ಇತರೆಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಇಂದಿರಾ ಕ್ಯಾಂಟೀನ್: ಗುಣಮಟ್ಟದ ಆಹಾರ ನೀಡಲು ಆಗ್ರಹ…

Share Below Link

ಶಿವಮೊಗ್ಗ: ಎ ವರ್ಗದ ಜನರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಬಡವರ ಹಸಿವು ನೀಗಿಸಲು ಹಿಂದಿನ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಸಿದ್ಧರಾ ಮಯ್ಯ ಅವರು ಜರಿಗೆ ತಂದ ಇಂದಿರಾ ಕ್ಯಾಂಟೀನ್ ಯೋಜನೆ ಯನ್ನು ಬಿಜೆಪಿ ಸರ್ಕಾರ ಸಂಪೂ ರ್ಣ ನಿರ್ಲಕ್ಷ್ಯ ಮಾಡಿತ್ತು ಎಂದು ಕಾಂಗ್ರೆಸ್ ಜಿಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿzರೆ.
ಅವರು ಇಂದು ನಗರದ ಬಿ.ಹೆಚ್. ರಸ್ತೆಯ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಆಹಾರ ಸೇವನೆ ಮಾಡಿ ಅಲ್ಲಿನ ಗುಣಮಟ್ಟ ಮತ್ತು ಶುದ್ಧತೆ ವೀಕ್ಷಿಸಿದ ಬಳಿಕ ಸುದ್ದಿಗಾರರೊ ಂದಿಗೆ ಮಾತನಾಡಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಮೂಲ ಸೌಲಭ್ಯ ಸಿಗಬೇಕೆಂಬ ದೃಷ್ಠಿಯಿಂದ ಆಹಾರ ಭದ್ರತೆ ಕಾನೂನು ಜರಿಗೆ ತಂದಿದ್ದು, ಸಂವಿಧಾನದ ಪ್ರಕಾರ ಆಹಾರ, ಶಿಕ್ಷಣ ಮತ್ತು ಉದ್ಯೋಗ ನೀಡ ಬೇಕೆಂಬ ದೃಷ್ಟಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಅನೇಕ ಯೋಜನೆ ಜರಿಗೆ ತಂದಿತ್ತು. ಮೋದಿ ಸರ್ಕಾರ ಎಲ್ಲವನ್ನು ಸ್ಥಗಿತ ಗೊಳಿಸಿ ಕಾರ್ಪೊರೇಟ್ ಕಂಪನಿ ಗಳಿಗೆ ಮಣೆ ಹಾಕಿದೆ. ಬಡವರ ಹಸಿವು ನೀಗಿಸುವ ಯೋಜನೆ ಗಳನ್ನು ನಿರ್ಲಕ್ಷಿಸಿ ಹಂತ ಹಂತವಾಗಿ ನಿಲ್ಲಿಸಿದೆ ಎಂದು ದೂರಿದರು.
ಹೊಸದಾಗಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಬಜೆಟ್ ನಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಅಭಿವೃದ್ಧಿಗೆ ೧೦೦ ಕೋಟಿ ರೂ. ಬಿಡುಗಡೆ ಮಾಡಿದೆ. ಪ್ರಸ್ತುತ ಇಂದಿರಾ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಆಹಾರ ಕೊಡು ತ್ತಿಲ್ಲ. ನಿಗದಿತ ಪ್ರಮಾಣದಲ್ಲಿ ಆಹಾರ ಕೂಡ ನೀಡುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಇದನ್ನೆಲ್ಲ ಗಮನಿಸಿ ಕೂಡಲೇ ನಿರ್ವಹಣೆ ಹೊತ್ತ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಜಿಧಿಕಾರಿಗಳಿಗೂ ಮನವಿ ಮಾಡಿದ್ದೇನೆ ಎಂದರು.
ಆಯುಕ್ತರು ಈ ಇಂದಿರಾ ಕ್ಯಾಂಟೀನ್ ಗೆ ೧೨ ಲಕ್ಷ ರೂ. ಮಂಜೂರು ಮಾಡಿzರೆ. ಮೂಲ ಸೌಲಭ್ಯಗಳನ್ನು ಅಭಿವೃದ್ದಿ ಪಡಿಸಿ ಉತ್ತಮ ಗುಣಮಟ್ಟದ ಆಹಾರ ನೀಡಬೇಕೆಂದು ಆಗ್ರಹಿಸಿ ದರು.ಗ್ಯಾರಂಟಿ ನೀಡಿದ್ದಂತೆ ಕಾಂಗ್ರೆಸ್ ಸರ್ಕಾರ ಎ ಗ್ಯಾರಂ ಟಿಗಳ ಅನುಷ್ಠಾನಕ್ಕೆ ಬದ್ಧವಾಗಿದ್ದು, ಈಗಾಗಲೇ ಶಕ್ತಿ ಮತ್ತು ಗೃಹ ಜ್ಯೋತಿ ಯೋಜನೆ ಯಶಸ್ವಿಯಾ ಗಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವ ನಿಧಿ ಮೂರೂ ಯೋಜನೆ ಗಳನ್ನು ಕೂಡ ಶೀಘ್ರದ ಜರಿಗೆ ತರಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಲೀಂ ಪಾಷಾ, ಸ್ಟೆ ಮಾರ್ಟಿನ್, ಪ್ರೇಮಾ ಎನ್. ಶೆಟ್ಟಿ, ಪ್ರವೀಣ್ ಕುಮಾರ್, ಶಮೀನಾ ಬಾನು, ಕುಮಾರಸ್ವಾಮಿ ಮೊದಲಾದವರು ಇದ್ದರು.