ಇತರೆತಾಜಾ ಸುದ್ದಿಲೇಖನಗಳು

ಅಮರ ಸ್ನೇಹ…

Share Below Link

ಹೊರಗೆ ಸಿಟ್ಟಿನಿಂದ ಗುನುಗುತ್ತಾ ಪಾತ್ರೆ ತೊಳೆಯುತ್ತಿದ್ದ ತಾರಮ್ಮ ಏನು ಮಕ್ಕಳೋ ಏನೋ? ಒಂದು ಮಾತು ಕೇಳಲ್ಲ; ಸಾಲ್ಯಾಗ ಮಾಸ್ತರು ಏನು ಹೇಳೋದೇ ಇಲ್ಲ ಇವಕ್ಕ ಎಂದು ಬಯ್ಯುತ್ತಿದ್ದಳು. ಆಗ ಹನುಮ ನಮ್ಮ ಅಜ್ಜಿಗೆ ಯಮ್ಮಾ ರಮೇಶ ಅದಾನ ಏನಬೆ ! ಎಂದು ಕೇಳಿದ, ಆಗ ತಾರಮ್ಮ ಅದಾನ ನೋಡಪ್ಪ; ನಿನಗೂ ಕೆಲಸ ಇ, ಅವನಿಗೂ ಕೆಲಸ ಇ ಅಟ್ಟ (ಮಹಡಿ)ದ ಮೇಲೆ ಪುಸ್ತಕ ಕಣ್ಣಿಗೆ ಹಿಡ್ಕೊಂಡು ಕುಂತಾನ ನೀನು ಹೋಗಿ ಕುಳಿತುಕೋ ಎಂದಳು.
ರಮೇಶ..! ರಮೇಶ…! ಎನ್ನುತ್ತಾ ಹನುಮ ಅಟ್ಟ ಏರಿದನು. ಆಗ ರಮೇಶ ಬಾರೋ ಹನುಮಾ ಎಂದನು, ರಮೇಶ ಇವತ್ತು ಸಾಲ್ಯಾಗ ಮಾಸ್ತರು ಏನು ಹೋಂವರ್ಕ್ (ಮನೆ ಕೆಲಸ) ಹೇಳ್ಯಾರ ಹೇಳು ಮಾಡ್ತೀನಿ, ಇಂದ್ರೆ ನಾಳೆ ಶಾಲೆಯಲ್ಲಿ ಮಾಸ್ತರು ನನ್ನ ದನಕ್ಕ ಬಡಿದಂಗ ಬಡಿತಾರ ಅಂದನು . ಅದಕ್ಕೆ ರಮೇಶ ಇವತ್ತು ನೀನ್ಯಾಕೆ ಶಾಲೆಗೆ ಬಂದಿದ್ದಿಲ್ಲ ಎಂದು ಕೇಳಿದ; ಆಗ ಹನುಮ ಮುಖ ಸಪ್ಪೆ ಮಾಡಿ ನಾನು ನಮ್ಮವ್ವನ ಜೊತೆ ಕೂಲಿ ಕೆಲಸಕ್ಕೆ ಹೋಗಿz ಎಂದನು. ಗೆಳೆಯಾ !! ನಮ್ಮ ಮನೆಯ ಪರಿಸ್ಥಿತಿ ನಿನಗೆ ಗೊತ್ತೇ ಇದೆ ಅಲ್ಲವೇ ಎಂದನು ಹನುಮ.
