ಹೊಸನಗರ: ಚಲಿಸುತ್ತಿದ್ದ ಸ್ಲೀಪರ್‌ಬಸ್ ಸಂಪೂರ್ಣ ಭಸ್ಮ…
ಹೊಸನಗರ: ತಾಲೂಕಿನ ಗಡಿ ಭಾಗ ಅರಸಾಳು ಮತ್ತು ಸುಡೂರು ಗ್ರಾಮಗಳ ಮಧ್ಯೆ ಚಲಿಸುತ್ತಿದ್ದ ಶ್ರೀ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಚಾಲಕ ಸೇರಿದಂತೆ ಸುಮಾರು ೪೦ ಜನ ಪ್ರಯಾಣಿಕರು ಈ ನತದೃಷ್ಟ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡುದನ್ನು ಗಮನಿಸಿದ ಚಾಲಕ, ತಕ್ಷಣವೇ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿzರೆ ಎನ್ನಲಾಗಿದೆ.

ಈ ವೇಳೆ ಗಾಬರಿ ಉಂಟಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಕಿರುಚಾಡಿ ಬಸ್‌ನಿಂದ ಜಿಗಿದು ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿzರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಲಿಸುತಿದ್ದ ಬಸ್ಸಿನಲ್ಲಿ ಮೊದಲು ಸುಟ್ಟ ವಾಸನೆ ಬಂದಿದ್ದು, ಕೆಲಕ್ಷಣಗಳ ಬೆಂಕಿ ಆವರಿಸಿಕೊಂಡಿತು. ಕೆಲವರು ಕಿರುಚುವ ಧ್ವನಿಕೇಳಿಸಿದೆ ಆ ನಂತರ ಎಕ್ಸಿಟ್ ಡೋರ್ ಮೂಲಕ ಹೊರಗೆ ಬಂದೆವು ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಒಟ್ಟು ೩೦ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಗಂಭೀರ ಗಾಯಗೊಂಡಿದ್ದ ೮ಕ್ಕೂ ಹೆಚ್ಚು ಜನರಿಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರ ಲಗೇಜ್‌ಗಳು ಸಂಪೂರ್ಣ ಬೆಂಕಿಗೆ ಅಹುತಿಯಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಅಂಬುಲೆನ್ಸ್ ಹಾಗೂ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿzರೆ. ಆದರೆ ಬೆಂಕಿಯ ತೀವ್ರತೆಗೆ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಈ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು,ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿzರೆ.

