ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಹೊಸೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪಪೂ ಕಾಲೇಜಿಗೆ ಶೇ.100 ಫಲಿತಾಂಶ..

Share Below Link

(ಹೊಸ ನಾವಿಕ)
ಶಿಕಾರಿಪುರ: ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಹೊಸೂರು ಮೊರಾರ್ಜಿ ದೇಸಾಯಿ ವಿeನ ಪಪೂ ಕಾಲೇಜು ಸತತ ೬ನೇ ಬಾರಿಗೆ ಶೇ.೧೦೦ ಫಲಿತಾಂಶದ ಮೂಲಕ ಖಾಸಗಿ ಕಾಲೇಜುಗಳನ್ನು ಮೀರಿಸುವ ರೀತಿ ಅತ್ಯುತ್ತಮ ಸಾಧನೆಯ ಜತೆಗೆ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ.
ಕಳೆದ ೫ ವರ್ಷದಿಂದ ಸತತ ಶೇ.೧೦೦ ಫಲಿತಾಂಶದ ಮೂಲಕ ಸದ್ದಿಲ್ಲದೆ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿರುವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ಪುನಃ ಶೇ.೧೦೦ ಫಲಿತಾಂಶ ಗಳಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಉಪನ್ಯಾಸಕ ವೃಂದದ ನಿಸ್ವಾರ್ಥ ಶ್ರಮ ಅಪಾರವಾಗಿದೆ.
ಪ್ರಸಕ್ತ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ ೭೫ ವಿದ್ಯಾರ್ಥಿಗಳಲ್ಲಿ ೬೪ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ ೧೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡದಲ್ಲಿ ೭, ರಸಾಯನಶಾಸ್ತ್ರದಲ್ಲಿ ೫, ಜೀವಶಾಸ್ತ್ರದಲ್ಲಿ ೩, ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ ಓರ್ವ ವಿದ್ಯಾರ್ಥಿ ಶೇ.೧೦೦ ಅಂಕಗಳಿಸಿzರೆ.
ಮೂಲತಃ ಹೊಸನಗರ ತಾಲೂಕಿನ ಮಧುರ ೫೮೩ ಅಂಕ ಗಳಿಸಿ ಪ್ರಥಮ ಸ್ಥಾನದಲ್ಲಿದ್ದು, ಸೊರಬ ತಾಲೂಕಿನ ಪ್ರತಿಭಾ ಹಾಗೂ ಮೇಘನಾ ಕ್ರಮವಾಗಿ ೫೮೨ ಮತ್ತು ೫೮೦ ಅಂಕಗಳಿಸಿ ದ್ವಿತೀಯ, ತೃತೀಯ ಸ್ಥಾನಗಳಿಸಿzರೆ.
ಪ್ರತಿಭಾನ್ವಿತ ಎಲ್ಲ ವಿದ್ಯಾರ್ಥಿ ಗಳನ್ನು ಕಾಲೇಜಿನ ಪ್ರಾಚಾರ್ಯ ಸಂತೋಷ್ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.