ಅಂದರೇ, ಹನುಮ ತುಂಬಾ ಬಡ ಕುಟುಂಬದವನು. ತಂದೆಯ ಆರೋಗ್ಯ ಬೇರೆ ಸರಿ ಇ. ಅವರಪ್ಪನಿಗೆ ದುಡಿಯಲು ಶಕ್ತಿ ಇ, ಹಾಗಾಗಿ ಮನೆಯ ಎ ಸಂಸಾರ ಭಾರವನ್ನು ಹನುಮನ ಅವ್ವ(ತಾಯಿ) ಲಕ್ಷ್ಮವ್ವ ನಿಭಾಯಿಸುತ್ತಿದ್ದಳು. ನಾಲ್ಕು ಮಕ್ಕಳು, ಗಂಡ , ಹೆಂಡತಿ ಒಟ್ಟು ಆರು ಜನರ ಹೊಟ್ಟೆ ತುಂಬಿಸಲು ಲಕ್ಷ್ಮವ್ವ ದಿನಾಲೂ ಹರಸಾಹಸ ಪಡುತ್ತಿದ್ದಳು. ಅಂತಹುದರಲ್ಲಿ ಗಂಡ ಬೇರೆ ಬೀಡಿ ಸೇದಿಸೇದಿ ಅನಾರೋಗ್ಯದಿಂದ ಬಳಲುತ್ತಿದ್ದ, ವಾರಕ್ಕೊಮ್ಮೆ ಅವನಿಗೆ ಕಡ್ಡಾಯವಾಗಿ ದವಾ (ಔಷದ) ಕೊಡಿಸಬೇಕು. ಅದಕ್ಕಾಗಿ ಹಿರಿಯ ಮಗನಾದ ಹನುಮನನ್ನು ವಾರದಲ್ಲಿ ಎರಡು ದಿನ ಶಾಲೆ ಬಿಡಿಸಿ ಲಕ್ಷ್ಮವ್ವ ಮಗನನ್ನು ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದಳು. ಹನುಮನು ಶಿಕ್ಷಣಾಸಕ್ತ, ಶಾಲೆ, ಅಭ್ಯಾಸ ಎಂದರೆ ಅವನಿಗೆ ಬಲು ಪ್ರೀತಿ. ಹರಿದ ಅಂಗಿ , ಚಡ್ಡಿಗಳಿಗೆ ತೇಪೆ ಹಾಕಿಸಿಕೊಂಡು ಶಾಲೆಗೆ ಹೋಗುತ್ತಿದ್ದ. ಪುಸ್ತಕ ಕೊಳ್ಳಲು ಹಣವಿಲ್ಲದಿದ್ದರೂ ಅವರಿವರ ಹರಿದ ಪುಸ್ತಕಗಳನ್ನು ಸಂಗ್ರಹಿಸಿ ಓದುತ್ತಿದ್ದ. ಹನುಮನ ನೆಚ್ಚಿನ ಹಾಗೂ ಪ್ರೀತಿಯ ಗೆಳೆಯ ಒಬ್ಬನೇ; ಅವನೇ ರಮೇಶ.
ರಮೇಶನು ಶ್ರೀಮಂತರ ಮನೆಯಲ್ಲಿ ಹುಟ್ಟಿದವನು. ತುಂಬಾ ಒಳ್ಳೆಯ ಹಾಗೂ ಜಣ ಹುಡುಗ. ಶಾಲೆಯ ಗೆಳೆಯರಿಗೆ ಓದಿನಲ್ಲಿ ತುಂಬಾ ಸಹಾಯ ಮಾಡುತ್ತಿದ್ದ. ಅದರಲ್ಲೂ ಹನುಮ ಎಂದರೆ ರಮೇಶನಿಗೆ ಪ್ರಾಣ. ತನ್ನ ಬಟ್ಟೆ ತಿಂಡಿ ತಿನಿಸುಗಳನ್ನು ತಪ್ಪದೇ ಹನುಮನಿಗೆ ಕೊಟ್ಟು ಖುಷಿಪಡುತ್ತಿದ್ದ. ಅಲ್ಲದೇ ಶಾಲೆಯಲ್ಲೂ ಹನುಮನಿಗೆ ಓದಲು ತುಂಬಾ ಸಹಾಯ ಮಾಡುತ್ತಿದ್ದ ರಮೇಶ. ಅವರದು ತುಂಬಾ ಒಳ್ಳೆಯ ಸ್ನೇಹವಾಗಿತ್ತು.
ಮನೆಗೆ ಬಂದ ಹನುಮನಿಗೆ ರಮೇಶ ಎ ಹೋಂವರ್ಕ್ ಹೇಳಿಕೊಟ್ಟು ಬರೆಯಿಸಿದನು. ಅಷ್ಟೊತ್ತಿಗೆ ಆಗಲೇ ಕತ್ತಲಾಗಿತ್ತು. ಹನುಮನ ಮನೆ ಊರ ಹೊರಗೆ ೩ ಪರ್ಲಾಂಗ ದೂರದಲ್ಲಿತ್ತು ಹೇಗೆ ಹೋಗುವುದು? ಎಂದು ಇಬ್ಬರೂ ಚಿಂತೆ ಮಾಡುತ್ತಿದ್ದರು, ಅದಕ್ಕೆ ರಮೇಶನು ನಡಿ ನಾನು ನಿನ್ನ ಜೊತೆ ಸ್ವಲ್ಪ ದೂರ ಬರುವೆ ಎಂದನು. ಇಬ್ಬರು ಅಟ್ಟವನ್ನು ಇಳಿದು ಕೆಳಗೆ ಬಂದರು. ರಮೇಶನ ಅಜ್ಜಿಯು ಗದರಿಸುತ್ತಾ ಎಲ್ಲಿಗೆ ಹೊರಟಿರುವಿರಿ? ರಾತ್ರಿ ಎಲ್ಲೂ ಹೋಗಬಾರದು ಅಂತ ಹೇಳಿಲ್ಲ ಎಂದಳು. ಆಗ ರಮೇಶನು ಅಂಜುತ್ತಾ ಹನುಮನನ್ನು ಕಳಿಸಿ ಬರುವೆ ಎಂದರೆ ನಮ್ಮ ಅಜ್ಜಿ ನನ್ನನ್ನು ಬಿಡುವುದಿಲ್ಲವೆಂದು ತಿಳಿದು ಒಂದಕ್ (ಮೂತ್ರ ವಿಸರ್ಜನೆ) ಅಂತ ಸುಳ್ಳು ಹೇಳಿದ . ತಾರಮ್ಮ ಸರಿ ಹೋಗಿ ಬೇಗ ಬಾ ಎಂದಳು. ಅಷ್ಟರಲ್ಲಿ ಬದುಕಿದವೆಂದು ಇಬ್ಬರು ಮನೆಯಿಂದ ನೆಗೆದರು, ಹಳ್ಳಿ ಊರು ಬೀದಿ ದೀಪಗಳು ಇದ್ದಿದ್ದಿ. ಎಲ್ಲರ ಮನೆಯ ಕಂದೀಲುಗಳು ಸಣ್ಣಗೆ ಬೆಳಕ ಚೆಲ್ಲುತ್ತಿದ್ದವು , ನಾಯಿಗಳು ನಮ್ಮನ್ನು ನೋಡಿ ಅಪರಿಚಿತರಂತೆ ಬೊಗಳುತ್ತಿದ್ದವು, ಜೀವ ಕೈಯಲ್ಲಿ ಹಿಡಿದುಕೊಂಡು ನಮ್ಮ ಊರಿನ ಕೊನೆಯ ಮರದ ಕಟ್ಟೆಯ ಹತ್ತಿರ ಇಬ್ಬರು ಬಂದೆವು. ಹನುಮ ನೀನು ಹೋಗು ಇನ್ನು ಮುಂದೆ ನಾ ಬರಲ್ಲ ಎಂದನು ರಮೇಶ. ಆಗ ಹನುಮ ಒಂದೇ ಉಸಿರಿನಲ್ಲಿ ಓಡಲು ಶುರು ಮಾಡಿ ಹೋಗಿ ತನ್ನ ಮನೆಯ ಕಟ್ಟೆಯನ್ನು ಐದು ನಿಮಿಷದಲ್ಲಿ ಸೇರಿದ್ದ. ಕೂಡಲೇ ಒಳಗೆ ಹೋಗಿ ಕಂದೀಲು ತಂದು ಕಟ್ಟೆಯ ಮೇಲೆ ನಿಂತು ತಾನು ಮನೆ ಸೇರಿದೆ ಎಂದು ಕಂದೀಲು ಹಿಡಿದು ಮನೆ ತಲುಪಿರುವ ಸಂದೇಶವನ್ನು ಸನ್ನೆಯ ಮೂಲಕ ರಮೇಶನಿಗೆ ರವಾನಿಸಿದ. ಆಗ ರಮೇಶನು ನಿಟ್ಟುಸಿರು ಬಿಟ್ಟು ಒಂದೇ ಓಟದಲ್ಲಿ ತನ್ನ ಮನೆಯನ್ನು ಸೇರಿದ.
ಸುರಕ್ಷಿತವಾಗಿ ಹನುಮ ಮನೆ ಸೇರುವ ತನಕ ರಮೇಶನ ಜೀವ ಹೊಡೆದುಕೊಳ್ಳುತ್ತಿತ್ತು, ಆಗಿನ ನಮ್ಮ ಸ್ನೇಹ ನಿಜವಾಗಿಯೂ ಆದರ್ಶಮಯ. ಮುಂದೆ ನಾನು ಓದುತ್ತಾ ಸರ್ಕಾರಿ ಮಾಸ್ತರ ಕೆಲಸ ಸೇರಿಕೊಂಡೆ ಆದರೆ ನನ್ನ ಆಪ್ತ ಗೆಳೆಯ ಹನುಮ ಕಷ್ಟ ಪಟ್ಟು ಡಿಗ್ರಿ ಮುಗಿಸಿ ನಿರ್ದಿಷ್ಟ ಕೆಲಸ ಸಿಗದೇ ಮಂಗಳೂರಿನ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಪ್ರಸಕ್ತ ೧೦ ವರ್ಷಗಳಿಂದ ಕೆಲಸ ಮಾಡುತ್ತಿzನೆ. ಅಂದು ನಾನು ಶಾಲಾ ಕರ್ತವ್ಯ ಮುಗಿಸಿಕೊಂಡು ಬೈಕನ್ನೇರಿ ನಮ್ಮೂರ ಕಡೆ ಹೊರಟಿz, ಎದುರಿಗೆ ಒಂದು ಬೈಕ್ ಸರ್ರನೇ ! ಹೊಯ್ತು ಎರಡು ನಿಮಿಷದ ನಂತರ ಆ ಬೈಕ್ ತಿರುಗಿ ನನ್ನನ್ನು ಹಿಂಬಾಲಿಸಿ ಬಂದಿತು, ಅದರ ಮೇಲಿದ್ದ ಹೆಲ್ಮೆಟ್ ದಾರಿಯ ಯುವಕ ನನ್ನ ಮುಂದೆ ನಿಂತ. ತಕ್ಷಣ ನಾನೂ ಕೂಡ ಬೈಕನ್ನು ನಿಲ್ಲಿಸಿ ಯಾರಿರಬಹುದು? ಎಂದು ಸಂದೇಹದಿಂದ ನೋಡಿದೆ. ಕೂಡಲೇ ರಮೇಶ ಎಂಬ ಮಧುರ ನನ್ನನ್ನು ಚಕಿತಗೊಳಿಸಿತ್ತು. ಆ ಧ್ವನಿಯನ್ನು ಕೇಳುತ್ತಲೇ ನನ್ನ ಬಾಲ್ಯದ ಗೆಳೆಯನ ಕೂಗು ನಮ್ಮ ಸ್ನೇಹದ ಕಟ್ಟೆಯನ್ನು ಒಡೆದಿತ್ತು. ಹೆಲ್ಮೆಟ್ ತೆಗೆಯುತ್ತಲೇ ಹನುಮನ ಕಣ್ಣಾಲೆಗಳು ನಿರಾಡಿದ್ದದ್ದವು . ಎಷ್ಟೋ ಕಾಲದಿಂದ ದೂರವಾಗಿರುವ ವಿರಹ ಪ್ರೇಮಿಗಳಂತೆ ನಾವಿಬ್ಬರೂ ಪ್ರಪಂಚವನ್ನು ಮರೆತು ಆಲಿಂಗನ ಮಾಡಿzವು. ನಮ್ಮಿಬ್ಬರ ಪವಿತ್ರ ಸ್ನೇಹಕ್ಕೆ ನಮ್ಮಿಬ್ಬರ ಉಸಿರು ನಮ್ಮ ಜೀವಗಳಿಗೆ ಉತ್ಸಾಹವನ್ನು ತುಂಬಿತ್ತು. ಒಂದನೇ ತರಗತಿಯಿಂದ ತುಂಟಾಟ ದಿಂದ ಪ್ರಾರಂಭವಾಗಿದ್ದ ನಮ್ಮ ಸ್ನೇಹ ಎಂದಿಗೂ ಬೇಸರಿಸಲಿ , ಯಾವತ್ತೂ ನಾವಿಬ್ಬರೂ ಜಗಳವಾಡಿರಲಿಲ್ಲ , ಹನುಮ ಬಡವನಾಗಿದ್ದರೂ ತಾನು ತಂದ ಕಟಗ (ಎರಡು ಮೂರು ದಿನದ ರೊಟ್ಟಿ) ರೊಟ್ಟಿಯಲ್ಲೂ ನನಗೆ ಪಾಲು ಕೊಡುತ್ತಿದ್ದ. ಒಂದೇ ತಾಟಿ (ತಟ್ಟೆ)ನಲ್ಲಿ ನಾವಿಬ್ಬರೂ ಊಟ ಸವಿದಿzವು, ಆಟದಲ್ಲಿ ಒಬ್ಬರಿಗೊಬ್ಬರು ಸೋತು ಗೆಳೆಯ ಗೆಲ್ಲಬೇಕು ಎಂದು ಗೆಲುವನ್ನು ಬಿಟ್ಟು ಕೊಟ್ಟಿzವು. ಹನುಮನ ಕಷ್ಟ ನೋಡಿ ರಮೇಶನು ತನ್ನ ಹತ್ತಿರವಿದ್ದ ಪುಡಿಗಾಸನ್ನು ಅವನಿಗೆ ಕೊಟ್ಟು ಶಾಲೆ ಕಲಿಯಲು ಅನುಕೂಲ ಮಾಡಿದ್ದ .
