ಶಿಕ್ಷಣ ಇಲಾಖೆಯಲ್ಲಿ ಸಮಾನತೆ – ಗುಣಮಟ್ಟ ಸಾಧಿಸಿದ ತೃಪ್ತಿ ತಮಗಿದೆ: ಸಚಿವ ಮಧು
ಶಿವಮೊಗ್ಗ : ತಾವು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ೨ವರ್ಷ ೪ ತಿಂಗಳ ಅವಧಿಯಲ್ಲಿ ಶಿಕ್ಷಣದಲ್ಲಿ ಸಮಾನತೆ ಮತ್ತು ಗುಣಮಟ್ಟ ಸಾಧಿಸುವಲ್ಲಿ ಯಶಸ್ವಿಯಾಗಿzನೆ ಎಂದು ಎಸ್. ಮಧುಬಂಗಾರಪ್ಪ ತಿಳಿಸಿದರು.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭ ದಲ್ಲಿ ಎ ಇಲಾಖೆಗಳಿಗಿಂತ ಹೆಚ್ಚು ಸಮಸ್ಯೆಗಳುಳ್ಳ ಇಲಾಖೆಯನ್ನೇ ಪಕ್ಷದ ಮುಖಂಡರು ನನಗೆ ನೀಡಿ ದೊಡ್ಡ ಜವಾಬ್ದಾರಿ ವಹಿಸಿದ್ದರು. ಅದನ್ನು ಅತ್ಯಂತ ನಿಷ್ಠೆ ಮತ್ತು ಗೌರವದಿಂದ ಸಮರ್ಥವಾಗಿ ನಿಭಾಯಿಸಿದ ತೃಪ್ತಿ ತಮಗಿದೆ ಎಂದರು.
ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ| ಎಸ್. ಬಂಗಾರಪ್ಪನವರೇ ನನಗೆ ರಾಜಕೀಯ ಗುರುವಾಗಿದ್ದರು. ಅವರ ಜೊತೆಯಲ್ಲಿ ಬಹಳ ಕಾಲ ರಾಜಕೀಯದಲ್ಲಿ ಕೆಲಸ ಮಾಡಿದ್ದ ರಿಂದ ಸ್ವಾಭಾವಿಕವಾಗಿಯೇ ಯಾವುದೇ ಸವಾಲನ್ನು ಸ್ವೀಕರಿಸುವ ಗುಣ ನನ್ನಲ್ಲಿ ರಕ್ತಗತವಾಗಿ ಬಂದಿದೆ. ಇದರ ಪರಿಣಾಮ ಸಮಸ್ಯೆಗಳ ಗೂಡಾಗಿರುವ ಶಿಕ್ಷಣ ಇಲಾಖೆ ಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ತಾನು ಇಷ್ಟು ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತೇನೆಂಬ ನಿರೀಕ್ಷೆಯನ್ನು ಜನರಾಗಲಿ, ಪಕ್ಷದಲ್ಲಿ ಕೆಲವು ಮುಖಂಡರಾಗಲಿ ಮಾಡಿರಲಿಲ್ಲ. ಇದೊಂದು ದೊಡ್ಡ ಇಲಾಖೆ, ಸವಾಲಿನ ಮತ್ತು ಜವಾಬ್ದಾರಿಯ ಇಲಾಖೆ. ಈ ಇಲಾಖೆಯಡಿ ರಾಜ್ಯದಲ್ಲಿ ೪೬ ಸಾವಿರ ಶಾಲೆಗಳು ಬರುತ್ತವೆ. ಇಲಾಖೆಯಲ್ಲಿನ ಶೇ.೭೦ರಷ್ಟು ಸಮಸ್ಯೆಗಳನ್ನು ಬಗೆಹರಿಸಿದ ತೃಪ್ತಿ ನನಗಿದೆ ಎಂದರಲ್ಲದೇ, ಇಂದಿನ ಜಾತಿ, ಧರ್ಮದ ವ್ಯವಸ್ಥೆಯನ್ನು ಮೀರಿ ಇಲಾಖೆಯಲ್ಲಿ ಸುಧಾರಣೆಗಳನ್ನು ತಂದಿzನೆ. ಮಕ್ಕಳು ಅರಳುವ ಹೂಗಳಿದ್ದಂತೆ ಅವುಗಳನ್ನು ಬಾಡದೇ ಇರುವಂತೆ ನೋಡಿಕೊಳ್ಳುವುದು ನನ್ನ ಇಲಾಖೆಯ ಜವಾಬ್ದಾರಿಯಾಗಿದೆ ಎಂದರು.
