ಅಕ್ರಮ ಮರಳು ಗಣಿಗಾರಿಕೆ; ತಹಶೀಲ್ದಾರ್ ಮಮತಾರಿಂದ ಕಠಿಣ ಕ್ರಮದ ಎಚ್ಚರಿಕೆ…
ಬೇಲೂರು : ತಾಲೂಕಿನ ಅರೇಹಳ್ಳಿ ಹೋಬಳಿಯ ಮದ್ವಾಪುರ ಹಾಗೂ ಮಾಲೂರು ಗ್ತಾಮದಲ್ಲಿ ಅಕ್ರಮವಾಗಿ ಶೇಕರಿಸಿದ್ದ ಸುಮಾರು ೮೦ ಟನ್ ಮರಳನ್ನು ತಹಸೀಲ್ದಾರ್ ಎಂ.ಮಮತಾ ಹಾಗೂ ಭೂ-ಗಣಿ ವಿeನ ಇಲಾಖೆಯ ವೆಂಕಟೇಶ್ ವಶಪಡಿಸಿಕೊಂಡರು.
ಮಧ್ಯರಾತ್ರಿ ಸುಮಾರು ೨ ಗಂಟೆಯವರೆಗೂ ಸ್ಥಳದ ಮೊಕ್ಕಾಂ ಹೂಡಿ ವಶಪಡಿಸಿಕೊಂಡ ಮರಳನ್ನು ಪಿಡಬ್ಲ್ಯೂ ಇಲಾಖೆ ಸುಪರ್ದಿಗೆ ನೀಡಿದರು.
ಅಕ್ರಮ ಮರಳು ದಂದೆಯಲ್ಲಿ ಭಾಗಿಯಾಗಿರುವವರ ಒತ್ತಡಕ್ಕೆ ಮಣಿದು, ಸ್ಥಳೀಯರು ಮರಳನ್ನು ಸಾಗಿಸಲು ಟಿಪ್ಪರ್ ಹಾಗೂ ಜೆಸಿಬಿಗಳನ್ನು ನೀಡಲು ಮುಂದಾಗಲಿಲ್ಲ. ಅಕ್ರಮ ಮರಳು ದಂಧೆಕೋರರ ಮತ್ತು ನಮ್ಮ ಕೆಲಸಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಬೇಲೂರು ಹಾಗೂ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ನಿರೀಕ್ಷಕ ಚಂದ್ರೇಗೌಡ ಹಾಗೂ ಗ್ರಾಮ ಸಹಾಯಕ ಗಿರೀಶ್ ಹಾಜರಿದ್ದರು.