ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜಕಾರಣ ಎಂಬ ಆಗಸದಲ್ಲಿ ದಿ. ಬಂಗಾರಪ್ಪ ಮರೆಯಲಾಗದ ಧ್ರುವತಾರೆ : ಹೆಚ್.ಎಸ್. ಸುಂದರೇಶ್

Share Below Link

ಶಿವಮೊಗ್ಗ: ರಾಜಕಾರಣ ಎಂಬ ಆಗಸದಲ್ಲಿ ದಿ. ಬಂಗಾರಪ್ಪ ಮರೆಯಲಾಗದ ಧ್ರುವತಾರೆ ಎಂದು ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಬಣ್ಣಿಸಿದರು.
ಅವರು ಇಂದು ಜಿ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿ ಸಿದ್ದ ದಿ. ಬಂಗಾರಪ್ಪನವರ ೯೦ನೇ ಹುಟ್ಟುಹಬ್ಬದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಂಗಾರಪ್ಪನವರು ಹಿಂದು ಳಿದ ವರ್ಗದವರ ನೇತಾರರಾಗಿ ದ್ದರು. ಬಡವರ ಪಾಲಿನ ಆಶ್ರಯ ದಾತ. ಮುಖ್ಯಮಂತ್ರಿಯಾಗಿ zಗ ಹಲವು ಜನಪ್ರಿಯ ಯೋಜನೆಗಳನ್ನು ಜರಿಗೆ ತಂದು ಶೋಷಿತರ ಪರವಾಗಿ ನಿಂತವರು. ನಿಷ್ಠೂರವಾದಿಯಾಗಿದ್ದರು. ಇಷ್ಟವಾಗುತ್ತಿದ್ದರು. ಹಲವು ಪಕ್ಷಗಳಲ್ಲಿ ಕಾಣಿಸಿಕೊಂಡರೂ ಕಾಂಗ್ರೆಸ್ ಅವರ ತವರುಮನೆ ಯಾಗಿತ್ತು. ಕೇವಲ ರಾಜಕಾರಣಿ ಯಾಗಿರದೆ ಸಾಂಸ್ಕೃತಿಕ ರಾಯಭಾರಿ ಯೂ ಅವರಾಗಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸ ಬೇಕು ಎಂದರು.
ನಾಲ್ಕು ದಶಕಗಳ ಕಾಲ ರಾಜ ಕಾರಣದಲ್ಲಿದ್ದ ಅವರು, ಶಿವಮೊಗ್ಗ ದ ಅಭಿವೃದ್ಧಿಗಾಗಿ ಶ್ರಮಿಸಿದವರು. ಗ್ರಾಮೀಣ ಕೃಪಾಂಕ ನೀಡುವ ಮೂಲಕ ಗಮನಸೆಳೆದವರು. ಕಾಂಗ್ರೆಸ್ ಕಾರ್ಯಕರ್ತರು ಸರ್ಕಾ ರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಮೂಲಕ ಅವರ ಆಶಯಗಳನ್ನು ಈಡೇರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಚಂದ್ರ ಭೂಪಾಲ್, ಕಲೀಂಪಾಶಾ, ಇಕ್ಕೇರಿ ರಮೇಶ್, ಗಾಡಿಕೊಪ್ಪ ರಾಜಣ್ಣ, ಮೋಹನ್, ಚಂದ್ರಶೇಖರ್, ಬಲ್ಕಿಷ್‌ಬಾನು, ವಿಜಯಲಕ್ಷ್ಮಿ ಪಾಟೀಲ್, ಸ್ಟೆ ಮಾರ್ಟಿನ್, ನಾಜೀಮಾ, ಪ್ರೇಮಾ ಎನ್. ಶೆಟ್ಟಿ, ಗಂಗಾಧರ್, ಶಮೀಮ್ ಬಾನು ಸಂಧ್ಯಾ, ಶೋಭಾ, ಕವಿತಾ, ಸುವರ್ಣ ನಾಗರಾಜ್, ಚಂದ್ರ ಕಲಾ, ಮಧು ಹಲವರಿದ್ದರು.