ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶ

ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ…

Share Below Link

ಲೇಖನ: ರಾಕೇಶ್ ಡಿಸೋಜ (9448343211)
‘ಬದುಕು’ ಎಷ್ಟೇ ಸುಂದರವಾಗಿರಲಿ ಅದರ ಹಾದಿಯಲ್ಲಿ ೞಕತ್ತಲೆೞ ಘಟ್ಟಗಳು, ಸಂಕಟದ ಕಾಲಗಳು ತಪ್ಪದೇ ಬರುತ್ತವೆ. ಆಗ ಬದುಕು ಒಂದೆಡೆ ನಿಂತಂತೆ ಭಾಸವಾಗುತ್ತದೆ. ಕೆಲವೊಮ್ಮೆ ನಮಗೆ ಮುಂದೆ ಹೆಜ್ಜೆ ಇಡುವ ಧೈರ್ಯವೂ ಕುಗ್ಗಿಬಿಡುತ್ತದೆ. ಆದರೆ ಅಂತಹ ಸಮಯದ ನಮ್ಮನ್ನು ಬದುಕಿನತ್ತ ಎಳೆಯುವ ಶಕ್ತಿ ಏನಾದರೂ ಇದ್ದರೆ ಅದು ‘ಭರವಸೆ’…!
ಪ್ರತಿಯೊಬ್ಬರು ತಮ್ಮ ಬದುಕಿನಲ್ಲಿ ಎದುರಿಸುವ ಪ್ರಮುಖ ಯುದ್ಧಗಳೆಲ್ಲವೂ ಕೇವಲ ಹೊರಗಿನ ಪರಿಸ್ಥಿತಿಗಳಿಂದಲ್ಲ; ನಮ್ಮ ಅಂತರಂಗದ ಭಾವನೆಗಳಿಂದಲೂ ಅವುಗಳು ಹೊರಹೊಮ್ಮುತ್ತವೆ. ಅವುಗಳೆಂದರೆ ಭಯ, ತೊಂದರೆ, ನಿರಾಸೆ, ನಿರುತ್ಸಾಹ ಇತ್ಯಾದಿ., ಈ ಎಲ್ಲ ತೊಂದರೆಗಳ ಮಧ್ಯೆ ನಾವೊಂದು ಅಗೋಚರ ಶಕ್ತಿಯ ನಂಬಿಕೆಯಿಂದ ಮುನ್ನಡೆಯುತ್ತೇವೆ. ಆ ಶಕ್ತಿಯೇ ಭರವಸೆ ಎಂದರೆ ತಪ್ಪಾಗಲಾರದು. ಭರವಸೆ ಎಂದರೆ ಕೇವಲ ನಾನೇನು ಸಾಧಿಸುತ್ತೇನೆ ಎಂಬ ಕನಸಲ್ಲ; ಅದು ದೈವದ ಮೇಲಿನ ನಂಬಿಕೆ, ಜೀವನದ ತಾತ್ವಿಕತೆ ಮೇಲೆ ವಿಶ್ವಾಸ ಮತ್ತು ಒಂದು ದಿವ್ಯ ಶಕ್ತಿಯ ಮಾರ್ಗದರ್ಶನದ ನಿರೀಕ್ಷೆ.
ಭರವಸೆಯೇ ನಂಬಿಕೆಯ ಬೆಳಕು: ‘ಭರವಸೆ’ ಎಂದರೆ ಕಾಲವನ್ನೇ ಬದಲಾಯಿಸಬಲ್ಲ ಶಕ್ತಿ. ಅದು ಕೇವಲ ಒಂದು ಅಂದಾಜು ಅಥವಾ ನಿರೀಕ್ಷೆ ಅಲ್ಲ, ಅದು ಹೃದಯದಲ್ಲಿ ಬರುವ ನಿಶ್ಶಬ್ದ ಶಕ್ತಿ; ಅದೆಂದರೆ, ನಾಳೆ ಇನ್ನು ಉತ್ತಮವಾಗಿರಬಹುದು ಎಂಬ ‘ನಂಬಿಕೆ’. ಭರವಸೆ ಇದ್ದರೆ ನಾವು ಬಿದ್ದು ಬಿದ್ದರೂ ಎದ್ದು ನಿಲ್ಲುತ್ತೇವೆ. ಅದು ನಮ್ಮನ್ನು ಮುಂದಕ್ಕೆ ನೂಕುತ್ತದೆ, ಸೋಲಿನ ನೆರಳಲ್ಲಿಯೂ ಗೆಲುವಿನ ರಶ್ಮಿಯನ್ನು ಕಾಣುವ ದೃಷ್ಟಿಯನ್ನು ನೀಡುತ್ತದೆ.
