ಹೊನ್ನಾಳಿ ಸಾಹಿತಿ ಹೆಚ್ ತಿಪ್ಪೇರುದ್ರಸ್ವಾಮಿ ಅವರು ವಚನ ಸಾಹಿತ್ಯ ಪರಿಷತ್ ಮೊದಲ ಅಧ್ಯಕ್ಷರು: ಸಂಗನಾಳಮಠ್
ಹೊನ್ನಾಳಿ: ೧೯೮೬ರಲ್ಲಿ ಸುತ್ತೂರು ಮಠದ ಲಿ| ಶ್ರೀ ರಾಜೇಂದ್ರ ಮಹಾಸ್ವಾಮಿಜಿಗಳವ ರಿಂದ ಶರಣ ಸಾಹಿತ್ಯ ಪರಿಷತ್ ಪ್ರಾರಂಭವಾಗಿದ್ದು, ಇದರ ಮೊದಲ ಅಧ್ಯಕ್ಷರಾಗಿ ಹೊನ್ನಾಳಿ ತಾಲೂಕಿನ ಸಾಹಿತಿ ಹೆಚ್. ತಿಪ್ಪೇರುದ್ರಸ್ವಾಮಿಯವರನ್ನು ನೇಮಕಮಾಡಲಾಗಿತ್ತು ಎಂಬುದಾಗಿ ವಿಶ್ರಾಂತ ಉಪನ್ಯಾಸಕ ಯು.ಎನ್. ಸಂಗನಾಳ್‌ಮಠ ಹೇಳಿದರು.
ಅವರು ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಪ್ರಾಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಹೊನ್ನಾಳಿ ಮಹಿಳಾ ಕದಳಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಚನಸಾಹಿತ್ಯ ಸಂಸ್ಥಾಪನಾ ದಿನಾಚರಣೆ ದಾವಣಗೆರೆ ಉಮಾ ಲಿಂಗರಾಜ ಅವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶರಣ ಸಾಹಿತ್ಯವು ಕ್ರಮೇಣ ವಚನ ಸಾಹಿತ್ಯದ ಮೂಲಕ ಶ್ರೀಮಂತಗೊಳ್ಳಲು ಕಾರಣ ವಾಗಿದ್ದು, ಇದನ್ನು ಮತ್ತಷ್ಟು ಜನತೆಗೆ ಹತ್ತಿರವಾಗಿಸುವ ಸಲುವಾಗಿ ಶರಣ ಸಾಹಿತ್ಯವನ್ನು ನಾಲ್ಕು ಭಾಗವಾಹಿಸಿ ಆರಂಭದಲಿ ಶರಣಸಾಹಿತ್ಯದ ಸಂಶೋಧನೆ, ಅದರ ಸಂರಕ್ಷಣೆ, ಪ್ರಕಟಣೆ, ಅಂತಿಮವಾಗಿ ವಚನಗಳ ಪರಿಣಾಕಾರಿಯಾಗಿ ಪ್ರಚಾರಗೊಳಿಸುವುದು ಮುಖ್ಯ ಉದ್ದೇಶವಾಗಿತ್ತೆಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಪಿ. ದೇವೆಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯಪಾಧ್ಯಯ ಶಂಕರಸ್ವಾಮಿ ವಹಿಸಿದ್ದರು. ಕಡದಕಟ್ಟಿ ತಿಮ್ಮಪ್ಪನವರಿಂದ ವಚನಗಾಯನ ನಡೆಯಿತು. ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷೆ ಶಾರದ ಕೊಣಗೊಟಗೆ, ಮಹಿಳಾ ಕದಳಿ ಘಟಕದ ಅಧ್ಯಕ್ಷೆ ಪ್ರತಿಮಾ ನಿಜಗುಣ, ಕಸಾಪ ಅಧ್ಯಕ್ಷ ಮುರುಗೇದ್ರಯ್ಯ, ಸಿದ್ದಯ್ಯ, ಪದಾಧಿಕಾರಿಗಳಾದ ಸುಮಾ ರವಿ ಕುಮಾರ, ವೀಣಾ ಸುರೇಶ್, ರಾಜೇಶ್ವರಿ, ಅಶ್ವಿನಿ, ಷಹಜನ್ ಇನ್ನಿತರಿದ್ದರು.