ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಲೇಖನಗಳು

ಹೊಸನಗರ: ನಾಗರಕೂಡಿಗೆಯಲ್ಲಿ ಅಕ್ರಮ ಮರಳು ಮಾಫಿಯಾ ಅಟ್ಟಹಾಸ …

Share Below Link

ರಾಕೇಶ್ ಡಿಸೋಜ- ಮೊ: 9482482182
ಹೊಸನಗರ: ತಾಲೂಕಿನ ತ್ರಿಣೀವೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಕೂಡಿಗೆ ಇದೀಗ ಅಕ್ರಮ ಮರಳು ಗಣಿಗಾರಿಕೆ ಮಾಫಿ ಯಾದ ಗೂಡಾಗಿರುವ ಆರೋಪ ಕೇಳಿಬರುತ್ತಿದೆ. ಸ್ಥಳೀಯರ ಹೇಳಿಕೆ ಯಂತೆ ಇಲ್ಲಿ ಹಗಲು-ರಾತ್ರಿ ಎನ್ನದೆ ಭಾರೀ ಪ್ರಮಾಣದಲ್ಲಿ ಮರಳು ಎತ್ತುವ ಹಾಗೂ ಸಾಗಿಸುವ ಕೆಲಸ ನಡೆಯು ತ್ತಿದ್ದು, ದಂಧೆಕೋರರು ಯಾವುದೇ ಭಯವಿಲ್ಲದೆ ಕಾರ್ಯ ನಿರ್ವಹಿಸುತ್ತಿzರೆ ಎನ್ನಲಾಗಿದೆ.
ಇದಕ್ಕಿಂತ ಆತಂಕಕಾರಿ ಸಂಗತಿ ಎಂದರೆ, ಕೆಲವು ಇಲಾಖೆಗಳ ಅಧಿಕಾರಿಗಳು ದಂಧೆಕೋರರಿಗೆ ರಕ್ಷಾಕವಚ ವಾಗಿ ನಿಂತಿzರೆ ಎಂಬ ಗಂಭೀರ ಆರೋಪಗಳು ದಟ್ಟವಾಗಿವೆ. ಕಾನೂನಿನ ಕಠಿಣ ವಿಧಿಗಳನ್ನು ಅನ್ವಯಿಸಬೇಕಾದ ಅಧಿಕಾರಿಗಳು, ಆರೋಪಿಗಳ ವಿರುದ್ಧ ಗಂಭೀರ ಪ್ರಕರಣ ದಾಖಲಿಸದೆ, ಸಾಮಾನ್ಯ ಪ್ರಕರಣಗಳಲ್ಲಿ ಸೀಮಿತಗೊಳಿಸಿ ರಕ್ಷಣೆ ನೀಡುತ್ತಿzರೆ ಎಂಬ ಅನುಮಾನಗಳು ಸಾರ್ವಜನಿಕರಲ್ಲಿ ಮನೆಮಾಡಿವೆ.


