ಹೊನ್ನಾಳಿ: ಸ್ಟೆಲ್ಲಾ ಮೇರಿಸ್ ಶಾಲೆಗೆ ಉತ್ತಮ ಫಲಿತಾಂಶ…
ಹೊನ್ನಾಳಿ (ಹೊಸನಾವಿಕ) : ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಸ್ಟೆಲಾ ಮೇರಿಸ್ ಪ್ರೌಢ ಶಾಲೆಗೆ ಶೇ.೯೬.೭೨ರಷ್ಟು ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಎ ೬೧ ವಿದ್ಯಾರ್ಥಿಗಳ ಪೈಕಿ ೫೯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ zರೆ. ೧೨ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೪೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿzರೆ.
ಶಾಲೆಯ ಕೀರ್ತಿ ಆರ್. ವರ್ಣೇಕರ್ ೬೦೮ ಅಂಕ (ಶೇ.೯೭.೨೮), ಜಿ.ಎ. ಭರತ್ ರಾಜ್ ೬೦೨ ಅಂಕ (ಶೇ.೯೬.೩೨) ಮತ್ತು ಎಂ.ಎನ್. ಸಾಕ್ಷಿ ೫೯೯ ಅಂಕ(ಶೇ.೯೫.೮೪) ಗಳಿಸಿzರೆ.
ಶೇ.೯೬.೭೨ರಷ್ಟು ಫಲಿತಾಂಶ ಗಳಿಸಿರುವ ವಿದ್ಯಾರ್ಥಿಗಳ ಸಾಧನೆಗೆ ಸ್ಟೆಲಾ ಮೇರಿಸ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಜರ್ಜ್ ಪಾರೆಕ್ಕೆಲ್, ಕಾರ್ಯದರ್ಶಿ ಜಲಜ ಜರ್ಜ್, ಮುಖ್ಯ ಶಿಕ್ಷಕಿ ಸಿ.ಎಸ್. ರೂಪಾರಾಣಿ ಹಾಗೂ ಎ ಬೋಧಕ-ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿzರೆ.