ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದರಾಮೇಶ್ವರರ ತತ್ವವನ್ನು ತಾವು ಸಿಎಂ ಆಗಿದ್ದ ಅವಧಿಯಲ್ಲಿ ಪಾಲಿಸಿದ್ದೇನೆ: ಯಡಿಯೂರಪ್ಪ

Share Below Link

ಶಿಕಾರಿಪುರ: ನಾಡಿನ ಮಠಗಳು ಬಡಮಕ್ಕಳ ಶಿಕ್ಷಣ ಸಹಿತ ದಾಸೋಹಕ್ಕಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಎಲ್ಲ ಸಮುದಾಯದ ಮಠ ಮಂದಿರ, ಸಮುದಾಯ ಭವನಗಳಿಗೆ ತಾರತಮ್ಯವಿಲ್ಲದ ರೀತಿಯಲ್ಲಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿನ ನೂತನ ನೊಳಂಭ ವೀರಶೈವ ಲಿಂಗಾಯಿತ ಸಮುದಾಯ ಭವನವನ್ನು ಲೋಕಾ ರ್ಪಣೆಗೊಳಿಸಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಸಿದ್ದರಾಮೇಶ್ವರರು ಕೆರೆ ಕಟ್ಟಿ ಎಲ್ಲ ಸಮುದಾಯಕ್ಕೆ ನೀರುಣಿಸುವ ಪುಣ್ಯದ ಕಾರ್ಯವನ್ನು ಮಾಡಿದ್ದಾರೆ ಕಾಯಕ ತತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಸಿದ್ದರಾಮೇಶ್ವರರ ತತ್ವವನ್ನು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪಾಲಿಸಿ ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾಗಿ ತಿಳಿಸಿದ ಬಿಎಸ್‌ವೈ, ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿದ್ದ ತಾಲೂಕಿಗೆ ಸಮಗ್ರ ನೀರಾವರಿಗಾಗಿ ಸಹಸ್ರಾರು ಕೋಟಿ ಅನುದಾನ ನೀಡಿ ಇದೀಗ ರಾಜ್ಯದಲ್ಲಿ ಮುಂದುವರಿದ ತಾಲೂಕು ಎಂದು ಗುರುತಿಸಿಕೊಳ್ಳುವ ರೀತಿ ನಿರ್ಮಿಸ ಲಾಗಿದೆ ಎಂದು ತಿಳಿಸಿದರು.
ನೊಳಂಭ ವೀರಶೈವ ಸಮಾಜ ರಾಜಕೀಯವಾಗಿ ಗುರುತಿಸಿಕೊಳ್ಳು ವಲ್ಲಿ ಸದಾ ಕಾಲ ಬೆಂಬಲಿಸಿದ್ದು ಸಮುದಾಯದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು, ೨೦೦೮ರಲ್ಲಿ ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಸಿದ್ರಾಮ ಜಯಂತಿ ಕಾರ್ಯಕ್ರಮದ ಯಶಸ್ಸಿಗೆ ನೀಡಿದ ದೇಣಿಗೆಯಲ್ಲಿ ಖರೀದಿಸಲಾದ ನಿವೇಶನಕ್ಕೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅನುದಾನ ನೀಡುವ ಸುಯೋಗ ಒದಗಿಬಂದಿದ್ದು ಈ ದಿಸೆಯಲ್ಲಿ ರೂ.೧.೬೫ ಕೋಟಿ ಅನುದಾನ ಜತೆಗೆ ಸಮಾಜ ಭಾಂದವರ ಸಹಕಾರದಿಂದ ರೂ.೨.೫ ಕೋಟಿ ವೆಚ್ಚದ ಸುಂದರ ಸಮುದಾಯ ಭವನ ನಿರ್ಮಾಣ ವಾಗಿದೆ ಎಂದು ತಿಳಿಸಿದರು.
