ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ನಾನು ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ; ಬಂಗಾರಪ್ಪರನ್ನು ಕಂಡರೆ ನನಗೆ ಗೌರವ: ಈಶ್ವರಪ್ಪ

Share Below Link

ಆನವಟ್ಟಿ: ನಾನು ರಾಷ್ಟ್ರಭಕ್ತ ಮುಸ್ಲಿಂರನ್ನು ಗೌರವಿಸುತ್ತೇನೆ. ಆದರೆ, ರಾಷ್ಟ್ರ ದ್ರೋಹಿಗಳು, ಅತ್ಯಚಾರಿಗಳು, ಭಯೋತ್ಪಾದಕ ಮುಸ್ಲಿಂರನ್ನು ದ್ವೇಷಿಸುತ್ತೇನೆ. ಲವ್ ಜಿಹಾದ್ ಹೆಸರಲ್ಲಿ ಹಿಂದು ಮಹಿಳೆಯರನ್ನು ಕೊಲೆ ಮಾಡುವ ಮುಸ್ಲಿಮರಿಗೆ ಶಿಕ್ಷೆಯಾಗುವ ವರೆಗೂ ಬಿಡುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಗುಡುಗಿದರು.
ರಾಷ್ಟ್ರಭಕ್ತರ ಬಳಗದಿಂದ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಎಸ್‌ವೈ ಕುಟುಂಬ ನನ್ನ ಬಗ್ಗೆ ಇಲ್ಲಸಲ್ಲ ವಂದತಿ ಹರಡಿಸಿದ್ದರು. ಆದರೆ ಪಕ್ಷವನ್ನು ಶುದ್ಧೀಕರಿಸುವ ತಪಸ್ಸು ಕೈಗೊಂಡಿzನೆ. ನನ್ನ ಕಬ್ಬು ಹಿಡಿದ ರೈತನ ಗುರುತಿಗೆ ಮತ ನೀಡಿ ಮೋದಿ ಕೈ ಬಲಪಡಿಸಬೇಕು. ಬಿಜೆಪಿ ನನಗೆ ತಾಯಿ ಇದ್ದಂತೆ, ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಲೋಕಸಭೆ ಚುಣಾವಣೆ ಯಲ್ಲಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದರು.
ಒಂದು ಕುಟುಂಬದ ಕೈಯಲ್ಲಿ ಸಿಕ್ಕಿ ನಲುಗುತ್ತಿರುವ ಪಕ್ಷವನ್ನು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸಬೇಕು. ಇಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಿ, ಕುಟುಂಬ ರಾಜಕರಣಕ್ಕೆ ಅಂತ್ಯಕಾಣಿಸುವುದೇ ನನ್ನ ಗುರಿ ಎಂದರು.
ಬಂಗಾರಪ್ಪ ಅವರನ್ನು ಕಂಡರೇ ನನಗೆ ತುಂಬ ಗೌರವ, ಕಾರಣ ಅವರು ಬಡವರ ಪರ ಚಿಂತನೆ ಮಾಡುತ್ತಿದ್ದರು. ಬಡವರ ಪರ ಯೋಜನೆಗಳನ್ನು ಜರಿಗೆ ತಂದಿದ್ದರು. ಆದರೆ, ಇಂದು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರ ಕಚ್ಚಾಟದಿಂದ ಸೊರಬ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಸಂಪೂರ್ಣ ನೀರಾವರಿ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೂ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಏನು ಮಾಡಬಹುದು ಎಂದು ನೀವೇ ಯೋಚಿಸಿ ಎಂದು ಹೇಳಿದರು.
ಬಹಿರಂಗ ಸಮಾವೇಶದಲ್ಲಿ ಆನವಟ್ಟಿ ಘಟಕದ ರಾಷ್ಟ್ರ ಭಕ್ತರ ಬಳಗದ ಅಧ್ಯಕ್ಷ ರಾಮಾನಾಯ್ಕ ಕೋಟಿಪುರ, ಸದಸ್ಯರಾದ ಕೇಶವ ನಾಯ್ಕ, ಸಂಜೀವ್ ನಾಯ್ಕ, ಪ್ರಶಾಂತ ನೆಲ್ಲಿಕೊಪ್ಪ ಮುಖಂಡರಾದ ವಿಠ್ಠಲ್ ಬನ್ನಿ, ಟಿ.ವಿ ಬೆಳಗಾವಿ, ಎನ್‌ವೀರಪ್ಪ, ಮೂಗಡಪ್ಪ, ಸುಜತ ಕಳ್ಳಿಕೇರಿ, ದುರ್ಗಪ್ಪ ಅಂಗಡಿ, ದಾನಪ್ಪ ಗಂಟೇರ್, ಪ್ರಭಾಕರ್ ರಾಯ್ಕರ್, ಚಿದಾನಂದಗೌಡ, ಮಂಜುನಾಥ ಸಾಗರ, ಹೇಮಾರವಿ, ವಕೀಲ ಶಿವಪ್ಪ ಇದ್ದರು.