ನಿಯಮದ ಪ್ರಕಾರ ಸರ್ಕಾರದ ಅಥವಾ ಪ್ರಕೃತಿಯ ಸಂಪತ್ತುಗಳನ್ನು ಪರವಾನಗಿ ಇಲ್ಲದೆ ಸಾಗಾಟ ಮಾಡಿದರೆ ಅದು ಗಂಭೀರ ಅಪರಾಧ. ಆದರೆ ಸ್ಥಳೀಯರ ಆರೋಪ ಪ್ರಕಾರ, ಬಿಎನ್‌ಎಸ್ ೩೦೩(೧) ಕಳ್ಳತನ ಪ್ರಕರಣ ದಾಖಲಿಸಬೇಕಾದಲ್ಲಿ ಸಂಘಟಿತ ಅಪರಾಧದ ಅಂಶವಿದ್ದರೆ ಬಿಎನ್‌ಎಸ್ ೧೧೨ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶ ವಿದ್ದರೂ ಇವುಗಳನ್ನು ಮರೆಮಾಚಿ ಕೇವಲ ಎಂಎಂಆರ್‌ಡಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಸುಲಭ ದಾರಿ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ.
ಪೊಲೀಸರು ಅಪರೂಪಕ್ಕೆಂಬಂತೆ ವಾಹನ ತಡೆದರೂ, ನಂತರ ಪ್ರಕರಣವನ್ನು ಗಣಿ ಭೂ ವಿeನ ಇಲಾಖೆಗೆ ಒಪ್ಪಿಸುತ್ತಾರೆ. ಅಲ್ಲಿಂದ ಕೆಲ ಅಧಿಕಾರಿಗಳು ಕಡಿಮೆ ದಂಡದಲ್ಲಿ ವಾಹನ ಬಿಡುಗಡೆ ಮಾಡಲು ನೆರವಾಗುತ್ತಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ದಂಧೆ ಕೋರರಿಗೆ ಕಾನೂನು ನಮ್ಮ ಕೈಯ ಎಂಬ ಧೈರ್ಯ ಬಂದಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಾಗರಕೂಡಿಗೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಯಲ್ಲಿ ಕಾರ್ಮಿಕ ಇಲಾಖೆಯ ಮಾನದಂಡಗಳನ್ನು ಪಾಲಿಸದೇ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದಿzರೆ ಎಂಬ ಮಾಹಿತಿ ಇದೆ.
ಇವರು ಕೇವಲ ಕೂಲಿ ಕಾರ್ಮಿಕರೋ? ಬೇರೆ ಉzಶ ಗಳೊಂದಿಗೆ ಬಂದವರೋ? ಅಥವಾ ಅಕ್ರಮ ನುಸುಳುಕೋರರೋ ಎಂಬ ಅನುಮಾನ ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಇವರು ಇ ಬೀಡುಬಿಟ್ಟು ಭಯೋತ್ಪಾದಕ ಚಟುವಟಿಕೆಗಳು ಸೇರಿದಂತೆ ಬೇರೆ ಅಕ್ರಮ ಚಟುವಟಿಕೆಗಳಿಗೆ ಕೈಹಾಕಿದರೆ ಹೊಣೆ ಯಾರು ಎಂಬುದನ್ನು ತಾಲೂಕು ಆಡಳಿತ ಉತ್ತರಿಸಬೇಕಿದೆ.
ಹೆಸರೇಳಲು ಇಚ್ಛಿಸದ ಸ್ಥಳೀಯ ಮಹಿಳೆಯೊಬ್ಬರ ಹೇಳಿಕೆ ಪ್ರಕಾರ, ಗಣೇಶ ಚತುರ್ಥಿಯಿಂದಲೇ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಮಿನಿ ಟಿಪ್ಪರ್ ಲಾರಿಗಳ ಓಡಾಟದಿಂದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ಓಡಾಡೋದೇ ಕಷ್ಟವಾಗಿದೆ. ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನಮ್ಮ ಮಾತು ಕೇಳೋವರು ಯಾರು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮಸ್ಥರ ಪ್ರಕಾರ ದಿನನಿತ್ಯ ೨೦ರಿಂದ ೩೦ ಮಿನಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ.
ರೈಡ್‌ಗೂ ಮುನ್ನ ಮಾಹಿತಿ ಲೀಕ್!
ಹೊಸನಾವಿಕ ಪತ್ರಿಕೆ ಡಿಸೆಂಬರ್ ೧೯ರ ಸಂಚಿಕೆಯಲ್ಲಿ ಮುತ್ತಲ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಕುರಿತು ಮುತ್ತಲ ಗ್ರಾಮದಲ್ಲಿ ಮರಳಿಗೆ ಮುತ್ತಿಕ್ಕುತ್ತಿರುವ ಖದೀಮರು ಎಂಬ ಶೀರ್ಷಿಕೆಯಡಿ ಸವಿಸ್ತಾರವಾದ ವರದಿ ಮಾಡಿತ್ತು. ಸದರಿ ವರದಿಯನ್ನಾಧರಿಸಿ ಕೆಲ ಅಧಿಕಾರಿಗಳು ರೈಡ್ ಹೆಸರಿನಲ್ಲಿ ಸ್ಥಳಕ್ಕೆ ಬಂದು ಮುಂಚಿತ ಮಾಹಿತಿ ನೀಡಿzರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಸ್ಥಳೀಯರ ಆರೋಪ ಪ್ರಕಾರ, ಸ್ಥಳಕ್ಕೆ ಬಂದು ಕೇವಲ ತೋರಾಟದ ಭೇಟಿ ನೀಡಿ ಹಿಂದಿರುಗಿzರೆ ಎನ್ನಲಾಗುತ್ತಿದೆ.
ಈ ಪರಿಸ್ಥಿತಿ ಗಮನಿಸಿದರೆ, ಸ್ಥಳೀಯ ಮಟ್ಟದ ಕ್ರಮಗಳು ಫಲಕಾರಿಯಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜಿಧಿಕಾರಿ ಹಾಗೂ ಜಿ ಪೊಲೀಸ್ ಮುಖ್ಯಸ್ಥರು ನೇರವಾಗಿ ಕಾರ್ಯಾಚರಣೆಗಿಳಿದು ಅಕ್ರಮ ಮರಳು ಮಾಫಿಯಾಕ್ಕೆ ಬ್ರೇಕ್ ಹಾಕುವ ಮೂಲಕ ಕಾನೂನು ಬಲವಾಗಿದೆಯೋ, ದಂಧೆ ಬಲವಾಗಿದೆಯೋ ಎಂಬ ಜಿಡಳಿತವೇ ತೋರಿಸಬೇಕಿದೆ.