ಜಿಲ್ಲಾ ಸುದ್ದಿತಾಜಾ ಸುದ್ದಿ

ಪೌರ ಕಾರ್ಮಿರಿಗೆ ಮನೆ- ಸಮುದಾಯ ನಿರ್ಮಾಣ ಕಾಮಗಾರಿ ಸ್ಥಗಿತ: ಕೆಬಿಪಿ ಆಕ್ರೋಶ

Share Below Link

ಶಿವಮೊಗ್ಗ: ಪೌರ ಕಾರ್ಮಿಕರ ಮನೆಗಳ ನಿರ್ಮಾಣ ಹಾಗೂ ಪೌರ ಕಾರ್ಮಿಕ ಸಮುದಾಯ ಭವನದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್‌ನ ರಾಜ್ಯ ಕೋರ್‌ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೆಗ್ಗ ನಗರವನ್ನು ಸ್ವಚ್ಛ ಮಾಡುವುದನ್ನು ಪೌರ ಕಾರ್ಮಿಕರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದು, ಅವರು ಒಂದು ವೇಳೆ ಒಂದು ದಿನದ ಮಟ್ಟಿಗೆ ಕೆಲಸ ನಿಲ್ಲಿಸಿದರೆ ನಗರದಲೆಲ್ಲ ಕಸದ ರಾಶಿ ಕಾಣಬಹುದಾಗಿದೆ. ಅವರ ಅವಶ್ಯಕತೆ ಇರುವುದರಿಂದ ಅವರಿಗೆ ನಾನು ಶಾಸಕನಾಗಿzಗ ಗಹಭಾಗ್ಯ ಯೋಜನೆಯಡಿಯಲ್ಲಿ ಮನೆಕಟ್ಟಿಕೊಡಲು ಕಾರ್ಯರೂಪಕ್ಕೆ ತಂದಿz ಎಂದರು.


ಜೆಎನ್‌ಎನ್‌ಸಿ ಕಾಲೇಜು ಹಿಂಭಾಗದಲ್ಲಿ ೬ ಎಕರೆ ಜಗದಲ್ಲಿ ಜಿ-ಪ್ಲಸ್ ಟು ಮಾದರಿಯಲ್ಲಿ ೧೬೯ ಕಾರ್ಮಿಕರಿಗೆ ಮನೆ ಕಟ್ಟಿಕೊಡಲು ಗಹಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರದಿಂದ ೧೭ ಕೋಟಿ ರೂ. ಮಂಜೂರಾಗಿ, ಪೌರ ಕಾರ್ಮಿಕ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ೨೭-೪-೨೦೨೦ರಲ್ಲಿ ಕಾಮಗಾರಿಗೆ ಟೆಂಡರ್ ಪಡೆದ ಗುತ್ತಿಗೆದಾರ ೫ ಸಾವಿರ ರೂ.ನ ಛಾಪಕಾಗದದಲ್ಲಿ ಷರತ್ತುಗಳನ್ನು ಒಪ್ಪಿಕೊಂಡು ೨೬-೩-೨೦೨೧ರಲ್ಲಿ ಮನೆಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಆದರೆ ಮೂರುವರೆ ವರ್ಷಗಳಾಗಿದ್ದರೂ ಸಹ ಒಂದು ಮನೆಯನ್ನು ಸಹ ಪೂರ್ಣಗೊಳಿಸಿಲ್ಲ ಎಂದು ದೂರಿದರು.
೧೭ಕೋಟಿ ಅನುದಾನ ಸೇರಿದಂತೆ ಶೇ.೧೧ರಷ್ಟು ಹೆಚ್ಚಿನ ಹಣವನ್ನು ಸಹ ಬಿಡುಗಡೆ ಮಾಡಿದ್ದು, ಶೇ.೫೦ರಷ್ಟು ಕಾಮಗಾರಿ ಆಗದಿದ್ದರು ಸಹ ೮ ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಆ ಕಾಮಗಾರಿ ಸಹ ಸಂಪೂರ್ಣ ಕಳಪೆಯಾಗಿದೆ ಎಂದರು.
ಅದೇ ರೀತಿ ಚಿಕ್ಕಲ್‌ನಲ್ಲಿ ಪೌರಕಾರ್ಮಿಕರ ಭವನ ನಿರ್ಮಾಣಕ್ಕೆ ನಾನು ಶಾಸಕನಾಗಿzಗ ೩.೫೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು ಈಗಾಗಲೇ ಈ ಕಾಮಗಾರಿಗೆ ೨.೬೫ ಕೋಟಿ ರೂ. ಬಿಡುಗಡೆಯಾಗಿದ್ದರೂ ಸಹ ಶೇ.೭೫ರಷ್ಟು ಮಾತ್ರ ಕಾಮಗಾರಿಯಾಗಿದೆ ಎಂದರು. ಈ ಎರಡು ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಸಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತನಾಡದೇ ಮನಕ್ಕೆ ಜರಿzರೆ. ಜಿಧಿಕಾರಿಗಳು ಈಗ ಆಗಿರುವ ಕಾಮಗಾರಿಯ ಬಗ್ಗೆ ಪರಿಶೀಲಿಸಲು ಒಂದು ತಂಡವನ್ನು ರಚಿಸಿ ಪೂರ್ಣಗೊಳ್ಳಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.
ಮನೆಗಳ ನಿರ್ಮಾಣ ಹಾಗೂ ಸಮುದಾಯ ಭವನ ಪೂರ್ಣಗೊಳಿಸಬೇಕೆಂದು ಒಂದು ವೇಳೆ ಪೌರ ಕಾರ್ಮಿಕರು ಹೋರಾಟ ನಡೆಸಿದರೆ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಜೆಡಿಎಸ್ ಅಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ಸಿದ್ದಪ್ಪ, ಹೆಚ್.ಎಂ.ಸಂಗಯ್ಯ, ದಯಾನಂದ್, ಸಂಜಯ್‌ಕಶ್ಯಪ್, ಮಾದವಮೂರ್ತಿ, ಸಿದ್ದೇಶ್, ಅರುಣ್, ನೀಲು, ಪ್ರಶಾಂತ್, ಲೋಹಿತ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *