ಗಾಂಧಿ ಕಡೆಗಣನೆ: ಅಪಾಯಕಾರಿ ಬೆಳವಣಿಗೆ…
ಲೇಖನ: ಡಾ. ಟಿ. ನೇತ್ರಾವತಿ
ರಾಷ್ಟ್ರಪತಿ ಮಹಾತ್ಮ ಗಾಂಧಿ ಅವರನ್ನು ಇತಿಹಾಸದಿಂದಲೇ ಹೊರ ದಬ್ಬುವ ಕೆಲಸ ಸದ್ದಿಲ್ಲದೇ ನಡೆಯುತ್ತಿರು ವುದು ಬಹುದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ. ಗಾಂಧೀಜಿ ಅವರನ್ನು ಇತ್ತೀಚಿನ ವರ್ಷಗಳಲ್ಲಿ ಕಡೆಗಣಿಸಲಾಗುತ್ತಿದೆ. ಅವರ ಬಗ್ಗೆ ಅಪಪ್ರಚಾರಗಳು ಸಾಮಾಜಿಕ ಜಲತಾಣಗಳಲ್ಲಿಯೂ ಸೇರಿಕೊಂಡು ಯುವಕರ ಮನಸ್ಸುಗಳನ್ನೇ ಅಲ ಕಲ ಮಾಡುತ್ತಿವೆ.
ಅವರ ಕಡೆಗಣನೆ ಈ ಶತಮಾನದ ಬಹುದೊಡ್ಡ ದುರಂತವಾಗಿ ಪರಿಣಮಿಸ ಲಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ಬಹುದೊಡ್ಡ ರಾಜಕಾರಣಿಗಳು, ವಿಶ್ವ ಗುರು ಎಂದು ಹೇಳಿಕೊಳ್ಳುವವರು, ವಿಚಾರ ವಂತರು, ಗಾಂಧೀಜಿ ಅವರನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳದೇ ಇರುವವರು, ಅವರನ್ನು ಧ್ಯಾನಿಸದೇ ಇರುವವರು, ಗೋಡ್ಸೆ ಪ್ರೇಮಿಗಳು ಗಾಂಧೀಜಿ ಅವರನ್ನು ತಿರಸ್ಕಾರದಿಂದ ನೋಡಿ ಅವರನ್ನು ಇತಿಹಾಸ ಪುಟ ದಿಂದಲೇ ಹೊರದಬ್ಬುವ ಕೆಲಸ ಮಾಡುತ್ತಿzರೆ.
ಹಾಗೆ ನೋಡಿದರೆ ಗಾಂಧೀಜಿ ಅವರನ್ನು ಸರಳವಾಗಿ ನೋಡುವ ಭರದಲ್ಲಿ ಗಾಂಧಿ ಗ್ಲಾಸ್, ಗಾಂಧಿ ಕಟಿಂಗ್ ಹೀಗೆ ಗಾಂಧೀಜಿ ಅವರನ್ನು ಅಸಂಬದ್ಧ ಹೋಲಿಕೆ ಮಾಡುವುದರಿಂದ ಹಿಡಿದು ಇಂದು ಗಾಂಧಿ ಯಾರು ಎನ್ನುವಷ್ಟರ ಮಟ್ಟಿಗೆ ಅವರನ್ನು ತಂದು ನಿಲ್ಲಿಸಲಾಗಿದೆ ಅಥವಾ ನಿಲ್ಲಿಸಲಾಗುತ್ತಿದೆ. ಗಾಂಧೀಜಿ ಜಗತ್ತಿನ ಶಾಂತಿ ಧೂತ. ಯುದ್ಧಗಳ ವಿರೋಧಿ. ಕತ್ತಲಲ್ಲಿ ಬೆಳಕು ತರುವವರು, ಸತ್ಯ, ಅಹಿಂಸೆಯ ಪ್ರತಿಪಾದಕ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದವರು. ಕೊನೆ ಪಕ್ಷ ಅವರು ಶ್ರೀರಾಮನ ಭಕ್ತರು ಎನ್ನುವುದನ್ನೂ ಕೆಲವರು ಮರೆತಿzರೆ. ಅವರನ್ನು ಬೇಡವಾಗಿಸುತ್ತಿzರೆ. ಇದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ಯಾವ ಮನುಷ್ಯ ಯುವ ಜನತೆಗೆ ಬೇಕಾಗಿತ್ತೋ, ಯಾವ ಒಳ್ಳೆಯ ತತ್ವ ಆದರ್ಶಗಳು ಯುವಕರಲ್ಲಿ ಮನೆ ಮಾಡ ಬೇಕಾಗಿತ್ತೋ ಅಂತಹ ವಿಷಯಗಳು ಇಂದು ಯುವಕರನ್ನು ತಲುಪುತ್ತಿಲ್ಲ. ಅಥವಾ ತಲುಪಿಸುತ್ತಿಲ್ಲ. ಸತ್ಯದಲ್ಲಿ ಅಸತ್ಯವನ್ನು ಹುಡುಕುವ ಕೆಲಸವಾಗು ತ್ತಿದೆ. ಗಾಂಧೀಜಿ ಅವರ ಬಗ್ಗೆ ಯುವಕ ರಲ್ಲಿ ಪ್ರೀತಿ ಬೆಳೆಯದಂತೆ ಮಾಡುವ ಕೆಲಸ ನಡೆಯುತ್ತಿದೆ. ಯುವಕರ ಮನಸ್ಸಿನಿಂದ ಸಂಪೂರ್ಣವಾಗಿ ಗಾಂಧೀಜಿ ಅಳಿಸಿ ಹೋಗುತ್ತಿzರೆ. ಅಂತಹ ಕೆಲಸವನ್ನು ಕೆಲವು ಹಿತಾಸಕ್ತಿಗಳು ಮಾಡುತ್ತಿವೆ. ಈ ಹುನ್ನಾರ ತಡೆಯಬೇಕಾಗಿದೆ.
ಜಗತ್ತಿನ ಅದರಲ್ಲೂ ಭಾರತದ ವಿಶ್ವವಿದ್ಯಾಲಯಗಳು, ಶಾಲಾ- ಕಾಲೇಜುಗಳು, ಶಿಕ್ಷಕರಿಂದ ಹಿಡಿದು ಪ್ರಾಧ್ಯಾಪಕರು, ಬರಹಗಾರರು, ಸಾಹಿತಿಗಳು, ಹಿರಿಯರು ಮುಖ್ಯವಾಗಿ ರಾಜಕಾರಣಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳ ಬೇಕಾಗಿದೆ. ಶ್ರೀರಾಮನ ಪ್ರತಿಷ್ಠಾಪನೆ ಮಾಡಿದಂತೆ ಗಾಂಧೀಜಿಯವರ ಪ್ರತಿಷ್ಠಾ ಪನೆಯ ಅಗತ್ಯವಿದೆ. ಗಾಂಧೀಜಿಯವರ ಬಗ್ಗೆ ಇರುವ ಅಪಪ್ರಚಾರಗಳಿಗೆ ತಕ್ಕ ಮತ್ತು ಸೂಕ್ತ ಉತ್ತರ ಕೊಡಬೇಕಾಗಿದೆ. ಇಡೀ ವಿಶ್ವವೇ ಪ್ರೀತಿಸುವ ಗಾಂಧೀಜಿ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಅದು ಯೋಚಿಸುವವರ ಹೃದಯದಲ್ಲಿ ನೆಲಸಬೇಕಾಗಿದೆ.
ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಹೋಲಿಕೆ ಮಾಡಿ ನೋಡಲಾಗುತ್ತಿದೆ. ಇದು ಕೂಡ ಗಾಂಧೀಜಿ ಅವರನ್ನು ಪಕ್ಕಕ್ಕೆ ಇಡುವಂತೆ ಮಾಡುತ್ತದೆ. ಗಾಂಧೀಜಿ ಮತ್ತು ಅಂಬೇಡ್ಕರ್ ರೈಲ್ವೇ ಹಳಿಗಳಿದ್ದಂತೆ ಅವು ಸಂದಿಸಬಾರದು. ಆದರೆ ಅಕ್ಕ ಪಕ್ಕದಲ್ಲಿರಬೇಕು. ಸಮನಾತಂತರ ರೇಖೆಗಳಿದ್ದಂತೆ ನಮ್ಮ ಬದುಕು ಈ ಹಳಿಗಳ ಮೇಲೆಯೇ ಓಡಬೇಕಾಗಿದೆ. ಸಮನಾಂತರ ರೇಖೆಗಳು ಸಂಧಿಸುವಾಗ ಬುದ್ಧನ ಅಡ್ಡಗರೆ ಅಗತ್ಯವಾಗಿದೆ.
ಗಾಂಧೀಜಿ ಅವರನ್ನು ಉಳಿಸಿಕೊಂಡೇ ಹೊಸ ಸಮಾಜ ಕಟ್ಟುವುದು ಇಂದಿನ ಯುವಕರ ಕರ್ತವ್ಯವಾಗಿದೆ. ವಾಸ್ತವದ ತಲ್ಲಣಗಳ ನಡುವೆ ಗಾಂಧೀಜಿ ಪ್ರಸ್ತುತವಾಗುತ್ತಾರೆ. ಗಾಂಧೀಜಿ ಬದುಕೇ ನಮಗೆ ಆದರ್ಶ. ಅವರ ಸರಳತೆಯೇ ಶ್ರೇಷ್ಟ. ದೇಶದ ಕೋಟ್ಯಂತರ ಜನರಿಗೆ ಗಾಂಧೀಜಿ ಬದುಕನ್ನು ಹೇಳಿಕೊಟ್ಟಿzರೆ. ಅವರ ಬದುಕು ಮತ್ತು ಸಾವು ಎರಡೂ ನಮಗೆ ಸಾಕ್ಷಿಯಾಗಿದೆ.
ಅವರ ಸತ್ಯ ಮತ್ತು ಅಹಿಂಸೆ ಇಂದು ದುರ್ಬಳಕೆಯಾಗುತ್ತಿದೆ. ಗಾಂಧೀಜಿಯವರ ತತ್ವಗಳು, ಆದರ್ಶಗಳನ್ನು ಪಾಲಿಸಲು ಇಷ್ಟವಿಲ್ಲದ ಅಥವಾ ಪಾಲಿಸಲು ಆಗದ ಅನೇಕರು ಗಾಂಧೀಜಿವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿzರೆ. ಇದು ಬಹುದೊಡ್ಡ ವಿಷಾದನೀಯ.
ಹಾಗೆಂದು ನಾವು ನಿರಾಸೆ ಪಡಬೇಕಾಗಿಯೂ ಇಲ್ಲ. ಗಾಂಧೀಜಿಯ ಪ್ರಭಾವ ಸಹಜವಾಗಿಯೇ ಇದೆ. ಆದರೆ, ಅದನ್ನು ಕಾಪಾಡಿಕೊಳ್ಳಬೇಕಾಗಿದೆ ಅಷ್ಟೇ. ಎ ತಾತ್ವಿಕ ಸಿದ್ಧಾಂತಗಳ ವಿರೋಧಗಳ ನಡುವೆಯೂ ಅವರು ಪ್ರೀತಿಯ ಮನುಷ್ಯ ಎಂಬ ಸತ್ಯ ನಮಗೆ ಗೊತ್ತಿದೆ. ಅದು ಮುಂದಿನ ಪೀಳಿಗೆಯವರಿಗೂ ತಲುಪಬೇಕಾಗಿದೆ. ಏಕೆಂದರೆ ಗಾಂಧೀಜಿಯವರ ಕನಿಷ್ಠ ಒಳ್ಳೆತನದ ಬಗ್ಗೆಯಾದರೂ ನಮ್ಮ ರಾಜಕಾರಣಿಗಳಿಗೆ ಗೊತ್ತಾಗಬೇಕಾಗಿದೆ.