ಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ಕಾಲೇಜು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ತವರು ಮನೆ : ಡಾ. ಸನಾವು

Share Below Link

ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ತವರು ಮನೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಸಯ್ಯದ್ ಸನಾವು ಹೇಳಿದರು.
ಅವರು ಇಂದು ಶಿವಮೊಗ್ಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇ ಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊ ಳ್ಳಲಾಗಿದ್ದ ಅಭಿನಂದನಾ ಸಮಾ ರಂಭದಲ್ಲಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವಾಗಬೇಕು. ಸಹ್ಯಾದ್ರಿ ಕಾಲೇಜು ಈ ನಿಟ್ಟಿನಲ್ಲಿ ಹೆಸರು ಪಡೆದಿದ್ದು, ಕುವೆಂಪು ವಿವಿಗೆ ಒಂದು ಘನತೆ ತಂದಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಮತ್ತು ನಾಯಕತ್ವ ಗುಣ ಬೆಳೆಸು ತ್ತವೆ. ಇಲ್ಲಿನ ಅಧ್ಯಾಪಕರು ಕೂಡ ಕ್ರೀಡೆ ಮತ್ತು ಸಾಹಿತ್ಯಿಕ ಚಟುವಟಿ ಕೆಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿzರೆ. ಎನ್‌ಎಸ್‌ಎಸ್ ಘಟಕ ಅತ್ಯುತ್ತಮ ಕೆಲಸ ಮಾಡು ತ್ತಿದೆ. ಬಹುಮಾನ ಪಡೆದ ಎಲ್ಲರಿ ಗೂ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ಮೂಕಾ ಭಿನಯ ಸೇರಿದಂತೆ ಕಂಸಾಳೆ, ಜನ ಪದ ನೃತ್ಯ ಸ್ಪರ್ಧೆ, ಏಕಪಾತ್ರಾ ಭಿನಯ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾ ., ಮನ್ಮಿತ , ನಂದನ, ವಿಜಯಕುಮಾರ್ , ಹಾಲೇಶ್‌ನಾಯ್ಕ , ಕೋಕಿಲಾ ಕೆ., ಶರತ್ . ವಿದ್ಯಾ ಗಿರೀಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಇಂಗ್ಲಿಷ್ ಪ್ರಾಧ್ಯಾ ಪಕ ಪ್ರೊ. ಅವಿನಾಶ್, ಪ್ರಾಧ್ಯಾಪಕ ಲವ ಜಿ.ಆರ್., ಇತಿಹಾಸ ವಿಭಾಗದ ಮುಖ್ಯಸ್ಥ ಶಫಿವು, ಸಹಾಯಕ ಪ್ರಾಧ್ಯಾ ಪಕ ಚಂದ್ರ ಶೇಖರ್ ಮುಂತಾದವರಿದ್ದರು.