ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನೇಹಾ ಹತ್ಯೆಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ…

Share Below Link

ಹೊನ್ನಾಳಿ : ಹುಬ್ಬಳ್ಳಿಯ ಪಿವಿಆರ್ ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್‌ರನ್ನು ಹಾಡುಹಗಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ಭೀಕರವಾಗಿ ಹತ್ಯ ಮಾಡಿರುವುದನ್ನು ಖಂಡಿಸಿ ಸ್ವಾಮಿ ವಿವೇಕಾನಂದ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್‌ನಿಂದ ಬೃಹತ್ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.


ಹುಬ್ಬಳ್ಳಿ ಪಿವಿಆರ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೇಹಾ ಹಿರೇಮಠ್‌ಳನ್ನು ಮತಾಂಧ ಮುಸ್ಲಿಂ ಯುವಕ ಫಯಾಜ್ ಎಂಬಾತ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಎದುರಿನ ಚಾಕುವಿನಿಂದ ಹಲವಾರು ಇರಿದು ಅಮಾನುಷವಾಗಿ ಹತ್ಯೆ ಮಾಡಿರುವುದು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಆರೋಪಿ ಫಯಾಜ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿದರು.
ಹತ್ಯೆಗೊಳಗಾದಂತ ವಿದ್ಯಾರ್ಥಿ ನೇಹಾಳ ತಂದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹುಬ್ಬಳ್ಳಿ ಧಾರವಾಡದ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದು ಇಂತಹ ಮುಖಂಡರ ಮಕ್ಕಳಿಗೆ ಈ ರೀತಿ ಆದರೆ ನಾಳೆ ಸಾಮಾನ್ಯ ಜನರ ಮಕ್ಕಳ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದರು.
ಆರೋಪಿ ಫಯಾಜ್‌ಗೆ ಅತ್ಯಂತ ಕಠಿಣ ಶಿಕ್ಷೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಲಾಯಿತು.
ಹಿಂದು ಜಗರಣ ವೇದಿಕೆಯ ಪ್ರಾಂತ ಸಂಚಾಲಕ ಸತೀಶ್ ಅವರು ಮಾತನಾಡಿ, ಹಿಂದೂ ಸಮಾಜದ ಮೇಲೆ ಈ ರೀತಿಯ ಘಟನೆಗಳು ಪುನರಾವರ್ತನೆಯಾಗು ತ್ತಿದ್ದು, ಯಾವುದೇ ರೀತಿಯ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳದೆ ಕಾಂಗ್ರೆಸ್ ಸರ್ಕಾರವು ನಡೆದುಕೊಳ್ಳುವ ರೀತಿಯನ್ನು ನೋಡಿದರೆ ಇಲ್ಲಿ ಹಿಂದುಗಳಿಗೆ ರಕ್ಷಣೆ ಇದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.
ಮತ್ತೋರ್ವ ಮುಖಂಡ ಎಂ ಆರ್ ಮಹೇಶ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಬರ್ಬರಹತ್ಯೆ ಮಾಡಿರುವ ಫಯಾಜ್‌ಗೆ ಕಠಿಣ ಶಿಕ್ಷೆ ಆಗಬೇಕು ಮತ್ತೊಮ್ಮೆ ಇಂಥ ಕೃತ್ಯವನ್ನು ಯಾರು ಸಹ ಎಸಗಬಾರದು ಎಂದರು.
ಈ ಸಂದರ್ಭದಲ್ಲಿ ಅರುಣ್, ಶಾಂತರಾಜ್ ಪಾಟೀಲ, ಹನುಮಂತಪ್ಪ ಕೆ ವಿ ಚೆನ್ನಪ್ಪ, ಬಲಮುರಿ ಹನುಮಂತಪ್ಪ, ಅಜಯ್ ರೆಡ್ಡಿ, ನಟರಾಜ್, ಚೆನ್ನೇಶ್, ಸಿದ್ದೇಶ್ ಮಾಸಡಿ, ಪ್ರವೀಣ್ ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.