ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ವೃದ್ಧಿಯ ಸರ ಕದ್ದ 24 ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಹೊನ್ನಾಳಿ ಪೊಲೀಸರು….

Share Below Link

ಹೊನ್ನಾಳಿ : ವೃದ್ಧೆ ಪಾರ್ವತಮ್ಮ ಎಂಬುವರು ತಮ್ಮ ತೋಟದಲ್ಲಿ ಹುಲ್ಲು ಕೂಯ್ಯತ್ತಿzಗ ಹಿಂದಿನಿಂದ ಬಂದು ಸರ ಕಿತ್ತುಕೊಂಡು ಹೋದ ೨೪ ಗಂಟೆಯ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿzರೆ.
ಈ ಕುರಿತು ವಿವರಣೆ ನೀಡಿದ ಎಎಸ್ಪಿ ಸ್ಯಾಮ್ ವರ್ಗೀಶ್ ಅವರು, ಅ.೧೪ರ ಸಂಜೆ ತಾಲೂಕಿನ ಹುಣಸಘಟ್ಟ ಗ್ರಾಮದ ಪಾರ್ವತಮ್ಮ (೮೫) ತಮ್ಮ ತೋಟ ದಲ್ಲಿ ಹುಲ್ಲು ಕುಯ್ಯುತ್ತಿರುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಕಳ್ಳನೊಬ್ಬ ಹಿಂದಿನಿಂದ ಬಂದು ಪಾರ್ವತಮ್ಮ ಅವರ ಕೊರಳಲಿದ್ದ ೩೦ ಗ್ರಾಂ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು, ಆತನ ಸಹಾಯಕ್ಕೆ ನಿಂತಿದ್ದ ಮತ್ತೊಬ್ಬ ಕಳ್ಳ ಸೇರಿ ಇಬ್ಬರು ಬೈಕ್‌ನಲ್ಲಿ ಕಲ್ಲಹಳ್ಳಿಗೆ ಪರಾರಿ ಯಾಗಿದ್ದರು ಎಂದು ಠಾಣೆಗೆ ದೂರು ನೀಡಿದ್ದರು.
ದೂರು ದಾಖಲು ಮಾಡಿ ಕೊಂಡ ಪೊಲೀಸ್‌ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಅವರು ಜಿ ಪೊಲಿಸ್ ವರೀಷ್ಠಾಧಿಕಾರಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ತಂಡಗಳನ್ನು ರಚಿಸಿ, ಆರೋಪಿಗಳ ಚಲನವಲನಗಳನ್ನು ಗ್ರಹಿಸಿ ಆರೋಪಿಗಳನ್ನು ೨೪ ಗಂಟೆಯ ಬಂಧಿಸಿ ಅವರಿಂದ ೩೦ ಗ್ರಾಂ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಂಡು ಆರೋಪಿಗಳಾದ ದರ್ಶನ್(೨೨) ಹಾಗೂ ವಿನಯ್(೨೦) ಈ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿzರೆ ಎಂದು ತಿಳಿಸಿದರು.
ಸಾಲ ತೀರಿಸಲಿಕ್ಕೆ ಬೇರೆ ದಾರಿ ಕಾಣದೆ ಪ್ರತಿನಿತ್ಯ ವೃದ್ಧೆ ಪಾರ್ವತಮ್ಮ ಅವರ ಚಲನವಲನಗಳನ್ನು ಗಮನಿಸಿ ಅ ೧೪ರ ಸಂಜೆ ಈ ಕೃತ್ಯ ನಡೆಸಿzರೆ ಎಂದು ಆರೋಪಿಗಳು ತಿಳಿಸಿzರೆ.
ಘಟನೆ ನಡೆದ ೨೪ ಗಂಟೆಯ ಕದ್ದ ಮಾಳು ಸಮೇತ ಆರೋಪಿಗಳನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರ ಕಾರ್ಯಚಾರಣೆಗೆ ಎಎಸ್ಪಿ ಸ್ಯಾಮ್ ವರ್ಗೀಶ್ ಅವರು ಶ್ಲಾಘಿಸಿದರು.
ತಂಡದಲ್ಲಿ ಪಿಎಸೈಗಳಾದ ನಿರ್ಮಲ, ಕುಮಾರ್, ಎಎಸ್‌ಐ ಹರೀಶ್, ಸೂಕೂ ಟೀಂನ ರಾಹುಲ್, ರಘು, ಸಿಬ್ಬಂಧಿಗಳಾ ದರಾಜಶೇಖರ್, ವಿನಾಯಕ್, ಅಮ್ಜದ್ ಖಾನ್, ದೇವರಾಜ್, ಜಗದೀಶ್, ರಾಮಚಂದ್ರಪ್ಪ, ಹೇಮಾನಾಯ್ಕ್, ಸಿದ್ದಪ್ಪ, ಮಂಜಪ್ಪ, ರಂಗಪ್ಪ, ಪ್ರವೀಣ್, ಮೂರ್ತಿ, ವೆಂಕಟೇಶ್, ಲೀಕೇಶ್ ಹಾಗೂ ಇತರರು ಇದ್ದರು.