ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ ಉದ್ಘಾಟನೆ …

Share Below Link

ಶಿವಮೊಗ್ಗ : ವಿನ್ಯಾಸ ಕೌಶಲ್ಯಾಭಿವೃದ್ಧಿಯ ಅಂತರರಾಷ್ಟ್ರೀಯ ಮಟ್ಟದ ತರಬೇತಿ ನೀಡುತ್ತಿರುವ ನೆಲೆಂಬೋ ಸಂಸ್ಥೆಯ ಪ್ರಾಂಚೈಸಿ ಪಡೆದ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್ (ಐಎನ್‌ಎಸ್‌ಡಿ) ಕಾಲೇಜನ್ನು ಶಾಸಕ ಎಸ್. ಎನ್. ಚನ್ನಬಸಪ್ಪ ಉದ್ಘಾಟಿಸಿದರು.


ಮಲೆನಾಡು ಭಾಗದಲ್ಲಿ ಇಂತಹದೊಂದು ಶಿಕ್ಷಣ ಸಂಸ್ಥೆ ಆರಂಭವಾಗಿರುವುದು ಶ್ಲಾಘನೀಯ. ಇದು ಸಾವಿರಾರು ಪ್ರತಿಭಾನ್ವಿತರಿಗೆ ಬದುಕು ಕಟ್ಟಿಕೊಡಲಿ ಎಂದು ಹಾರೈಸಿದರಲ್ಲದೇ, ಹಿಂದಿನ ಪತ್ರಿಕಾ ಜಗತ್ತು ಮೊಳೆ ಜೋಡಿಸಿ ಬೆಳೆದಿತ್ತು, ಈಗ ಅದು ಆಧುನಿಕವಾಗಿದೆ. ಎ ರಂಗಗಳಲ್ಲೂ ಹೊಸತನದ ಆವಿಷ್ಕಾರಗಳೇ ಈ ಕೌಶಲ್ಯದ ಕಲಿಕೆಯಲ್ಲಿ ಅಡಗಿದೆ ಎಂದರು.
ಪರಿಸರವಾದಿ ಪ್ರೊ. ಡಿ. ಎಂ. ಕುಮಾರಸ್ವಾಮಿ ಮಾತನಾಡಿ, ಉದ್ಯೋಗದಲ್ಲಿ ತಾಂತ್ರಿಕತೆ, ಕೌಶಲ್ಯ ಅನಿವಾರ್ಯ. ಯುವ ಜನತೆಗೆ ಬೇರೆ ಬೇರೆ ಕೌಶಲ್ಯಗಳನ್ನ ಕಲಿಯ ಬೇಕು. ಆಗ ನಮ್ಮಲ್ಲಿ ಬೇಕಾದಷ್ಟು ಕೆಲಸಗಳು ಹುಟ್ಟಿಕೊಳ್ಳುತ್ತವೆ. ಆದರೆ, ಅದಕೆ ಪೂರಕವಾದ ಕೌಶಲ್ಯದ ಯುವಕರಿಲ್ಲ ಎನ್ನುತ್ತಿರು ವುದು ನಮ್ಮ ಕೌಶಲ್ಯದ ಕೊರತೆಯಿಂದ ಎಂದರು.


ಮನೋವೈದ್ಯೆ ಡಾ.ಕೆ.ಎಸ್. ಪವಿತ್ರಾ ಅವರು ಮಾತನಾಡಿ, ಕೌಶಲ್ಯದ ಕಾರ್ಯ ನಮ್ಮ ನಡುವಿನ ಶ್ರಮ ಕುಗ್ಗಿಸಿ, ವಿಶೇಷತೆ ಮೂಡಿಸುತ್ತದೆ. ಮಾನಸಿಕವಾದ ಸಿದ್ದತೆಗಳ ಮೂಲಕ ಕೌಶಲ್ಯ ಕಲಿಯಲು ಸಾಧ್ಯ ಎಂದರು.
ಸಂಸ್ಥೆಯ ಪಾಲುದಾರ ಅರವಿಂದ ಪಿ.ಎ. ಪ್ರಾಸ್ತಾವಿಕವಾಗಿ ಮಾತನಾಡಿ, ಇದೊಂದು ವಿಶಿಷ್ಟವಾದ ತರಗತಿಯಾಗಿದೆ. ಇಲ್ಲಿ ಫ್ಯಾಷನ್, ಇಂಟಿರಿಯರ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಬ್ಯೂಟಿ ಅಂಡ್ ಮೇಕಪ್‌ಗೆ ಸಂಬಂಧಿಸಿದಂತೆ ವಿಶೇಷ ತರಬೇತಿಯನ್ನು ನೀಡಲಾಗುವುದು ಎಂದರು.


ಎಸ್‌ಎಸ್‌ಎಲ್‌ಸಿ ನಂತರದ ಡಿಪ್ಲಮೋ ಕೋರ್ಸಿಗೆ ಇದನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಪಿಯುಸಿ ಆದ ನಂತರ ಯಾವುದೇ ವಿಭಾಗದ ಮಕ್ಕಳು ೪ ಅಥವಾ ೩ ವರ್ಷದ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬಹುದು. ಪದವಿ ಪಡೆದವರು ಕೂಡ ಎಂಡಿಇಎಸ್ ಕೋರ್ಸಿಗೆ ಸೇರಬಹುದು. ಇದು ೨ ವರ್ಷದ ಕೋರ್ಸ್ ಆಗಿರುತ್ತದೆ. ಮೇಲಿನ ಎ ಕೋರ್ಸುಗಳನ್ನು ಪ್ರತ್ಯೇಕ ಭಾಗಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಇವೆಲ್ಲವೂ ಉದ್ಯೋಗ ಆಧಾರಿತ ಕೋರ್ಸು ಗಳಾಗಿರುತ್ತವೆ. ಹೆಚ್ಚಿನ ವಿವರಕ್ಕೆ ಮೊ. ೭೮೯೨೬೭೩೦೩೪ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸಂಸ್ಥೆಯ ಪಾಲುದಾರರಾದ ಜಿ. ಪದ್ಮನಾಭ್ ಅಧ್ಯಕ್ಷತೆ ವಹಿಸಿದ್ದರು.
ಪಾಲುದಾರರಾದ ಲತಾ ಕೆ.ಆರ್. ರವೀಂದ್ರ, ಮಂಗಳಾ ಜಗದೀಶ್, ಸಲಹೆಗಾರರಾದ ರವೀಂದ್ರ, ಜಗದೀಶ್ ಉಪಸ್ಥಿತರಿದ್ದರು. ಕೃಷ್ಣಾನಂದ ಕಾರ್ಯಕ್ರಮ ನಿರೂಪಿಸಿದರು.