ಶಾಸಕ ರೇಣುಕಾಚಾರ್‍ಯ ಸಮ್ಮುಖದಲ್ಲಿ ಕೈ ಬಿಟ್ಟು ಕಮಲ ಹಿಡಿದ ಗ್ರಾಮದ ಮುಖಂಡರು…
ಹೊನ್ನಾಳಿ : ಕುಂದೂರು, ಕೂಲಂಬಿ, ಸೊರಟೂರು, ಚಿಕ್ಕಬಾಸೂರು ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಮುಖಂಡರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಮ್ಮುಖ ದಲ್ಲಿ ಬಿಜೆಪಿ ಸೇರ್ಪಡೆಯಾದರು.
ಹೊನ್ನಾಳಿ ನಗರದಲ್ಲಿ ಇತ್ತೀಚೆಗೆ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಈ ವೇಳೆ ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮುಖಂಡರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಪಕ್ಷಕ್ಕೆ ಬರ ಮಾಡಿಕೊಂಡಿದರು.
ಇದೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ ಪ್ರಧಾನಿ ಮೋದಿಜಿಯವರು ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಆಡಳಿತ ನೀಡುತ್ತಿರುವುದನ್ನು ಮನಗಂಡು ಯುವಕರು ಹಾಗೂ ಮುಖಂಡರುಗಳು ದೇಶಕ್ಕಾಗಿ ಮೋದಿಜಿಯವರ ಕೈ ಬಲ ಪಡಿಸಲು ಬಿಜೆಪಿ ಸೇರುತ್ತಿzರೆಂದರು. ರಾಜ್ಯದಲ್ಲೂ ಕಾಂಗ್ರೇಸ್ ಹಾಗೂ ಜೆಡಿಎಸ್‌ನ ಮುಖಂಡರುಗಳು ಸಹ ಪಕ್ಷಕ್ಕೆ ಸೇರ್ಪಡೆಯಾಲಿzರೆಂದರು.
ಶಾಸಕ ಎಂ.ಪಿ. ರೇಣುಚಾಕಾರ್ಯ ಮಾತನಾಡಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಮಾಡಿರುವ ಅಭಿವೃದ್ದಿ ಕೆಲಸ ಹಾಗೂ ಸೇವಾಕಾರ್ಯವನ್ನು ಮೆಚ್ಚಿ ಸಾಕಷ್ಟು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತ ಕೋರುತ್ತೇನೆಂದರು.
ಕೂಲಂಬಿ ಗ್ರಾಮದ ಸಿದ್ದೇಶ್, ಹಾಲೇಶಣ್ಣ, ಮಂಜುನಾಥ್, ಮರಿ ಗೌಡ, ಮುರಿಗೆಪ್ಪ, ಕುಂದೂರು ಗ್ರಾಮದ ಅನಿಲ್ ಕುಮಾರ್, ಉದಯ್ ಕುಮಾರ್, ಷಣ್ಮುಕ, ಶೇಖರಪ್ಪ, ಲಕ್ಕೇರಪ್ಪ, ಅಣ್ಣಪ್ಪ, ಸೊರಟೂರು ಗ್ರಾಮದ ಮರಿಗೌಡ್ರು, ಚಿಕ್ಕಬಾಸೂರು ಗ್ರಾಮದ ಬಸವರಾಜ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳುತ್ತೇನೆಂದರು.