ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಮುನ್ನಡೆದರೆ ಫಲಿತಾಂಶ ಎಂಬ ಬೋನಸ್ ನಿಶ್ಚಿತ
ಶಿವಮೊಗ್ಗ: ಐಎಂಎ ಕರ್ನಾಟಕದ ಕನ್ನಡ ವೈದ್ಯ ಬರಹಗಾರರ ಸಮಿತಿ, ಶಿವಮೊಗ್ಗ, ಡಿವಿಎಸ್ ಸಂಯುಕ್ತ ಪಪೂ ಕಾಲೇಜು, eನ ವಿeನ ಸಮಿತಿ ಮತ್ತು ಕ್ಷೇಮ ಟ್ರಸ್ಟ್ ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡಿವಿಎಸ್ ಕಾರ್ಯದರ್ಶಿ ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ ಶಿವಾನಂದ ಕುಬಸದ ಅವರು ಫಲಿತಾಂಶ ಎಂಬ ಬೋನಸ್ ಕುರಿತು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ದಿನನಿತ್ಯ ನಾವು ಪಾಲಿಸುವಂತ ಪ್ರಕ್ರಿಯೆ ಸರಿಯಾಗಿದ್ದರೆ, ಕಡೆಯಲ್ಲಿ ಫಲಿತಾಂಶ ಎಂಬ ಬೋನಸ್ ಬಂದೇಬರುತ್ತದೆ. ಕೃತಿಯಲ್ಲಿ ಸಂಸ್ಕೃತಿ ಇರಬೇಕು. ಗುರಿ ಸ್ಪಷ್ಟವಿರಬೇಕು. ಪರಿಶ್ರಮ ಪಟ್ಟರೆ ಗುರಿ ಮುಟ್ಟುವುದು ಖಚಿತ. ಪರೀಕ್ಷೆಯಲ್ಲಿ ಯಶಸ್ವಿಯಾಗುವು ದಷ್ಟೇ ಅಲ್ಲ, ಜೀವನದಲ್ಲಿ ಯಶಸ್ಸು ಗಳಿಸುವುದೂ ಮುಖ್ಯ ಎಂದು ಹೇಳಿದರು. ವಿದ್ಯಾರ್ಥಿಗ ಳೊಂದಿಗಿನ ಸಂವಾದದಲ್ಲಿ ಅವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲಾಯಿತು.
ಕ್ಷೇಮ ಟ್ರಸ್ಟ್ ಅಧ್ಯಕ್ಷ ಡಾ ಕೆ ಆರ್ ಶ್ರೀಧರ್ ಅಧ್ಯಕ್ಷತೆ ವಹಿಸಿ ದ್ದರು. ಪ್ರೊ| ಸತ್ಯನಾರಾಯಣ, ಶ್ರೀಮತಿ ಲಕ್ಷ್ಮೀದೇವಿ, ಡಾ| ರಕ್ಷಾ ರಾವ್, ಡಾ| ಕೆಎಸ್ ಶುಭ್ರತಾ ಮತ್ತು ಡಾ| ವಿನಯಾ ಶ್ರೀನಿವಾಸ್ ಉಪಸ್ಥಿತರಿದ್ದರು.