ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟನೆ
ಸಾಗರ: ನಾವು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕು ಎಂದು ಕುವೆಂಪು ವಿವಿ ಉಪಕುಲಪತಿ ಪ್ರೊ. ಬಿ.ವಿ.ವೀರಭದ್ರಪ್ಪ ಹೇಳಿದರು.
ಇಲ್ಲಿನ ಎಲ್ ಬಿ ಮತ್ತು ಎಸ್ ಬಿ ಎಸ್ ಮಹಾವಿದ್ಯಾಲಯದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿ, ನಮ್ಮಲ್ಲಿ ಕೇವಲ ಶೇ. ೨೩ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆದವರಿzರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶೇ. ೧೦೦ರಷ್ಟು ಉನ್ನತ ಶಿಕ್ಷಣ ಪಡೆದುಕೊಂಡವರಿzರೆ. ನಮ್ಮ ದೇಶದ ವಿಶ್ವವಿದ್ಯಾಲಯಗಳು ತಮ್ಮ ಜವಾಬ್ದಾರಿಯನ್ನು ಸಮರ್ಥ ವಾಗಿ ನಿರ್ವಹಿಸಬೇಕು. ಪ್ರತಿಯೊ ಬ್ಬರೂ ಉನ್ನತ ಶಿಕ್ಷಣ ಪಡೆದು ಕೊಳ್ಳಬೇಕು. ಉನ್ನತ ಶಿಕ್ಷಣದಿಂದ ದೊಡ್ಡ ಹುz ಅಲಂಕರಿಸಬಹುದು ಎಂದರು.
೧೯೭೫-೭೮ರಲ್ಲಿ ಈ ಕಾಲೇಜಿ ನಲ್ಲಿ ಓದಿರುವುದನ್ನು ನೆನಪು ಮಾಡಿಕೊಂಡ ಅವರು, ಆಗ ಕಾಲೇಜಿನಲ್ಲಿ ಯಾವುದೇ ಮೂಲ ಸೌಕರ್ಯ ಇರಲಿಲ್ಲ. ಕನಿಷ್ಠ ಸೌಲಭ್ಯ ಗಳನ್ನು ಬಳಸಿಕೊಂಡೇ ಕಾಲೇಜು ದೊಡ್ಡ ಹೆಸರು ಮಾಡಿತ್ತು. ಲಾಲ್‌ಬಹದ್ದೂರು ಶಾಸಿ ಹೆಸರಿನ ಈ ಕಾಲೇಜು ಶೈಕ್ಷಣಿಕ ವಲಯದಲ್ಲಿ ಛಾಪು ಮೂಡಿಸಿತ್ತು. ಶಿಕ್ಷಣದ ಆರಾಧಕನಾದ ನಾನು ನಾಲ್ಕು ದಶಕಗಳ ಕಾಲ ವಿವಿಧ ವಿವಿಯಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ಈ ಸಂಸ್ಥೆಗೆ ನಾನು ಚಿರಋಣಿ ಎಂದರು.
ವಿದೇಶದಲ್ಲಿ ರೈತರೂ ಪದವಿಧರರಾಗಿzರೆ. ಆದರೆ ನಮ್ಮಲ್ಲಿ ಈ ಸಂಖ್ಯೆ ಕಡಿಮೆ. ಬದಲಾದ ಕಾಲಘಟ್ಟದಲ್ಲಿ ಅವಕಾಶ ಗಳು ಬಹಳಷ್ಟಿವೆ. ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿ ಕೊಳ್ಳುತ್ತಿzರೆ. ಕುವೆಂಪು ಹೇಳಿದಂತೆ ಜಗದಗಲ ಪ್ರತಿಭೆಗಳು ಬೆಳಗಬೇಕು. ಬಡತನಲ್ಲಿದ್ದರೂ ಡಾ. ಅಂಬೇಡ್ಕರ್ ವಿದೇಶದಲ್ಲೂ ಓದಿ ೧೪ ಪದವಿ ಪಡೆದುಕೊಂಡಿದ್ದರು. ಸಾಮಾಜಿಕ ಮೌಲ್ಯ, ಆರ್ಥಿಕ ಮೌಲ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ವಿದೇಶ ದಲ್ಲೂ ವಿದ್ಯಾರ್ಥಿ ಸಂಘಟನೆಗಳು ಬಲಿಷ್ಠವಾಗಿವೆ. ಈ ಕಾಲೇಜಿನಲ್ಲಿ ಆರಂಭಗೊಂಡ ವಿದ್ಯಾರ್ಥಿ ಸಂಘಟನೆ ಶೈಕ್ಷಣಿಕ ಉನ್ನತಿಗೆ ಹೆಚ್ಚು ಶ್ರಮಿಸಲಿ ಎಂದರು.