ನಿರಾಸೆಯ ಮಂಕಿನಲ್ಲಿ ಭರವಸೆಯ ರಶ್ಮಿ: ಕಳೆದ ಕೆಲವು ವರ್ಷಗಳಲ್ಲಿ ಹಲವು ಬದುಕುಗಳು ಪರೀಕ್ಷೆಯಲ್ಲಿತ್ತು. ಮನುಕುಲವನ್ನೇ ನಲುಗಿಸಿದ ಕೋವಿಡ್ ಮಹಾಮಾರಿ, ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ… ಇವೆಲ್ಲದರ ನಡುವೆ ಎಲ್ಲರ ಬದುಕಿಗ ಆಸರೆಯಾದದ್ದು ಒಂದು ‘ಭರವಸೆ’. ಒಂದು ದಿನ ಎಲ್ಲವೂ ಸರಿಯಾಗುತ್ತೆ ಎಂಬ ನಿರೀಕ್ಷೆ. ಭರವಸೆಯೇ ಬದುಕಿಗೆ ಅರ್ಥ ಕೊಡುವ ಎಳೆಯಾಗಿದೆ.
ಧರ್ಮ, ಸಾಹಿತ್ಯ ಮತ್ತು ಜೀವನದಲ್ಲಿ ಭರವಸೆಯ ನೆಲೆ: ವಿಶ್ವದ ಎಲ್ಲಾ ಧರ್ಮಗಳಲ್ಲಿ ಕೂಡ ಭರವಸೆಗೆ ಮುಖ್ಯ ಸ್ಥಾನವಿದೆ. ಆಧ್ಯಾತ್ಮದಲ್ಲಿ ಭರವಸೆ ಇಡುವುದು ಎಂದರೆ ದೇವರ ನಂಬಿಕೆಯಿಂದ ಪ್ರೇರಿತವಾದ ಬದುಕು ಎಂದರ್ಥ. ಭವಸಾಗರದಲ್ಲಿ ಈಜುತ್ತಿರುವ ಜೀವಿಗೆ ನಂಬಿಕೆಯ ನಾವಿಕನೇ ದೇವರು.
ಮೇರಿ ಮಾತೆಯು ದೇವದೂತ ಗಬ್ರಿಯೇಲ್‌ನಿಂದ ಸಂತಾನಧಾರಣೆ ಸಮಾಚಾರವನ್ನು ಕೇಳಿದಾಗ ಆತ್ಮಸ್ಥಿತಿಯಲ್ಲಿ ಅವರು ಹೇಳಿದರು; ನಾನು ಕರ್ತನ ದಾಸಿ; ನಿನ್ನ ಮಾತು ನನಗೆ ನೆರವಾಗಲಿ (ಲೂಕ ೧:೩೮) ಈ ಹೇಳಿಕೆಯಲ್ಲಿ ಭರವಸೆಯ ಜೊತೆಯಾದ ಪ್ರಾರ್ಥನೆಯ ಸ್ಪಷ್ಟ ಪ್ರತಿಧ್ವನಿಯಿದೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ; ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ, ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ (ಅಂದರೆ: ನಿಸ್ವಾರ್ಥವಾಗಿ ನನ್ನನ್ನು ಭಜಿಸುವವರ ಯೋಗಕ್ಷೇಮವನ್ನು ನಾನು ಹೊಣೆ ಹೊರುತ್ತೇನೆ) – ಎಂಬ ವಾಕ್ಯವೂ ಭರವಸೆಯ ಇನ್ನೊಂದು ರೂಪ. ಈ ಪದಗಳಲ್ಲಿ ಭರವಸೆಯ ಆಧ್ಯಾತ್ಮಿಕ ಅರ್ಥ ಅಡಗಿದೆ. ನಾವು ನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ, ಫಲವನ್ನು ಕುರಿತು ಚಿಂತಿಸದೆ, ದೇವರು ನಮ್ಮ ಬದುಕನ್ನು ಸಮತೋಲನಕ್ಕೆ ತಂದುಕೊಳ್ಳುತ್ತಾನೆ ಎಂಬ ಭರವಸೆ.