ತಾವು ಅಧಿಕಾರಿವಹಿಸಿಕೊಂಡ ಕೇವಲ ೧೧ ತಿಂಗಳಲ್ಲಿ ೧೩,೫೦೦ ಶಿಕ್ಷಕರ ನೇಮಕಾತಿ ಮಾಡಿzನೆ. ಇನ್ನೂ ೧೮,೦೦೦ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಆರಂಭವಾಗಿವೆ. ಒಂದು ಸರ್ಕಾರಿ ಶಾಲೆಯಲ್ಲಿ ಕೇವಲ ೧ ಮಗು ವಿದ್ದರೂ ಅದನ್ನು ಮುಚ್ಚುವ ಪ್ರಸ್ತಾಪವನ್ನು ನಾನು ಮಾಡಿಲ್ಲ. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದೇ ನನ್ನ ಇಲಾಖೆಯ ಪ್ರಮುಖ ಉzಶ ಎಂದು ಭಾವಿಸಿzನೆ. ಮಕ್ಕಳಲ್ಲಿ ಸಾಮರ್ಥ್ಯ ವೃದ್ಧಿಸಲು ಮೂರು ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿದ್ದಲ್ಲದೆ ವೆಬ್‌ಕಾಸ್ಟ್ ಮೂಲಕ ನಕಲು ತಡೆಗೆ ಮುಂದಾಗಿzನೆ. ಇದು ಶಾಲಾ ಶಿಕ್ಷಣ ಪದ್ಧತಿಯಲ್ಲಿ ಮಹತ್ವಪೂರ್ಣ ಬದಲಾವಣೆಗೆ ಮುನ್ನುಡಿ ಬರೆದಿದೆ ಎಂದರು.
ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೆ ಒಂದು ಅವಧಿ ನೈತಿಕ ಶಿಕ್ಷಣ ಜಾರಿಗೆ ತರುವ ಆಲೋಚನೆ ಇದೆ. ಮುಂದಿನ ವರ್ಷದೊಳಗೆ ತೀರ್ಥಹಳ್ಳಿಯಲ್ಲಿ ವಿಶೇಷ ಚೇತನರಿಗೆ ವಸತಿಶಾಲೆ ಸ್ಥಾಪಿಸುವ ಯೋಜನೆಯೂ ಇದೆ. ಅಲ್ಲದೆ ಇಲಾಖೆಯ ಮೂಲಕ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಬೆಂಗಳೂರಿನಲ್ಲಿ ಕಿದ್ವಾಯ್ ಆಸ್ಪತ್ರೆ ಸಮೀಪ ಉಚಿತ ಚಿಕಿತ್ಸೆ ಸಹಿತ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ವಸತಿ ಶಾಲೆ ಸ್ಥಾಪಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದೇನೆ, ಇದಕ್ಕೆ ಸಂಬಂಧಿಸಿದಂತೆ ಇನ್‌ಫೋಸೀಸ್ ಮುಖ್ಯಸ್ಥೆ ಸುಧಾಮೂರ್ತಿ ಯವರೊಡನೆ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಇಲ್ಲಿಯವರೆಗೆ ರಾಜ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಇದ್ದ ೫೦೦ ಕೆಪಿಎಸ್ ಶಾಲೆಗಳ ಜೊತೆಯಲ್ಲಿ ಇನ್ನೂ ೩೦೦ ಕೆಪಿಎಸ್ ಶಾಲೆ ಆರಂಭಿಸಲಾಗು ವುದು. ಶಿವಮೊಗ್ಗ ಜಿಯಲ್ಲಿಯೇ ಇನ್ನೂ ಹೆಚ್ಚುವರಿಯಾಗಿ ೧೩ ಕೆಪಿಎಸ್ ಶಾಲೆಗಳನ್ನು ತೆರೆಯಲಾ ಗುವುದು ಎಂದ ಸಚಿವರು, ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
೧೯೯೫ರವರೆಗೆ ಆರಂಭಿಸಲಾದ ಶಾಲೆಗಳಿಗೆ ಸರ್ಕಾರ ಅನುದಾನ ನೀಡಿದ್ದು, ಇದನ್ನು ೨೦೦೫ರವರೆಗೆ ಆರಂಭಿಸಲಾದ ಶಾಲೆಗಳಿಗೂ ವಿಸ್ತರಿಸಲಾಗುವುದು. ವೃಕ್ಷೆತ್ಥಾನ ಹೆರಿಟೇಜ್ ರನ್ ಎಂಬ ಸಂಸ್ಥೆಗೆ ಪಿಯು ಕಾಲೇಜಿನ ಪ್ರತೀ ವಿದ್ಯಾರ್ಥಿಯಿಂದ ೫೦೦ ರೂ. ಶುಲ್ಕ ತೆಗೆದುಕೊಳ್ಳಬೇಕು ಎಂದು ಪಪೂ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಹೊರಡಿಸಿರುವ ಆದೇಶದ ಬಗ್ಗೆ ತಮಗೆ ಇನ್ನೂ ಮಾಹಿತಿ ಇಲ್ಲ. ಸಂಬಂಧಪಟ್ಟ ವರನ್ನು ಸಂಪರ್ಕಿಸಿ ಸ್ಪಷ್ಟೀಕರಣ ನೀಡುವುದಾಗಿ ತಿಳಿಸಿದರು.
ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ ಸೇರಿದಂತೆ ಇನ್ನಿತರರಿದ್ದರು.
