ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಾಧಕರ ಗೌರವಿಸುವುದರಿಂದ ಇತರರಿಗೂ ಪ್ರೇರಣೆ: ಡಿಸಿ

Share Below Link

ಶಿವಮೊಗ್ಗ: ಸಾಧಕರನ್ನು ಗೌರವಿಸುವುದರಿಂದ ಸಮಾಜದಲ್ಲಿ ಇತತರಿಗೂ ಪ್ರೇರಣೆ ನೀಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಾಹಸ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಜಿಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ನೇಪಾಳದಿಂದ ಶಿವಮೊಗ್ಗದ ಗೋಪಾಳದವರೆಗೂ ಬೈಕ್ ರ?ಯಾಲಿ ನಡೆಸಿದ ಸಾಹಸಿಗರಿಗೆ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣ ದಲ್ಲಿ ಆಯೋಜಿಸಿದ್ದ ಕಾರ್‍ಯಕ್ರಮ ದಲ್ಲಿ ಸನ್ಮಾನಿಸಿ ಮಾತನಾಡಿದರು.
ಅಂತರಾಷ್ಟ್ರೀಯ ಬೈಕ್ ರ್‍ಯಾಲಿ ಕಾರ್ಯದಲ್ಲಿ ಸಾಹಸಿಗರು ವೈವಿ ಧ್ಯಮಯ ಸಂಸ್ಕೃತಿ ಪರಂಪರೆಯ ಅರಿವು ಹೊಂದಿzರೆ. ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ, ಜೀವನಶೈಲಿ ಪರಿಚಯವಾಗಿದೆ. ಸಾಹಸದ ಬೈಕ್ ಪ್ರಯಾಣ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಹದಿನೈದು ದಿನಗಳ ಮೊದಲು ಇದೇ ಶಾಂತಲಾ ಸಭಾಂಗಣದಲ್ಲಿ ಶುಭಹಾರೈಸಿ ಬೀಳ್ಕೋಟ್ಟಿzವು. ಎಲ್ಲರೂ ಸುರಕ್ಷಿತವಾಗಿ ಹಿಂದಿರು ಗಿರುವುದು ಬಹಳ ಸಂತೋಷ. ಸಾಹಸ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಟ್ಟ ಅವರ ಕುಟುಂಬದವರಿಗೆ, ಜಿ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸುರಕ್ಷತೆ ಪ್ರಯಾಣದ ಜಗೃತಿ ಬಗ್ಗೆ ಸಂದೇಶ ಸಾರಿದ ಬೈಕ್ ಸವಾರರಿಗೆ ರೋಟರಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಅಭಿನಂದಿಸಿದರು. ಅಂತರಾ ಷ್ಟ್ರೀ ಯ ರೋಟರಿ ಸಂಸ್ಥೆ ಸಹಕಾರದಲ್ಲಿ ಕಾರ್ಯಕ್ರಮ ಜರುಗಿರುವುದು ಸಂತಸ ತಂದಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸು ಮತಿ ಕುಮಾರಸ್ವಾಮಿ ತಿಳಿಸಿದರು


ತರುಣೋದಯ ಘಟಕದ ಅಧ್ಯಕ್ಷ ವಾಗೇಶ್ ಮಾತನಾಡಿ, ಚಾರಣ, ಸಾಹಸಕ್ಕೆ ಹೆಚ್ಚು ಒತ್ತು ಕೊಡುವ ಯೂತ್ ಹಾಸ್ಟೆಲ್ಸ್, ಪ್ರಥಮ ಬಾರಿಗೆ ಅಂತರ ರಾಷ್ಟ್ರೀ ಯ ಬೈಕ್ ಸಾಹಸ ಯಶಸ್ವಿಯಾಗಿ ಪೂರೈಸಿದೆ. ಸಾಹಸಿಗಳು ಎಷ್ಟೇ ಸಂಖ್ಯೆಯಲ್ಲಿ ಬರಲಿ ನಾವು ಅವ ರಿಗೆ ಉತ್ತೇಜನ ನೀಡಿ ಸಹಕಾರ ನೀಡಲಾಗುವುದು ಎಂದರು.
ಸಾಹಸಿ ಅ.ನಾ.ವಿಜಯೇಂದ್ರ ಮಾತನಾಡಿ, ಕೆಲವು ಸಾಹಸಿಗ ರನ್ನು ಸೇರಿಸಿಕೊಂಡು ಬೈಕ್ ನಲ್ಲಿ ದೇಶ ಸುತ್ತುತ್ತಿzವು. ಈ ಬಾರಿ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ರೋಟರಿ, ಯೂತ್ ಹಾಸ್ಟೆಲ್ಸ್ ನೆರವಿನಿಂದ ಕ್ರಮ ಬದ್ಧ ಪ್ರಯಾಣ ಹಾಗೂ ಉತ್ತಮ ಪ್ರದೇಶಗಳ ಭೇಟಿ ಮಾಡಿ ಕೊಂಡು ಬರಲು ಸಹಕಾರಿಯಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿ ನಾಥ್ ಮಾತನಾಡಿ, ಸಂಘದ ವಜ್ರ ಮಹೋತ್ಸವ ಪ್ರಯುಕ್ತ ಪ್ರಥಮ ಕಾರ್ಯಕ್ರಮ ರೂಪದಲ್ಲಿ ಆಯೋ ಜಿಸಿದ್ದ ಅಂತರಾಷ್ಟ್ರೀಯ ಬೈಕ್ ರ್‍ಯಾಲಿ ಯಶಸ್ವಿಯಾಗಿದೆ. ಪ್ರವಾ ಸೋದ್ಯಮ ಉನ್ನತೀಕರಣಕ್ಕಾಗಿ ಶಿವಮೊಗ್ಗಕ್ಕೆ ಬನ್ನಿ, ಸುರಕ್ಷಿತ ವಾಹ ನ ಚಾಲನೆ ಎಂಬ ವಿಚಾರವನ್ನು ಜ ಗೃತಿ ಮೂಡಿಸಲಾಗಿದೆ ಎಂದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್‍ಯ ದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಉಪಾಧ್ಯಕ್ಷ ಬಿ. ಗೋಪಿನಾಥ್, ಖಜಂಚಿ ಎಂ.ರಾಜು, ಇ.ಪರಮೇಶ್ವರ್, ಗಣೇಶ್ ಅಂಗಡಿ, ಸುಮತಿ ಕುಮಾರಸ್ವಾಮಿ ಉಪಸ್ಥಿತರಿದ್ದರು.