ಒಮ್ಮೆ ಶಾಲೆಯಲ್ಲಿ ವಾರ್ಷಿಕ ಪ್ರವಾಸ ಕೈಗೊಂಡಾಗ ಹನುಮನ ಹತ್ತಿರ ದುಡ್ಡಿಲ್ಲದೆ ಪ್ರವಾಸಕ್ಕೆ ಬರಲ್ಲವೆಂದು ಹೇಳಿದ ಆಗ ರಮೇಶನು ಕೂಡ ನನಗೂ ಆರೋಗ್ಯ ಸರಿಯಿಲ್ಲವೆಂದು ಶಾಲಾ ಮಾಸ್ತರಿಗೆ ಸುಳ್ಳು ಹೇಳಿ ಪ್ರವಾಸಕ್ಕೆ ಹೋಗುವುದನ್ನು ತಪ್ಪಿಸಿಕೊಂಡಿದ್ದನು. ಈ ಎ ಘಟನೆಗಳು ಆ ನಡು ರಸ್ತೆಯಲ್ಲಿ ಕಿರುಚಿತ್ರವೆಂಬಂತೆ ನಮ್ಮ ಕಣ್ಣ ಪರದೆಯ ಮೇಲೆ ಚಿತ್ರಿಸಿ ಹೋದಂತೆ ಭಾಸವಾಗಿತ್ತು. ಫೋನು , ಕಂಪ್ಯೂಟರ್, ಇಲ್ಲದ ಆ ಕಾಲವು ನಮ್ಮನ್ನು ತುಂಬಾ ದೂರ ಮಾಡಿತ್ತು , ಕಾಲೇಜು ಕಲಿಯುವಾಗ ಬೇರೆ ಬೇರೆಯಾದ ನಾವು ಇಂದು ಸಂಧಿಸಿ zವು. ಈ ಕ್ಷಣ ಅಮೋಘವೆಂದು ನಗುತ್ತಾ ಇಬ್ಬರೂ ಮಾತಾಡಿಕೊಂಡು ನಂತರ ಇಬ್ಬರೂ ಫೋನ್ ನಂಬರ್ ತೆಗೆದುಕೊಂಡೆವು . ರಮೇಶನ್ನು ತನ್ನ ಮನೆಗೆ ಗೆಳೆಯ ಹನುಮನನ್ನು ಕರೆದುಕೊಂಡು ಹೋದನು. ನಿಜವಾಗಿ ಆ ದಾರಿ ಇಬ್ಬರು ಅಮರ ಸ್ನೇಹಿಗಳನ್ನು ಹೊತ್ತು ಒಯ್ಯುವ ಪುಷ್ಪಕ ವಿಮಾನದಂತೆ ಕಂಗೊಳಿಸಿತ್ತು , ಬಾಲ್ಯದ ಸವಿ ನೆನಪುಗಳ ಹೂ ರಾಶಿಯೇ ಅವರನ್ನು ಸ್ವಾಗತಿಸಿತ್ತು.
ಅಶ್ವಿನಿ ಅಂಗಡಿ, ಶಿಕ್ಷಕಿ ಹಾಗೂ ಲೇಖಕಿ, ಬದಾಮಿ.