ರಾಷ್ಟ್ರಕವಿ ಕುವೆಂಪು ಅವರ ನಡೆ ನುಡಿಯಲಿ ನಂಬಿಕೆಯಿಂದಿರಲಿ ಅಥವಾ ಶೇಕ್ಸ್‌ಪಿಯರ್‌ನ “The sun will rise, even after the darkest night” ಭರವಸೆ ಸದಾ ಒಂದು ಥೀಮ್ ಆಗಿದೆ.
ಭರವಸೆಯ ಶಕ್ತಿಯ ನಿಜವಾದ ರೂಪಗಳೆಂದರೆ; ದೈನಂದಿನ ಕೆಲಸಕಾರ್ಯಗಳನ್ನು ಮುಗಿಸಿ ರಾತ್ರಿ ಮಲಗಿ ಬೆಳಿಗ್ಗೆ ಮತ್ತೆ ಜೀವಂತವಾಗಿ ಏಳುತ್ತೇವೆಂಬ ಭರವಸೆ, ತಾಯಿ ಮಗುವಿಗೆ ಕಾಯುವ ಕಣ್ಮಣಿ ಎಂಬ ನಂಬಿಕೆ, ಸ್ನೇಹಿತ ಎಂದಿಗೂ ವಂಚಿಸುವುದಿಲ್ಲ ಎಂಬ ನಂಬಿಕೆ, ಕೃಷಿಕನು ಬಿತ್ತಿದ ಬೀಜ ಬೆಳೆಸುವ ನಂಬಿಕೆ, ವೈದ್ಯನ ಬಳಿ ಗುಣಮುಖನಾಗುವ ನಿರೀಕ್ಷೆ ಹೊತ್ತು ಹೋಗುವ ರೋಗಿ, ಪರೀಕ್ಷೆಯಲ್ಲಿ ಮತ್ತೆ ಪಾಸಾಗುವ ಆಸೆ ಹೊತ್ತ ವಿದ್ಯಾರ್ಥಿ ಇವೆಲ್ಲವೂ ಭರವಸೆಯ ಜೀವಂತ ರೂಪಗಳೇ ಆಗಿವೆ.
ನಮ್ಮೊಳಗಿನ ದೈವಶಕ್ತಿಯ ಪ್ರತೀಕವೇ ಭರವಸೆ: ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆದಾದರೂ ಈಗ ಎಲ್ಲವೂ ಮುಕ್ತಾಯವಾಯಿತು ಎನ್ನುವ ಸ್ಥಿತಿಗೆ ಬಂದೇ ಬರುತ್ತಾರೆ. ಆದರೆ ಮನಸ್ಸಿನ ಕೊನೆಯ ಆಳದಲ್ಲಿ ಒಂದು ನಿಶಬ್ದ ಧ್ವನಿ ಕೇಳಿಸುತ್ತೆ. ಇದು ಕೇವಲ ಒಂದು ಅಧ್ಯಾಯ, ಸಂಪೂರ್ಣ ಕಥೆ ಅಲ್ಲ ಎಂದು. ಅದೇಕೆಂದರೆ ಭರವಸೆ ಅನ್ನುವುದು ನಮ್ಮ ಆತ್ಮದ ಉಸಿರಿದ್ದಂತೆ. ಇದು ದೇವರಿಂದ ನಾವು ಪಡೆದ ಅಪರೂಪದ ದೈವಿಕ ವರ. ನಮ್ಮ ಆತ್ಮದ ಧೈರ್ಯವೇ ಭರವಸೆ.
ನಿರಾಸೆ ಎಂಬುದು ಮನುಷ್ಯನ ಮನಸ್ಸಿನ ಪರೀಕ್ಷೆಯಾಗಿದೆ. ನಿರಾಸೆ ಅನ್ನುವುದು ಜೀವನದ ನೈಸರ್ಗಿಕ ಅಂಶವೂ ಕೂಡ. ಎಲ್ಲವೂ ನಶಿಸಿಹೋಯಿತು ಎಂಬ ಭಾವನೆ ಬರಬಹುದು. ಆದರೆ ಸತ್ಯವೆಂದರೆ, ಅದು ನಮ್ಮ ‘ದೃಷ್ಟಿಯ ಪರೀಕ್ಷೆ’. ದೇವರು ನಮ್ಮ ನಂಬಿಕೆಯನ್ನು ಅಳೆಯುವ ಕ್ಷಣ ಎನ್ನಬಹುದು. ಅವನು ತಕ್ಷಣ ನೀಡುತ್ತಿಲ್ಲ ಅಂದರೆ ಮರೆಯುತ್ತಿzನೆ ಅಥವಾ ತ್ಯಜಿಸಿzನೆಂದು ಅರ್ಥವಲ್ಲ. ನಾವು ಇನ್ನೂ ಆ ಪಾಠ ಕಲಿಯಬೇಕಾಗಿದೆ ಎಂಬ ಸಂಕೇತ ಎನ್ನುವುದು ಆಧ್ಯಾತ್ಮಿಕ ಚಿಂತನೆಯ ಮೂಲಭಾವವಾಗಿದೆ.


ಭರವಸೆಯ ಜೀವಂತ ಶಕ್ತಿಯೇ ಪ್ರಾರ್ಥನೆ; ತಪಸ್ಸು ಮತ್ತು ತ್ಯಾಗ: ಪ್ರಾರ್ಥನೆ ಎಂದರೆ ನಾವು ದೇವರ ಬಳಿ ಕೇಳುವುದು ಅಲ್ಲ, ಅದು ದೈವ ಮತ್ತು ಭಕ್ತನ ನಡುವಿನ ಭರವಸೆಯ ಸಂಬಂಧ. ತಪಸ್ಸು ಮಾಡುವ ಸನ್ಯಾಸಿಯ ನಿರೀಕ್ಷೆ, ನದಿಗೆ ಬಿದ್ದ ಮೀನಿನ ಜೀವದ ಹಂಬಲ ಇವೆಲ್ಲವೂ ಭರವಸೆಯ ಗಂಭೀರ ರೂಪಗಳು ಎಂದರೆ ತಪ್ಪಾಗಲಾರದು. ಅದೇ ರೀತಿ ತ್ಯಾಗವೆಂದರೆ ಇಂದು ಸೋತು ನಾಳೆಗೆ ಗೆಲ್ಲುವ ನಂಬಿಕೆಯಾಗಿದೆ. ಅದು ಕೂಡ ಭರವಸೆಯ ಪರಾಕಾಷ್ಠೆ.
