ಭಾರತದ ನಿಜವಾದ ಅಭಿವೃದ್ಧಿ ಹಳ್ಳಿಗಳನ್ನು ಅವಲಂಬಿಸಿದೆ..
ಶಂಕರಘಟ್ಟ: ಎನ್ಎಸ್ಎಸ್ ಕಲ್ಪಿನೆಯೇ ಅದ್ಭುತ. ತರಗತಿಯಿಂದ ಹೊರಗೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಬದುಕನ್ನು ಅರ್ಥೈಸುವ ಬಹು ದೊಡ್ಡ ವೇದಿಕೆ ಇದಾಗಿದ್ದು, ಗಾಂಧಿ ಆಶಯಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಯೋಜನೆಯೂ ಹೌದು. ಅವರ ದೃಷ್ಟಿಯಲ್ಲಿ ನಮಗೆ ಬಂದಿರುವುದು ರಾಜಕೀಯ ಸ್ವಾತಂತ್ರ ಮಾತ್ರ. ಸಾಮಾಜಿಕ, ನೈತಿಕ, ಆರ್ಥಿಕ ಸ್ವಾತಂತ್ರ ಇನ್ನೂ ನಮಗೆ ಬಂದಿಲ್ಲ. ಎಂದು ಕರ್ನಾಟಕ ಗಾಂಧಿ ಭವನದ ಅಧ್ಯಕ್ಷ ನಾಡೋಜ ವೋಡೆ ಪಿ.ಕೃಷ್ಣ ನುಡಿದರು.
ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯು ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಕಾರ್ಯಕ್ರಮಾಧಿಕಾರಿಗಳಿಗೆ ಏರ್ಪಡಿಸಿದ ತರಬೇತಿ ಕಾರ್ಯಾಗಾರ ಉದ್ಘಾಟಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಬಂದು ೭೮ ವರ್ಷಗಳು ಸಂದಿವೆ. ಆದರೂ ಅನಕ್ಷರತೆ, ಬಡತನ, ಅeನದಿಂದ ನಾವು ಬಿಡುಗಡೆ ಹೊಂದಿಲ್ಲ ಎಂದು ವಿಷಾದಿಸಿದರು.
ಭಾರತದ ನಿಜವಾದ ಅಭಿವೃದ್ಧಿ ಹಳ್ಳಿಗಳನ್ನು ಅವಲಂಬಿಸಿದೆ. ಈ ದೇಶದ ಕಟ್ಟ ಕೆಡೆಯ ಮನುಷ್ಯನು ಸ್ವಾವಲಂಬಿ ಯಾಗಬೇಕು. ಹಳ್ಳಿಗಳು ವಾಸಕ್ಕೆ ಯೋಗ್ಯವಂತಗಬೇಕು. ಸಮುದಾಯಿಕ ಸಾಮಾಜ ಮತ್ತು ಅಹಿಂಸಾತ್ಮಕ ಸಮಾಜ ನಿರ್ಮಾಣವು ಗಾಂಧಿಯವರ ಕನಸು. ಅದನ್ನು ರಾಷ್ಟ್ರೀಯ ಸೇವಾ ಯೋಜನೆ ಸಕರಾಗೊಳಿಸಬೇಕಿದೆ. ಎಂದರು.
ಮುಖ್ಯ ಅತಿಥಿಗಳಾಗಿ ಭಾಗವ ಹಿಸಿದ ಕರ್ನಾಟಕ ಎನ್ಎಸ್ಎಸ್ ರಾಜ್ಯ ಕೋಶದ ಮಾಜಿ ಅಧಿಕಾರಿ ಡಾ. ಕೆ. ಬಿ. ಧನಂಜಯ ಅವರು ಮಾತನಾಡಿ, ಇಂದು ಭಾವನಾತ್ಮಕ ಸಂಬಂಧ ಗಳನ್ನು ನಾವು ಕಳೆದು ಕೊಳ್ಳುತ್ತಿ ದ್ದೇವೆ. ಎನ್ಎಸ್ಎಸ್ ಯಾವಾಗಲೂ ಮನುಷ್ಯ ಸಂಬಂಧಗಳನ್ನು ಕಾಪಿಡುವ ಕೆಲಸ ಮಾಡುತ್ತಿದೆ ಎಂದರು.
ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಆರ್. ತಿಮ್ಮರಾ ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಜಿ. ಬಿ ಶಿವರಾಜು , ಪ್ರೊ. ಕೆ. ಎಂ. ವೀರಯ್ಯ, ಡಾ. ಶುಭಾ ಮರವಂತೆ ಇನ್ನಿತರರಿದ್ದರು.