ಅನಾದಿ ಕಾಲದಿಂದ ಮಠ ಮಂದಿರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಇದರೊಂದಿಗೆ ದಾಸೋಹ ಎಲ್ಲ ವರ್ಗದ ಮಠ ಮಂದಿರದ ಬಹು ಮುಖ್ಯ ಕಾರ್ಯವಾಗಿದೆ. ಈ ದಿಸೆಯಲ್ಲಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸಮುದಾಯಕ್ಕೆ ಹೆಚ್ಚಿನ ಸೇವೆ ಸಲ್ಲಿಸುವ ಸದುದ್ದೇಶ ದಿಂದ ಮಠ ಮಂದಿರಗಳ ಅಭಿವೃದ್ದಿಗೆ ಯಥೇಚ್ಚ ಅನುದಾನ ವನ್ನು ನೀಡಿದ್ದು ಇದರೊಂದಿಗೆ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘವನ್ನು ಉದ್ಘಾಟಿಸಿ, ಸಿದ್ದರಾಮೇಶ್ವರರ ಕೆರೆ ಕಟ್ಟಿ ಬಾವಿ ತೋಡಿಸುವ ಕಾಯಕ ತತ್ವವನ್ನು ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಿದ್ದು ಈ ದಿಸೆಯಲ್ಲಿ ತಾಲೂಕಿನಾದ್ಯಂತ ಶಾಶ್ವತ ನೀರಾವರಿ ಯೋಜನೆ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಹಳೇಬೀಡು ಪುಷ್ಪಗಿರಿ ಸಂಸ್ಥಾನ ಮಠದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪುಷ್ಪಗಿರಿ ಸ್ವಸಹಾಯ ಸಂಘದ ಆರಂಭಕ್ಕೆ ಚಾಲನೆ ನೀಡಿದ್ದು ಇದೀಗ ಬೃಹದಾಕಾರ ವಾಗಿ ಬೆಳೆದು ಸಮಾಜಕ್ಕೆ ಆರ್ಥಿಕ ಚೈತನ್ಯವನ್ನು ನೀಡುತ್ತಿರುವ ಸಂಘಕ್ಕೆ ಪಟ್ಟಣದಲ್ಲಿ ಸ್ವಂತ ಕಟ್ಟಡ ಸಹಿತ ಶಿಕ್ಷಣ ಕೇಂದ್ರ, ಗುರುಗಳ ವಾಸ್ತವ್ಯಕ್ಕೆ ಅಗತ್ಯವಾದ ಕಟ್ಟಡ ನಿರ್ಮಾಣಕ್ಕೆ ೧.೫ ಎಕರೆ ಜಾಗ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವದಿಸಿದರು. ಅಧ್ಯಕ್ಷತೆಯನ್ನು ತಾಲೂಕು ನೊಳಂಭ ವೀರಶೈವ ಸಮಾಜದ ಅಧ್ಯಕ್ಷ ಬಿ.ಎಸ್ ಪಾಟೀಲ್ ವಹಿಸಿದ್ದರು. ವೇದಿಕೆ ಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ, ನಿವೃತ್ತ ಡಿಡಿಪಿಐ ರಾಮಲಿಂಗಪ್ಪ ಕುಸ್ಕೂರು, ಲೋಹಿತ್, ಪ್ರಧಾನ ವಿeನಿ ಡಾ. ಎಂ ವಿ ಧನಂಜಯ,ಪುರಸಭಾ ಸದಸ್ಯ ದರ್ಶನ್ ಉಳ್ಳಿ ಮುಖಂಡ ಡಾ.ಬಿಡಿ ಭೂಕಾಂತ್, ಪಾಲಾಕ್ಷಪ್ಪ, ಮೌನೇಶ್ವರಪ್ಪ, ಚುರ್ಚುಗುಂಡಿ ಶಶಿಧರ, ಗುರುರಾಜ ಜಕ್ಕಿನಕೊಪ್ಪ, ಭರತ್, ಹೇಮರಾಜ್, ಜಯಪ್ಪ,ಸಿ ಪಿ ಹೆಗ್ಗಡೆ ಮತ್ತಿತರರು ಉಪಸ್ಥಿತರಿದ್ದರು.