ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಇನ್ನೆಷ್ಟು ಹಿಂದೂಗಳ ಬಲಿ ಬೇಕು…

Share Below Link

ಶಿವಮೊಗ್ಗ: ಕಾಂಗ್ರೆಸ್ಸಿನ ತುಷ್ಠೀಕರಣ ರಾಜಕಾರಣಕ್ಕೆ ಇನ್ನೆಷ್ಟು ಹಿಂದುಗಳ ಬಲಿ ಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ರೀತಿ ಪೋಷಣೆ ಮಾಡುತ್ತ ಬಂದಿದೆ. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಇತ್ತೀಚಿನ ಉದಾಹರಣೆ ಯೆಂದರೆ ಯುವತಿ ನೇಹಳ ಕೊಲೆ, ಈ ಕೊಲೆಯನ್ನು ವಿರೋಧಿಸಿ ನಾಳೆ ಬೆಳಿಗ್ಗೆ ೧೦.೩೦ಕ್ಕೆ ಗೋಪಿವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಫಯಾಜ್ ಎಂಬ ಮೃಗ ನೇಹಳನ್ನು ಕೊಲೆ ಮಾಡಿದ್ದಾನೆ. ಈ ಕೊಲೆಯನ್ನು ಖಂಡಿಸಬೇಕಾದ ಗೃಹಸಚಿವರು ಮತ್ತು ಮುಖ್ಯ ಮಂತ್ರಿಗಳು ಇದು ವೈಯುಕ್ತಿಕ ಕಾರಣಕ್ಕಾಗಿ ಆದ ಕೊಲೆ ಲವ್ ಜಿಹಾದ್ ಅಲ್ಲ, ತನಿಖೆ ಮಾಡು ತ್ತೇವೆ. ಈಗಾಗಲೇ ಆರೋಪಿಯನ್ನು ಬಂಧಿಸಿ ದ್ದೇವೆ. ಶಿಕ್ಷೆಯನ್ನು ಕೊಡು ತ್ತೇವೆ ಎಂದು ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕೊಲೆಯಾಗಿದ್ದು ಹಿಂದು ಯುವತಿ ನೇಹಾ, ರಕ್ಷಣೆ ನೀಡಬೇಕಾಗಿದ್ದು ನೇಹಾ ಕುಟುಂಬಕ್ಕೆ, ಆದರೆ ಇವರು ರಕ್ಷಣೆ ನೀಡಿದ್ದು ಮಾತ್ರ ಫಯಾಜ್ ಕುಟುಂಬಕ್ಕೆ, ಇದೆಂತಹ ತುಷ್ಠೀ ಕರಣ. ಈ ಹಿಂದೆಯೂ ಕೂಡ ಅನೇಕ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆಗೆ ಕಾಂಗ್ರೆಸ್ ಸರ್ಕಾರ ಕಾರಣ ವಾಗುತ್ತದೆ. ಈ ಸರ್ಕಾರದಲ್ಲಿ ಏನು ಬೇಕಾದರೂ ಮಾಡಿ ಜಯಿಸಿ ಕೊಳ್ಳಬಹುದು ಎಂದು ಒಂದು ಕೋಮಿನ ವರ್ಗ ನಿಶ್ಚಯಿಸಿದಂತಿದೆ ಎಂದ ಅವರು, ಹರ್ಷ, ಪುಟ್ಟಪ್ಪ, ರಾಜು ಹೀಗೆ ಸಾಲು ಸಾಲಾಗಿ ಹಿಂದೂಗಳ ಹತ್ಯೆಯಾಗಿದೆ. ಹತ್ಯೆ ನಡೆದಾಗಲೆಲ್ಲ ಘಟನೆಯನ್ನು ಬೇಗ ದಾರಿ ತಪ್ಪಿಸುತ್ತಾರೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂಗಳಿಗೆ ಉಳಿಗಾಲವೇ ಇಲ್ಲವಾ ಗಿದೆ. ಅದರ ಆಡಳಿತವೇ ಹಾಗಿದೆ. ಹಿಂದೂಗಳನ್ನು ಹತ್ಯೆ ಮಾಡಲೇ ಬೇಕು ಎಂಬಂತೆ ಘಟನೆಗಳು ನಡೆಯುತ್ತಿದೆ. ಜತ್ಯಾತೀತ ಎಂಬ ಪದಕ್ಕೆ ಅರ್ಥವೇ ಇಲ್ಲವಾಗಿದೆ. ಲವ್ ಜಿಹಾದ್ ಹೆಸರಿ ನಲ್ಲಿ ನಡೆಯುವ ಹತ್ಯೆಗಳಿಗೆ ಈ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬುತ್ತಿದೆ ಎಂದರಲ್ಲದೆ, ನಮ್ಮ ಹೆಣ್ಣುಮಕ್ಕಳು ಕಾಲೇಜಿಗೆ ಹೋಗುವುದು ಕಷ್ಟವಾಗುತ್ತಿದೆ. ಅಷ್ಟೇ ಅಲ್ಲ ಈ ರಾಜ್ಯದಲ್ಲಿ ಕೆಫೆಗಳು ಸುರಕ್ಷಿತವಾಗಿಲ್ಲ. ಕಾಫಿ ಕುಡಿಯುವುದು ಕಷ್ಟವಾಗುತ್ತಿದೆ. ಮತ್ತು ಶಿವಮೊಗ್ಗದಂತಹ ಪಟ್ಟಣದಲ್ಲಿ ಬಾಂಬ್ ತಯಾರಿಕೆಗಳು ಕೂಡ ನಡೆಯುತ್ತಿವೆ ಎಂದರೆ ಎಲ್ಲಿಯವರೆಗೆ ಪರಿಸ್ಥಿತಿ ಬಂದಿದೆ ಎಂದು ತಿಳಿದು ಕೊಳ್ಳ ಬಹುದು. ಬಾಂಬ್ ತಯಾರಕರು ಕೂಡ ತೀರ್ಥಹಳ್ಳಿಯವರೇ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆ ನಕ್ಸಲರ ತಾಣವೂ ಆಗಿದೆ. ಭಯೋತ್ಪಾದಕರನ್ನು ಸಾಕುವ ತಾಣವಾಗಿದೆ ಎಂದು ದೂರಿದರು.
ಶಾಂತಿ ಸುವ್ಯವಸ್ಥೆ ಇದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಕೇವಲ ೨ ತಿಂಗಳಲ್ಲಿ ರಾಜ್ಯದಲ್ಲಿ ೧೩೪೯೫ ವಿವಿಧ ಪ್ರಕರಣಗಳು ಇಲ್ಲಿ ನಡೆದಿದೆ. ೨ ತಿಂಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಚೈನ್ ಕಳ್ಳತನ ಹೀಗೆ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿದ್ದಾವೆ ಎಂದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲಿದೆ ಎಂದರು.
ಹಿಂದೂಗಳೇ ರಕ್ಷಣೆ ಕೊಡದ ಕಾಂಗ್ರೆಸ್ ಸರ್ಕಾರವನ್ನು ನಾವು ಹೆಡೆಮುರಿ ಕಟ್ಟುತ್ತೇವೆ, ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಿ.ಎಸ್.ಅರುಣ್, ಎಂ.ಬಿ. ಭಾನುಪ್ರಕಾಶ್, ಎಸ್. ದತ್ತಾತ್ರಿ, ಜನೇಶ್ವರ್, ಮಾಲತೇಶ್, ಮೋಹನ್ ರೆಡ್ಡಿ, ನಾಗರಾಜ್, ಜಗದೀಶ್, ಹರಿಕೃಷ್ಣ, ರಾಜು ತಲ್ಲೂರು, ಶಿವಾಜಿ, ಶರತ್ ಕಲ್ಯಾಣಿ, ಕೆ.ವಿ. ಅಣ್ಣಪ್ಪ ಇದ್ದರು.