ಜಿಲ್ಲಾ ಸುದ್ದಿತಾಜಾ ಸುದ್ದಿ

ಇಂದ್ರನ ಗೆಲವು- ದ್ರೌಪದಿಯ ಮಾನಕಾಪಾಡಿದ ಶಕ್ತಿ ರಕ್ಷಾ ಬಂಧನಕ್ಕಿದೆ: ಅನಸೂಯಕ್ಕ

Share Below Link

ಹೊನ್ನಾಳಿ: ಸಂಸಾರದ ನೆಮ್ಮದಿ ಕಳೆದುಕೊಂಡ ಕುಟುಂಬದ ಅನೇಕ ಜನತೆಗೆ ಹಾಗು ಹಿರಿಯ ಜೀವಿಗಳಿಗೆ ಈಶ್ವರಿಯ ವಿಶ್ವವಿದ್ಯಾಲ ಯಗಳು ಒಂದು ವರದಾನ ಹಾಗು ಆಶಾದಾಯಕ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಶಾಂತನಗೌಡ ಹೇಳಿದರು.
ಅವರು ಹೊನ್ನಾಳಿ ಈಶ್ವರಿಯ ವಿದ್ಯಾಲಯದಲ್ಲಿ ನಡೆದ ಪ್ರಕಾಶಮಣಿಯವರ ೧೬ನೇ ಪುಣ್ಯಸ್ಮೃತಿ ಹಾಗು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದರು.
ತಾವು ಈಶ್ವರಿ ವಿದ್ಯಾಲಯ ಕೂಲಂಬಿ ಹಾಗು ಮಲೆಬೆನ್ನೂರು ಗ್ರಾಮದಲ್ಲಿ ನಡೆಸುವ ಸಮಾರಂಭ ದಲ್ಲಿ ಪಾಲ್ಗೊಂಡಿದ್ದು ಆ ಸಮಾರಂಭಗಳು ಜನತೆಗೆ ಹೆಚ್ಚು ಅರ್ಥಗರ್ಬಿತವಾಗಿದ್ದವು ಎಂದ ಅವರು, ತಮ್ಮ ಕುಟುಂಬದೊಂದಿಗೆ ೧೨ ವರ್ಷದ ಕೆಳಗೆ ಮೌಂಟ್ ಅಬುಗೆ ಭೇಟಿ ನೀಡಿದ್ದು ಆಕ್ಷಣವನ್ನು ಸ್ಮರಿಸಿದ ಶಾಸಕರು, ಅಲ್ಲಿನ ದಿನ ನಿತ್ಯದ ಸಂಪ್ರದಾಯ ಸಭೆ ಸಮಾರಂಭಗಳು ವಿಶೇಷವಾಗಿ ಪರಿಣಾಮತರುವಂತಾಗಿವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಶಿವಮೊಗ್ಗದ ಈಶ್ವರಿಯ ಸಂಚಾಲಕರಾದ ರಾಜಯೋಗಿನಿ ಅನುಸೂಯಕ್ಕನವರು ಮಾತನಾಡಿ, ರಾಕಿ ಹಬ್ಬದ ಮಹಿಮೆ ಮತ್ತು ಅದರ ಅಗತ್ಯ ಕಾರ್ಯಗಳನ್ನು ವಿವರಿಸಿ ರಾಕಿಗೆ ಅನೇಕ ಪೌರಾಣಿಕ, ಐತಿಹಾಸಿಕ ಸಂದರ್ಭಗಳು ಸಾಕ್ಷಿಯಾಗಿವೆ ಎಂದರು.
ಅಸುರನ ವಿರುದ್ಧ ಇಂದ್ರನ ಗೆಲುವು, ಸಂಕಷ್ಟದ ದಿನಗಳಲಿದ್ದ ದ್ರೌಪದಿಗೆ ಕೃಷ್ಣನಿಂದಾದ ಬಟ್ಟೆಯ ನೆರವು ಹಾಗು ಯುದ್ಧದಲ್ಲಿ ಸೊತಿದ್ದ ಅಲೆಗ್ಸಾಂಡರ್‌ಗೆ ಗೆದಿದ್ದ ರಾಜನಿಂದ ಪತ್ನಿಯ ಮೂಲಕ ಜೀವದಾನ ಸಿಗುವಲ್ಲಿ ನೆರವಾಗಿದ್ದು ಇದೇ ರಕ್ಷಬಂಧನವಾಗಿತ್ತು. ಇಂದಿಗೂ ಮಹಿಳೆಯರಿಗೆ ದೈವಿಶಕ್ತಿ ಹೆಚ್ಚಿಸಿಕೊಳ್ಳಲು ಹಾಗೂ ತಾನು ಸಶಕ್ತಳಾಗಲು, ಸಬಲೆಯಾಗುವಲ್ಲಿ ರಕ್ಷ ಬಂಧನದ ಅವಶ್ಯಕತೆ ಹೆಚ್ಚಿದೆ ಎಂದರು.
ಹೊನ್ನಾಳಿ ಬ್ರಹ್ಮಕುಮಾರಿ ಜ್ಯೋತಿಅಕ್ಕ ಅವರು ಮಾತನಾಡಿ ರಕ್ಷಾ ಬಂಧನವು ಮಹಿಳೆಯರನ್ನ ಸ್ವತಂತ್ರರನ್ನಾಗಿಸುವುದಲ್ಲದೇ, ಅನೇಕ ಬಂಧನಗಳಿಂದ ಮುಕ್ತಗೊಳಿ ಸುವ ಶಕ್ತಿಹೊಂದಿದೆ ಎಂದರು.
ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಹೆಚ್‌ಎ ಉಮಾಪತಿ, ಬ್ರಹ್ಮಕುಮಾರಿ ನಿಂಗಣ್ಣ, ಹೊನ್ನಾಳಿ ಪುರಸಭೆ ಸದಸ್ಯರಾದ ಸುಮಾ, ಡಾ| ಕೆಂಚಪ್ಪ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಮಹೇಶ್ವರಪ್ಪ, ಚಿಲೂರು eನವಾಹಿನಿ ವಿದ್ಯಾ ಸಂಸ್ಥೆ ಪ್ರಾಂಶುಪಾಲ ರವಿಕುಮಾರ, ದಾಗಿನಕಟ್ಟೆ ಬಸವನಗೌಡ ಇನಿತರರಿದ್ದರು.