ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಪ್ರತಿಷ್ಠಿತ ಶ್ರೀನಿಧಿ ಟೆಕ್ಸ್‌ಟೈಲ್ಸ್‌ನಿಂದ ಭರ್ಜರಿ ಡಿಸ್ಕೌಂಟ್ ಸೇಲ್; ಫ್ಯಾಷನ್ ಶೋ…

Share Below Link

ಶಿವಮೊಗ್ಗ : ನಗರದ ಪ್ರಸಿದ್ದ ಶ್ರೀನಿಧಿ ಸಿಲ್ಕ್ ಆಂಡ್ ಟೆಕ್ಸ್‌ಟೈಲ್ಸ್ ೪೦ನೇ ವರ್ಷಾಚರಣೆಯ ವಿಶೇಷ ಕಾರ್ಯಕ್ರಮಗಳನ್ನು ಮೇ ೧೭ರಿಂದ ೧೯ ರವರೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಮೈದಾನ (ಕುವೆಂಪು ರಂಗ ಮಂದಿರದ) ಹಿಂಭಾಗದಲ್ಲಿ ಆಯೋಜಿಸಲಾಗಿದೆ ಎಂದು ಮಾಲೀಕ ಟಿ.ಆರ್ ಅಶ್ವತ್ಥ್ ನಾರಾಯಣಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


ಎನ್‌ಇಎಸ್ ಮೈದಾನದ ಆವರಣದಲ್ಲಿ ಫ್ಯಾನ್ಸಿ ಸೀರೆಗಳ, ಚೂಡಿದಾರ್, ಶರ್ಟ್, ಪ್ಯಾಂಟ್ ಗಳ ಹಾಗೂ ಬೆಡ್‌ಶೀಟ್‌ಗಳ ವಿಶೇಷ ಪ್ರದರ್ಶನ ಹಾಗೂ ಶೇ. ೧೫ರ ರಿಯಾಯಿತಿ ದರದಲ್ಲಿ ಮಾರಾಟ ಏರ್ಪಡಿಸಿದೆ . ಇದರ ಜೊತೆಗೆ ಶುಚಿ-ರುಚಿಯ ತಿಂಡಿ ತಿನಿಸುಗಳ ಮಾರಾಟ ವ್ಯವಸ್ಥೆಯೂ ಇದೆ. ಮುಖ್ಯವಾಗಿ ಮೇ ೧೭ ಹಾಗೂ ೧೮ ರಂದು ಫ್ಯಾಷನ್ ಶೋ ಹಾಗೂ ಸ್ಪರ್ಧೆಗಳು ನಡೆಯಲಿದೆ ಎಂದರು.
೫ ರಿಂದ ೧೨ ವರ್ಷಗಳ ವಯೋಮಾನದ ಮಕ್ಕಳು ಹಾಗೂ ಯುವಕ, ಯುವತಿಯರು ಮತ್ತು ಮಹಿಳೆಯರು ಪಾಲ್ಗೊಳ್ಳ ಬಹುದಾಗಿದೆ. ಹಾಗೆಯೇ ೫ ರಿಂದ ೧೨ ವರ್ಷದ ಮಗುವಿನೊಂದಿಗೆ ತಾಯಿ- ಮಗು ಸ್ಪರ್ಧೆಗಳು ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ನಗರದ ನಗರದ ಪ್ರಸಿದ್ಧ ನೃತ್ಯ ತಂಡಗಳಾದ ಸ್ಟೆಪ್ ಹೋಲ್ಡರ್ಸ್ ಇಮ್ಯಾಜಿನ್ ಡ್ಯಾನ್ಸ್ ಸ್ಟುಡಿಯೋ ಮತ್ತು ಸಹಚೇತನ ನಾಟ್ಯ ತಂಡಗಳಿಂದ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಮೇ ೧೯ರ ಭಾನುವಾರ ಸಂಜೆ ೬ ಗಂಟೆಗೆ ರಿಂದ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಋತ್ವಿಕ್ ಮುರಳಿಧರ್ ಮತ್ತು ತಂಡದವರಿಂದ ಸಂಗೀತ ಸಂಜೆ ಚಲನಚಿತ್ರ ಗೀತೆಗಳ ಗಾಯನ ಕಾರ್‍ಯಕ್ರಮ ಆಯೋಜಿಸಿದೆ ಎಂದ ಅವರು, ೬ ಲಕ್ಷ ರೂ.ಗಳ ಬಹುಮಾನಗಳ ಡ್ರಾ ನಡೆಯಲಿದ್ದು, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಆಹ್ವಾನಿತರು ಹಾಗೂ ಸಭಿಕರ ಸಮ್ಮುಖದಲ್ಲಿ ಈ ಡ್ರಾ ನಡೆಯಲಿದೆ ಎಂದರು.
ನಗರದ ಸಾರ್ವಜನಿಕರು ಹಾಗೂ ಶ್ರೀನಿಧಿಯ ಗ್ರಾಹಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯ ಪಾಲ್ಗೊಳ್ಳುವಂತೆ ಕೋರಿದರು.
ಗೋಷ್ಠಿಯಲ್ಲಿ ವೆಂಕಟೇಶ ಮೂರ್ತಿ, ಬದರಿ ಪ್ರಸಾದ್, ಚೇತನ್, ರಾಮಪ್ರಸಾದ್, ಶ್ರೀಗಿರಿ ಪ್ರಮುಖ್ ಉಪಸ್ಥಿತರಿದ್ದರು.

This image has an empty alt attribute; its file name is Arya-coll.gif