ಜಿಲ್ಲಾ ಸುದ್ದಿತಾಜಾ ಸುದ್ದಿ

ಶ್ರೇಷ್ಠ ಸಂವಿಧಾನ ಹೊಂದಿದ ರಾಷ್ಟ್ರ ಭಾರತ: ಡಿಸಿ

Share Below Link

ಶಿವಮೊಗ್ಗ : ವಿಶ್ವದ ಅತಿ ದೊಡ್ಡ ಪ್ರಜಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿರುವ ಪ್ರಗತಿಶೀಲ ರಾಷ್ಟ್ರ ಭಾರತವು ಅತಿದೊಡ್ಡ ಹಾಗೂ ಶ್ರೇಷ್ಟ ಸಂವಿಧಾನವನ್ನು ಹೊಂದಿದ್ದು, ಎಲ್ಲಾ ವರ್ಗದ ಜನರ ಆಶೋತ್ತರಗಳಿಗೆ ಪೂರಕ ವಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾ ಖೆಗಳ ಆಶ್ರಯದಲ್ಲಿ ಡಿಸಿ ಕಚೇರಿ ಆವರಣದಲ್ಲಿ ಅಂತರ ರಾಷ್ಟ್ರೀಯ ಪ್ರಜಪ್ರಭುತ್ವ ದಿನಾಚರಣೆ ಅಂಗ ವಾಗಿ ಏರ್ಪಡಿಸಲಾಗಿದ್ದ ಸಂವಿ ಧಾನದ ಪೀಠಿಕೆ ಓದುವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾ ಡುತ್ತಿದ್ದರು.
ಪ್ರತಿ ವಿಷಯಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರಜಪ್ರಭುತ್ವದ ಆಶಯವನ್ನು ಎತ್ತಿಹಿಡಿಯಬೇಕು ಎಂದ ಅವರು, ಈ ದೇಶದ ಪ್ರತಿ ಯೊಬ್ಬ ಪ್ರಜೆಯೂ ಸಂವಿಧಾನದ ಪೀಠಿಕೆಯನ್ನು ಮಾತ್ರವಲ್ಲ ಪೂರ್ಣ ಸಂವಿಧಾನವನ್ನೇ ಓದುವ ಮೂಲಕ ಅರ್ಥೈಸಿಕೊಂಡು, ಸಂವಿಧಾನದ ಆಶಯಕ್ಕೆ ಪೂರಕ ವಾಗಿ ನಡೆದು ಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ವಿಶ್ವದಲ್ಲಿ ಭಾರತ ಅತಿದೊಡ್ಡ ಪ್ರಜಪ್ರಭುತ್ವ ರಾಷ್ಟ್ರವಾಗಿ, ವಿಶ್ವಗುರುವಾಗಿ ಗುರುತಿಸ ಲಾಗುತ್ತಿರು ವುದನ್ನು ಹಾಗೂ ರಾಷ್ಟ್ರದ ನಾಯಕರ ಹಿತಚಿಂತನೆಗಳಿಂದ ವಿಶ್ವದ ಗಮನ ಸೆಳೆದು ಜನಮನ್ನಣೆ ಪಡೆದಿರು ವುದು ಎಲ್ಲರೂ ಸಂಭ್ರಮಿಸ ಬೇಕಾದ ಸಂಗತಿ ಎಂದರು.
ಇಡೀ ರಾಷ್ಟ್ರಕ್ಕೆ ಶಕ್ತಿತುಂಬಲು ಪ್ರಜಪ್ರಭುತ್ವದ ಶಕ್ತಿಯನ್ನು ಬಲಪಡಿಸಲು ಇರುವ ಸಾಧನ ಎಂದರೆ ಸಂವಿಧಾನ. ಅದಕ್ಕಾಗಿ ಅಂಬೇಡ್ಕರ್ ಅವರ ಕೊಡುಗೆ ಯನ್ನು ಎಲ್ಲರೂ ಮೆಚ್ಚಲೇಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಮಹಾನಗರ ಪಾಲಿಕೆಯ ಆವರಣದ ಡಾ|| ಅಂಬೇಡ್ಕರ್ ಅವರು ಪುತ್ಥಳಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ಗಳು ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಂತರ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಕಲಾತಂಡ ಗಳೊಂದಿಗೆ ಅಂಬೇಡ್ಕರ್‌ರವರ ಭಾವಚಿತ್ರದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಡಿಸಿ ಕಚೇರಿಯ ಆವರಣದಲ್ಲಿ ಸಂಪನ್ನ ಗೊಂಡಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆ ಶಕ ಮಲ್ಲೇಶಪ್ಪ, ಮೇಯರ್ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.