ಭರವಸೆ ಎಂದರೆ ಬೆಳಕು. ನಾವು ಅದನ್ನು ಕೈಬಿಟ್ಟರೆ, ನಮ್ಮ ಆತ್ಮದ ದಾರಿ ತಪ್ಪುತ್ತದೆ. ಆದರೆ ಅದನ್ನು ಹಿಡಿದುಕೊಂಡರೆ ಜೀವನ ನಮ್ಮನ್ನು ಎಷ್ಟು ಎತ್ತಿದರೂ, ಎಷ್ಟು ಬಿದ್ದರೂ, ನಮ್ಮ ಮನಸ್ಸು ಮತ್ತೆ ಎದ್ದು ನಿಲ್ಲುತ್ತದೆ. ಆದ್ದರಿಂದಲೇ ಶಾಸ್ತ್ರ, ಪುರಾಣ, ಧರ್ಮ, ಕಾವ್ಯ ಎಲ್ಲವೂ ಒಂದೇ ಮಾತು ಹೇಳುತ್ತವೆ; ನಂಬಿಕೆಯಿಂದ ಮುನ್ನಡೆ, ಭರವಸೆಯಿಂದ ಬದುಕು, ದೈವವನ್ನು ಅವಲಂಬಿಸು ಆಗ ನಿನ್ನ ಜೀವನದಲ್ಲಿ ಸದಾ ಬೆಳಕು ಇರಲಿದೆ.
ಏಕೆಂದರೆ ಭರವಸೆ ಎಂದರೆ ದೇವರ ಅಂಗೈಯಲ್ಲಿ ಇರುವ ನಗು. ಅದು ನಮ್ಮನ್ನು ಎಂದೂ ನಿರಾಸೆಗೊಳಿಸುವುದಿಲ್ಲ. ನಾವು ಕಾಯುವzಲ್ಲವೂ ಅಂಶಿಕವಾಗಿ ತಡವಾಗಬಹುದು, ಬದಲಾಗಿ ಬರುವಂತಾಗಬಹುದು ಅಥವಾ ನಿಲ್ಲಬಹುದು. ಆದರೆ ನಾವು ಭರವಸೆ ಇಟ್ಟಿದ್ದರೆ ನಮ್ಮ ಒಳಗಿನ ಶಕ್ತಿ ಕದಲುವುದಿಲ್ಲ. ಭರವಸೆಯು ಆಗಾಗ ನಮ್ಮ ಆಕಾಂಕ್ಷೆಗಳಂತೆ ಆಗದೇ ಇರುವುದು ನಿಜ, ಆದರೆ ಅದು ನಮ್ಮನ್ನು ಬದಲಾಗಿ ರೂಪಿಸುವುದು ಮಾತ್ರ ಖಚಿತ. ನಿರಾಸೆಯೊಳಗಾದರೂ ಭರವಸೆಯೊಂದಿಗೆ ನಡೆದು ಬಂದವರು ಎಂದಿಗೂ ಮುರಿದು ಬೀಳುವುದಿಲ್ಲ.
ಭರವಸೆಯ ಬೆಳಕು ಸದಾ ನಮ್ಮೊಳಗಿದೆ, ನಾವು ಬದಲಾಗದ ಪರಿಸ್ಥಿತಿಗಳಿಂದ ಪಾರಾಗಬೇಕಾದರೆ ನಮ್ಮೊಳಗಿನ ನಂಬಿಕೆಯನ್ನು ಉಜ್ವಲಗೊಳಿಸಬೇಕು. ಭರವಸೆಯು ಕಣ್ಣುಗಳಿಂದ ಕಾಣುವ ಬೆಳಕಲ್ಲ; ಅದು ಮನಸ್ಸನ್ನು ಬೆಳಗಿಸುವ ದೀಪ. ಜೀವನದ ಹಾದಿಯಲ್ಲಿ ಅದರ ಬೆಳಕೇ ನಮ್ಮ ನೆರಳುಗಳನ್ನು ಅಳಿಸುತ್ತದೆ. ಏಕೆಂದರೆ, ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ…!
ಭರವಸೆಗೆ ಪ್ರಾರ್ಥನೆಯೇ ನೆಲೆ: ಕಾರ್ಮೆಲ್ ಮಾತೆಯ ಬದುಕು ಪ್ರಾರ್ಥನೆಯ ರೂಪ… : ಶಿವಮೊಗ್ಗ ನಗರದ ಐತಿಹಾಸಿಕ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.16ರಂದು ಕಾರ್ಮೆಲ್ ಮಾತೆಯ ಮಹೋತ್ಸವವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲು ಮಾತೆಯ ಭಕ್ತರು ಆಧ್ಯಾತ್ಮಿಕವಾಗಿ ತಮ್ಮನ್ನು ಸಿದ್ದಗೊಳಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಕ್ರೈಸ್ತರ ಪರಮೋಚ್ಚ ವಿಶ್ವಗುರು ಪೋಪ್ ಅವರು ಭರವಸೆ ನಮ್ಮನ್ನು ನಿರಾಸೆಗೊಳಿಸುವುದಿಲ್ಲ (ರೋಮ 5:5)ಎಂಬ ಬೈಬಲ್ ಪವಿತ್ರಗ್ರಂಥದ ಧ್ಯೇಯವಾಕ್ಯವೊಂದನ್ನು ನೀಡಿ ಪ್ರಾರ್ಥನೆಗೆ ಕರೆಕೊಟ್ಟಿದ್ದಾರೆ. ಅಂತೆಯೇ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಜು.೬ರಿಂದ ನವದಿನ ಪ್ರಾರ್ಥನೆ ಆರಂಭಗೊಂಡಿದ್ದು, ಪ್ರತಿದಿನ ಒಂದೊಂದು ಧ್ಯೇಯವಾಕ್ಯವನ್ನಿಟ್ಟುಕೊಂಡು ಪ್ರಾರ್ಥನೆ ಮತ್ತು ಪ್ರವಚನಗಳು ನಡೆಯುತ್ತಿವೆ.
ಭರವಸೆಗೆ ಪ್ರಾರ್ಥನೆಯೇ ನೆಲೆ: ‘ಭರವಸೆ’ ಅದು ಮಾನವ ಹೃದಯದ ದೀಪ. ಒಂದು ವೇಳೆ ಈ ದೀಪ ನಂದಿದರೆ ಜೀವನವೆಲ್ಲಾ ಕತ್ತಲಲ್ಲಿ ಕಳೆಯುವೆವು. ಆದರೆ ಈ ದೀಪ ಬಿರುಗಾಳಿಗೆ ಆರದಂತೆ, ತತ್ತರಿಸದಂತೆ ಇಡಲು ಬೇಕಾದ ಆಧಾರವೇ ‘ಪ್ರಾರ್ಥನೆ’.
‘ಪ್ರಾರ್ಥನೆ’ ಎಂಬುದು ಕೇವಲ ವಿಧಿ ವಿಧಾನದ ಅನುಭವವಲ್ಲ. ಅದೊಂದು ಆತ್ಮದ ಮಾತು, ಭಗವಂತನಿಗೆ ಅರ್ಪಿಸುವ ನಿಸ್ಸಂಯ ಅನುಬಂಧ. ನಾವು ತೊಂದರೆಗೊಳಗಾದಾಗ.., ದಾರಿ ತಪ್ಪಿದಾಗ.., ಸಂಕಷ್ಟಗಳ ಬಂಡೆ ಮುಂದೆ ಬಂದಾಗ… ನಮ್ಮ ನುಡಿಯಲ್ಲಿ ಮೊದಲು ಬರುವ ಪದವೇ: ದಯಮಾಡು, ರಕ್ಷಿಸು… ಎಂಬ ಪ್ರಾರ್ಥನೆ. ಇದುವೇ ಭರವಸೆಯ ಆರಂಭ. ಪ್ರಾರ್ಥನೆಯಿಲ್ಲದ ಭರವಸೆ ಮರಳುಗಾಡಿನ ಮೇಲೆ ಕಟ್ಟಿದ ಮನೆ ಯಂತೆ. ನಾವಿಂದು ನಂಬುವ ವಿಶ್ವಾಸ, ನಾಳೆಗೆ ತಲುಪುವ ಧೈರ್ಯ ಎಲ್ಲವೂ ಆ ಪ್ರಾರ್ಥನೆಯ ಅಡಿಪಾಯದಲ್ಲಿದೆ.
ಆಧ್ಯಾತ್ಮಿಕ ಶಾಸ್ತ್ರಗಳು, ಧರ್ಮ ಗ್ರಂಥಗಳು ಎಲ್ಲವೂ ಈ ಒಂದೇ ನಿತ್ಯಸತ್ಯವನ್ನು ಒತ್ತಿಹೇಳುತ್ತವೆ. ಪ್ರಾರ್ಥಿಸಿ, ಭಯಪಡಬೇಡಿ. ಏಕೆಂದರೆ ಪ್ರಾರ್ಥನೆಯಲ್ಲಿದೆ ಶಕ್ತಿಯ ಹುಟ್ಟು. ಅದು ನಾನಾ ದಿಕ್ಕುಗಳಿಂದ ಬರುವ ಸಂಕಷ್ಟಗಳನ್ನು ಮೀರಿ ಸಾಗುವ ಹೊಸ ಶಕ್ತಿ ನೀಡುತ್ತದೆ. ಪ್ರಾರ್ಥನೆ ಎಂಬುದು ನಮ್ಮ ನಂಬಿಕೆಗೆ ಪುಷ್ಟಿ ನೀಡುತ್ತದೆ. ನಮ್ಮ ಕೈ ಅಸಹಾಯವಾಗುವಾಗ, ನುಡಿಯೇ ನಂಬಿಕೆಯಾದಾಗ ಪ್ರಾರ್ಥನೆಯ ರೂಪದಲ್ಲಿ ನಾವು ದೇವರನ್ನೇ ಸ್ಪರ್ಶಿಸುತ್ತೇವೆ. ಅವನು ಕೇಳುತ್ತಾನೆ ಎಂಬ ನಂಬಿಕೆಯೇ ಭರವಸೆಯ ಮೂಲ. ಆದರೆ ಈ ನಂಬಿಕೆ ನಿಜವಾಗಲಿ ಎಂಬುದು ಮಾತ್ರ ನಮ್ಮ ಶ್ರದ್ಧೆ, ನಿರಂತರ ಪ್ರಾರ್ಥನೆಯು ನಮ್ಮನ್ನು ನಿರಾಶೆಯಿಂದ ದೂರವಿಡುತ್ತದೆ. ನಾವು ನಿರಾಕರಣೆ ಯನ್ನು ಎದುರಿಸಿದಾಗ ಪ್ರಾರ್ಥನೆ ನಮಗೆ ದಾರಿ ಎಂದು ತಿಳಿದುಕೊಳ್ಳೋಣ. ಪ್ರತಿಯೊಂದು ಬಾಗಿಲು ಮುಚ್ಚಿದರೂ, ದೇವರ ಬಾಗಿಲು ಸದಾ ತೆರೆಯುವ ಸಾಧ್ಯತೆಯನ್ನಿಟ್ಟುಕೊಂಡು ನಿಣ.
ಭರವಸೆಗೆ ನೆಲೆ ಕೊಡುವ ಪ್ರಾರ್ಥನೆ ನಮ್ಮ ನಿತ್ಯದ ಜೀವನದ ಭಾಗವಾಗಬೇಕು. ಅದು ನಮ್ಮ ಹೃದಯದ ಎದೆಗುಂಡಿಯಲ್ಲಿರುವ ಶಕ್ತಿ ಕೇಂದ್ರ. ಭಾವನೆಗಳ ಗಾಳಿ ಬೀಸಿದಾಗ, ದುಃಖದ ಮಳೆ ಬರುವಾಗ, ಪ್ರಾರ್ಥನೆಯ ದಿಕ್ಕು ಪಕ್ಕವಾಗಿದ್ದರೆ ಭರವಸೆಯ ದೀಪ ಮಾತ್ರ ಎಂದಿಗೂ ಆರದು.
