ಜಿಲ್ಲಾ ಸುದ್ದಿತಾಜಾ ಸುದ್ದಿ

ಯೋಗ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ…

Share Below Link

ಹರಿಹರ : ಸನಾತನ ಪರಂಪರೆಯ ಯೋಗವು ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಶ್ರೀಮತಿ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಹಾಗೂ ಪಪೂ ಮಹಿಳಾ ಮಹಾವಿದ್ಯಾಲಯಗಳು ಮತ್ತು ಎನ್.ಎಸ್.ಎಸ್.ಘಟಕಗಳು ಆಯೋಜಿಸಿದ್ದ ವಿಶ್ವ ಯೋಗ ದಿನಾಚನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಿರಿಯಮ್ಮ ಮಹಾ ವಿದ್ಯಾಲ ಯದಲ್ಲಿ ಆಡಳಿತ ಮಂಡಳಿ, ಕಾಲೇಜಿನ ಸಿಬ್ಬಂದಿ ಯವರು ವಿದ್ಯಾರ್ಥಿನಿಯರಿಗೆ ಯೋಗ ದಂತಹ ಉತ್ತಮ ಸಂಸ್ಕಾರಗಳನ್ನು ಕಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ದಾ.ಜಿ. ಬಿ. ಗಂಗಾಧರಪ್ಪ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ಪಪೂ ಕಾಲೇಜಿನ ಪ್ರಾಚಾರ್ಯೆ ಪ್ರೊ ಸುಜತ ಹಾಗೂ ಎರಡೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು, ಏನ್.ಎಸ್. ಎಸ್. ಘಟಕ ಕಾರ್ಯಕ್ರಮ ಅಧಿಕಾರಿ ಹೆಕ್.ಎಂ. ಗುರುಬಸವ ರಾಜಯ್ಯ ಉಪಸ್ಥಿತರಿದ್ದರು.
ಹರಿಹರದ ಧನ್ವಂತರಿ ಪತಂಜಲಿ ಯೋಗ ಕೇಂದ್ರದ ನಿರಂಜನ್ ಎನ್. ಮೀನಾಕ್ಷಿ ಏನ್. ಜ್ಯೋತಿ ಆರ್. ಸಾನ್ವಿ ಎನ್ ಕರಿಬಸಪ್ಪ ಕಂಚಿಕೇರಿ, ಶಾಂತರಾಜ್ ಕೆಂಚನಹಳ್ಳಿ ಯೋಗ ತರಬೇತಿ ನೀಡಿದರು.