲಕಗಳನ್ನು ಹಾಕಿದ್ದರೂ ಸಹ ನಿರಂತರವಾಗಿ ವಾಹನ ಸವಾರರು ನಿಯಮ ಉಲ್ಲಂಘಿಸುತ್ತಿದ್ದು, ಇನ್ನು ಮುಂದೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಫುಟ್‌ಪಾತ್ ಮೇಲೆ ವ್ಯಾಪಾರಸ್ಥರು ಯಾವುದೇ ರೀತಿಯ ಅತಿಕ್ರಮಣ ಮಾಡುವ ಹಾಗಿಲ್ಲ. ತಮ್ಮ ಅಂಗಡಿಯ ಬೋರ್ಡ್‌ಗಳನ್ನು ಇಡುವ ಹಾಗಿಲ್ಲ. ಹೂ-ಹಣ್ಣು ವ್ಯಾಪಾರಿಗಳು ಮನಬಂದಂತೆ ತಮ್ಮ ಗಾಡಿಗಳನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದು, ಅದಕ್ಕೆ ಅವಕಾಶವಿಲ್ಲ. ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರದ ದೃಷ್ಠಿಯಿಂದ ತಳ್ಳುವ ಗಾಡಿಗಳಿಗೆ ಶಾಶ್ವತವಾಗಿ ನಿಲ್ಲಲ್ಲು ಅವಕಾಶವಿಲ್ಲ ಎಂದು ಟ್ರಾಫಿಕ್ ನಿರೀಕ್ಷಕರು ತಿಳಿಸಿzರೆ.
ಆಟೋ ಚಾಲಕರು ನಿಗಧಿತ ಜಗದ ಪಾರ್ಕಿಂಗ್ ಮಾಡ ಬೇಕು. ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಪಾಲಿಸಬೇಕು. ಅಲ್ಲದೆ ಕನ್ಸರ್‌ವೆನ್ಸಿಗಳನ್ನು ತಮ್ಮ ದ್ವಿಚಕ್ರ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಬೇಕೆಂದು ತಿಳಿಸಿzರೆ.

Leave a Reply

Your email address will not be published. Required fields are marked *