ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಅವಕಾಶ: ರಾಜಶೇಖರ್

Share Below Link

ಶಿವಮೊಗ್ಗ: ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಅವಕಾಶಗಳಿದ್ದು, ಶೈಕ್ಷಣಿಕ ಹಂತ ದಿಂದಲೇ ವಿದ್ಯಾರ್ಥಿಗಳು ವೃತ್ತಿ ಹಾಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಬಗ್ಗ ಅಲೋಚನೆ ಮಾಡಬೇಕು ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್‍ಯದರ್ಶಿ ಎಸ್.ರಾಜಶೇಖರ್ ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿ ಹಾಗೂ ಡಿವಿ ಎಸ್ ( ಸ್ವತಂತ್ರ ) ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿ ಸಿದ್ದ ಲೆಕ್ಕ ಪರಿಶೋಧನಾ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಪರಿಶ್ರಮ ವಹಿಸಿ ದರೆ ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಮುಂದಿನ ಐದು ವರ್ಷಗಳಲ್ಲಿ ವೃತ್ತಿಪರ ಲೆಕ್ಕ ಪರಿಶೋಧಕನಾ ಗುವ ಕುರಿತು ಈಗಿನಿಂದಲೇ ಸಿದ್ದತೆ ಆರಂಭಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಂಸ್ಥೆ ಸದಾ ಬೆನ್ನೆ ಲುಬಾಗಿದೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಕಿರಣ್ ವಸಂತ್ ಮಾತನಾಡಿ, ವಿದ್ಯಾರ್ಥಿ ಗಳಿಗೆ ಪೋಷಕರು ಸದಾ ಪ್ರೋತ್ಸಾ ಹಿಸುವ ಕೆಲಸ ಮಾಡಬೇಕು. ಇನ್ನೊಬ್ಬರ ಮಕ್ಕಳ ಜತೆ ಹೋಲಿಕೆ ಮಾಡಬೇಡಿ, ಕಠಿಣ ಸಂದರ್ಭ ದಲ್ಲಿ ಮಕ್ಕಳ ಜತೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಪೋಷ ಕರು ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಅಲೋಚನೆ ಬೆಳೆಯುತ್ತದೆ. ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಹೇಳಿದರು.
ಡಿವಿಎಸ್ ( ಸ್ವತಂತ್ರ ) ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿ, ಪಿಯು ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿeನ, ವಾಣಿಜ್ಯ ಹಾಗೂ ಕಲಾ ವಿಭಾಗ ದಲ್ಲಿ ಇರುವ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ದಾಖಲಾತಿ ನಂತರ ಕೂಡ ವಿದ್ಯಾ ರ್ಥಿಗಳ ಆಯ್ಕೆಯ ವಿಭಾಗದಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗು ತ್ತದೆ. ಪರಿಣಿತರಿಂದ ತರಬೇತಿ ನೀಡ ಲಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮಕ್ಕಳಿಗೆ ಧನಾ ತ್ಮಕ ಬೆಂಬಲ ನೀಡುವ ಕೆಲಸ ಮಾಡ ಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಡಿವಿ ಎಸ್ ಸಂಸ್ಥೆಯು ಸದಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿದೆ ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಲೆಕ್ಕ ಪರಿಶೋಧಕ ಸಚಿನ್ ಮಾತನಾಡಿದರು.
ಲೆಕ್ಕ ಪರಿಶೋ ಧಕರಾದ ದೀಪಿಕಾ, ಜೇಸನ್ ಕ್ಯಾಸ್ಟ ಲಿನೋ, ನಾಗರಾಜ್ ಹೆಬ್ಬಾರ್, ಕಾಲೇಜಿನ ಉಪನ್ಯಾಸಕ ಉಮೇಶ್ ಮತ್ತಿತ ರರು ಉಪಸ್ಥಿತರಿದ್ದರು.