ಕಾರ್ಮೆಲ್ ಮಾತೆಯ ದಿವ್ಯ ನಿರೀಕ್ಷೆ : ಆಧ್ಯಾತ್ಮಿಕ ಜೀವನ ಎಂದರೆ ನಂಬಿಕೆ ಮತ್ತು ಪ್ರಾರ್ಥನೆಯ ಅನಂತ ಪಥ. ಈ ಪಥದಲ್ಲಿ ಹಲವರು ಧೈರ್ಯವಿಲ್ಲದೆ ಕುಸಿದುಹೋಗುತ್ತಾರೆ. ಆದರೆ ಇತಿಹಾಸದಲ್ಲಿ ಕೆಲವರು ಅಂದರೆ ಸಾಧು-ಸಂತರು, ಅದರಲ್ಲೂ ವಿಶೇಷವಾಗಿ ಮೇರಿ ಮಾತೆ ಅವರು ಪ್ರಾರ್ಥನೆಯಾಗಿಯೇ ಬದುಕಿದ್ದು, ಇಡೀ ಮಾನವತೆಗೆ ಭರವಸೆಯ ಬೆಳಕು ಆಗಿzರೆ. ಅವರುಗಳಲ್ಲಿ ಪ್ರಮುಖರಾಗಿ ನಮ್ಮ ಮುಂದೆ ನಿಲ್ಲುವವರು ಕಾರ್ಮೆಲ್ ಮಾತೆ.
ಕಾರ್ಮೆಲ್ ಮಾತೆಯ ಬದುಕು ಪ್ರಾರ್ಥನೆಯ ರೂಪವೇ ಆಗಿದೆ. ಮಾತೆಯು ದೇವದೂತ ಗಬ್ರಿಯೇಲ್‌ನಿಂದ ಸಂತಾನಧಾರಣೆ ಸಮಾಚಾರವನ್ನು ಕೇಳಿದಾಗ ಆತ್ಮಸ್ಥಿತಿಯಲ್ಲಿ ಹೇಳಿದರು; ನಾನು ಕರ್ತನ ದಾಸಿ; ನಿನ್ನ ಮಾತು ನನಗೆ ನೆರವಾಗಲಿ (ಲೂಕ ೧:೩೮) ಈ ಹೇಳಿಕೆಯಲ್ಲಿ ಭರವಸೆಯ ಜೊತೆಯಾದ ಪ್ರಾರ್ಥನೆಯ ಸ್ಪಷ್ಟ ಪ್ರತಿಧ್ವನಿಯಿದೆ. ನಮ್ಮ ಜೀವನದಲ್ಲಿ ನಾವು ಈ ದವಮಾತೆಯಂತೆ ಪ್ರಾರ್ಥನೆಯ ಶರಣಾಗತಿಯೊಳಗೆ ನಡೆದಾಗ ಮಾತ್ರ ನಿಜವಾದ ಭರವಸೆಯ ಭಾವನೆ ತಲೆ ಎತ್ತುತ್ತದೆ. ಪ್ರಾರ್ಥನೆ ನಮ್ಮನ್ನು ಸ್ಥಿರಗೊಳಿಸುವ ಶಕ್ತಿ, ಮಾತೆ ಮೇರಿ ಅದರ ಜೀವಂತ ಉದಾಹರಣೆ.
ಇಂದು ಪ್ರಪಂಚ ಭಯ, ಅನಿಶ್ಚಿತತೆ, ಧರ್ಮಾಂತರ, ತತ್ವವಿಲ್ಲದ ಬದುಕುಗಳಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಕಾರ್ಮೆಲ್ ಮಾತೆಯ ಪ್ರಾರ್ಥನಾ ದಾರಿಯಲ್ಲಿ ಸಾಗುವುದು ನಮ್ಮ ಅಸ್ತಿತ್ವಕ್ಕೆ ಹೊಸ ಉಸಿರಾಗಲಿದೆ. ಆಕೆಯ ಕರತಲದಲ್ಲಿ ಶಾಂತಿ, ಕಣ್ಣಿಲ್ಲದ ಆತ್ಮಗಳಿಗೆ ಬೆಳಕು, ನಿರಾಶೆಯೊಳಗಿನ ಶರಣಾಗತಿಯ ದಾರಿಯಾಗಲಿದೆ ಎಂಬ ಭರವಸೆ ಮಾತೆಯ ಭಕ್ತರದ್ದಾಗಿದೆ.