ಸಂಘದ ಲಾಂಛನ ಬಿಡುಗಡೆ ಮಾಡಿದ ಬೆಂಗಳೂರಿನ ಸಿಎನ್‌ಎನ್ ಸುದ್ದಿ ಸಂಸ್ಥೆ ಮುಖ್ಯಸ್ಥ ಡಿ.ಪಿ. ಸತೀಶ್ ಮಾತನಾಡಿ, ವಿದೇಶಕ್ಕೆ ಹೋದ ಸಂದರ್ಭದಲ್ಲಿ ಶೇಕ್ಸ್‌ಪೀಯರ್ ಬಗ್ಗೆ ಇಂಗ್ಲೀಷ್ ನಲ್ಲಿ ಮಾತನಾಡಿದ್ದನ್ನು ಕೇಳಿದ ಅವರು, ಇಷ್ಟೊಂದು eನ ಸಂಪಾದನೆ ಹೇಗಾಯಿತು ಎಂದು ಕೇಳಿದಾಗ, ನಾನು ಎಲ್ ಬಿ ಕಾಲೇಜಿನಲ್ಲಿ ಓದಿದ್ದು. ಉತ್ತಮ ಇಂಗ್ಲೀಷ್ ಅಧ್ಯಾಪಕರಿದ್ದರು ಎಂದು ಹೇಳಿz ಎಂದು ನೆನಪಿಸಿದರು.
ಈ ಕಾಲೇಜನ್ನು ನಡೆಸುತ್ತಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ವನ್ನು ಆರ್ಥಿಕವಾಗಿ ಸ್ವಾವಲಂಬಿ ಯಾಗಿ ಮಾಡುವ ಜವಾಬ್ದಾರಿ ಹಳೆಯ ವಿದ್ಯಾರ್ಥಿಗಳ ಮೇಲಿದೆ. ಈ ಕಾಲೇಜಿನಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುzಯಲ್ಲಿzರೆ. ಅವರನ್ನು ಸಂಪರ್ಕಿಸಿ ಒಂದಿಷ್ಟು ಆದಾಯ ಬರುವಂತೆ ಮಾಡಬೇಕು. ಸಂಸ್ಥೆ ಯಾವತ್ತೂ ಹಣ ಮಾಡುವ ಉದ್ದೇಶ ಹೊಂದಿಲ್ಲ. ಶೈಕ್ಷಣಿಕ ಸೇವೆಯೇ ಇದರ ಗುರಿ ಎಂದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಶ್ರೀರಾಮ ಸಂಗಡಿಗರು ಆರ್ಥಿಕವಾಗಿ ಹಿಂದುಳಿದ ಪಿಯುಸಿ ವಿದ್ಯಾರ್ಥಿ ಗಳಾದ ಶ್ರವಣ ಪಂಡಿತ್ ಮತ್ತು ದಿವ್ಯಾ ಅವರಿಗೆ ಶೈಕ್ಷಣಿಕ ಉದ್ದೇಶಕ್ಕೆ ಧನಸಹಾಯ ನೀಡಿದರು.
ಸಂಘದ ಅಧ್ಯಕ್ಷ ಪ್ರೊ. ಬಿ.ಸಿ. ಶಶಿಧರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾಲೇಜಿನಲ್ಲಿ ಕಳೆದ ೬೦ ವರ್ಷದಲ್ಲಿ ಸುಮಾರು ೫೦ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿzರೆ. ತಮ್ಮ ತಮ್ಮ eನದ ಬಲದಿಂದ ರಾಜ್ಯ, ದೇಶ, ವಿದೇಶದಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕೆಲಸ ಮಾಡುತ್ತಿzರೆ. ಇದಕ್ಕೆಲ್ಲ ಅಡಿಪಾಯ ಹಾಕಿಕೊಟ್ಟಿರುವುದು ಇದೇ ವಿದ್ಯಾ ಸಂಸ್ಥೆ. ಹಳೆಯ ವಿದ್ಯಾರ್ಥಿಗಳು ಸಂಘದ ಸದಸ್ಯತ್ವ ಪಡೆದುಕೊಂಡು ದತ್ತಿ ನಿಽಗೆ ಸಹಕರಿಸಬೇಕು. ಇದರಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ಅನುಕೂಲ ಎಂದರು.
ಎಂ.ಡಿ.ಎಫ್. ಸಂಸ್ಥೆ ಅಧ್ಯಕ್ಷ ಎಂ.ಹರನಾಥರಾವ್, ಸಂಘದ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ ಕೆ., ಉಪಾಧ್ಯಕ್ಷ ಡಾ. ಲಕ್ಷ್ಮೀಶ್, ಖಜಂಚಿ ಡಾ.ಟಿ. ಎಸ್. ರಾಘವೇಂದ್ರ, ನಿರ್ದೇಶಕರಾದ ಕೆ.ವಿ.ಪ್ರವೀಣ, ದಯಾನಂದ, ಡಾ. ಸೋಮಶೇಖರ, ವಾಣಿ ಅರುಣ್, ಪುಷ್ಪಾ ರಮೇಶ್, ಡಾ.ಎಚ್.ಎಂ. ಶಿವಕುಮಾರ್ ಹಾಜರಿದ್ದರು.
ಮನ್ವಿತ ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎ.ಎಸ್. ಲಕ್ಷ್ಮೀಶ್ ಸ್ವಾಗತಿಸಿದರು. ಡಾ.ಟಿ.ಎಸ್.ರಾಘವೇಂದ್ರ ವಂದಿಸಿದರು. ಪ್ರೊ. ದಯಾನಂದ ನಿರೂಪಿಸಿದರು.