ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಭಾರತ ದೇಶದ ಹೆಸರಿನ ಇತಿಹಾಸ ಮತ್ತು ಅದರ ಮಹಾನತೆ

Share Below Link

ಸೃಷ್ಟಿಯ ನಿರ್ಮಾಣವಾಗುವ ಸಮಯದಲ್ಲಿ ಸತ್ಯಯುಗವಿತ್ತು ಮತ್ತು ದೇಶದ ಹೆಸರು ಧರ್ಮ ಎಂದಾಗಿತ್ತು. ಮುಂದೆ ಮನುಷ್ಯನ ಧಾರ್ಮಿಕ ಆಚರಣೆಯು ಕಡಿಮೆಯಾಗತೊಡಗಿತು. ಮಾನವ ಅನುಚಿತ ಕಾರ್ಯಗಳನ್ನು ಮಾಡತೊಡಗಿದನು ಇದರಿಂದ ತ್ರೇತಾಯುಗದ ಸಮಾಜ ಮತ್ತು ರಾಷ್ಟ್ರದಲ್ಲಿ ಸಾತ್ವಿಕತೆಯು ಉಳಿಯುವ ದೃಷ್ಟಿಯಿಂದ ದೇಶದ ಹೆಸರನ್ನು ವೇದ ಧರ್ಮ ಎಂದು ಇಡಲಾಯಿತು.
ಇದರ ನಂತರ ದ್ವಾಪರಯುಗದಲ್ಲಿ ಭರತ ಎಂಬ ಹೆಸರಿನ ಕುರುವಂಶಸ್ಥ ರಾಜನಿದ್ದನು. ಅವನ ಹೆಸರಿನಿಂದಾಗಿ ಈ ದೇಶದ ಹೆಸರು ಭಾರತ ಎಂದಾಯಿತು. ಕಲಿಯುಗದ ಆರಂಭದಲ್ಲಿ ದೇಶದ ಹೆಸರು ಆರ್ಯ ವರ್ತ ಎಂದು ಇತ್ತು; ಆದರೆ ಕಾಲದ ಆವಶ್ಯಕತೆಯ ಅನುಸಾರ ನಮ್ಮ ಭೂಮಿಯ ಹೆಸರನ್ನು ಹಿಂದೂಸ್ಥಾನ ಎಂದು ಇಡಲಾಯಿತು. ಈ ಹೆಸರು ಕಲಿಯುಗದ ಅಂತ್ಯದ ತನಕ ಇರಲಿ ಎಂಬ ಮನೋಭಾವವಾಗಿತ್ತು.
ಪ.ಪೂ. ಕಾಣೆ ಮಹಾರಾಜರು ಹೇಳಿರುವ ಪ್ರಕಾರ ಮೊದಲು ಧರ್ಮ ನಂತರ ವೇದಧರ್ಮ ಅದರ ನಂತರ ಭಾರತ ಮತ್ತೆ ಆರ್ಯಧರ್ಮ ಮತ್ತು ಅದರ ನಂತರ ಹಿಂದೂ ಧರ್ಮ ಇವುಗಳೆ ಸಮಾನಾರ್ಥ ಶಬ್ದಗಳೇ ಆಗಿವೆ. ಅಂದರೆ ನೋಡಲು ಶಬ್ದಗಳು ಬೇರೆ ಬೇರೆಯಾದರೂ ಒಂದೇ ಅರ್ಥವನ್ನು ಹೊಂದಿವೆ.
೧. ಸಂತರು ಭಾರತದ ಗುಣಗಾನವನ್ನು ಹೇಗೆ ಮಾಡುತ್ತಾರೆ ?
ನಮ್ಮ ಪೂರ್ವಜರಾದ ರಾಜರು ಇಡೀ ಪೃಥ್ವಿಯ ಮೇಲೆ ರಾಜ್ಯವಾಳುತ್ತಿದ್ದರು; ಆದರೆ ಅವರ ರಾಜಧಾನಿ ವರ್ತಮಾನದ ಭಾರತದಲ್ಲಿಯೇ ಇತ್ತು. ಅದನ್ನು ಇಂದ್ರಪ್ರಸ್ಥ ಎನ್ನಲಾಗುತ್ತಿತ್ತು. ಅದು ಧರ್ಮದ ಕೇಂದ್ರವಾಗಿತ್ತು. ಆದುದರಿಂದ ಈ ಜಗತ್ತಿನಲ್ಲಿ ಸುಖ ಶಾಂತಿ ಸ್ಥಾಪನೆಯಾಗಬೇಕೆಂದರೆ, ಅದರ ಆರಂಭ ಭಾರತದಿಂದಲೇ ಆಗಬೇಕಾಗಿದೆ; ಏಕೆಂದರೆ ಈಗ ಕೇವಲ ಭಾರತದಲ್ಲಿ ಮಾತ್ರ ಧರ್ಮವು ಉಳಿದಿದೆ.
ಸ್ವಾಮಿ ವಿವೇಕಾನಂದರು, ಯಾವಾಗ ಭಾರತದ ನೈತಿಕತೆಯ ಅಧಃಪತನ ಅದರ ಚರಮವನ್ನು ಮುಟ್ಟುತ್ತದೋ, ಆಗ ವಿಶ್ವದ ವಿನಾಶವಾಗುತ್ತದೆ ಎಂದು ಹೇಳಿzರೆ.
ಭಾರತ ಶಬ್ದವನ್ನು ಭಾ + ರಥ ಎಂದು ವಿಂಗಡಿಸಬಹುದು. ಭಾ ಅಂದರೆ ಆತ್ಮವಾಗಿದೆ ಮತ್ತು ರಥ ಅಂದರೆ ಮಾರ್ಗ. ಯಾವುದು ಯಾವಾಗಲೂ ಆತ್ಮಭಾವದಲ್ಲಿ ಮಗ್ನವಾಗಿರುತ್ತದೊ, ಅದುವೇ ಭಾರತ.
ಸಂತರು ಹೀಗೆ ಹೇಳುತ್ತಾರೆ ; ಯಾವುದೋ ರೋಗದಿಂದ ನಮ್ಮ ಶರೀರದ ಎ ಅವಯವಗಳು ಒಣಗಿ ಹೋಗಿದ್ದರೂ ಎಲ್ಲಿಯ ತನಕ ನಮ್ಮ ಹೃದಯಬಡಿತ ನಡೆಯುತ್ತಿರುತ್ತದೋ ಅಲ್ಲಿ ತನಕ ನಾವು ಜೀವಂತವಾಗಿರುತ್ತೇವೆ. ಇಂದು ವಿಶ್ವದ ಅವಸ್ಥೆಯೂ ರೋಗಗ್ರಸ್ತ ಶರೀರವನ್ನು ಹೋಲುತ್ತದೆ. ಇದನ್ನು ಧರ್ಮಗ್ಲಾನಿ ಎಂದು ಹೇಳುತ್ತಾರೆ.
ಭಾರತವು ವಿಶ್ವದ ದೇಹದ ಹೃದಯಸ್ಥಾನದಲ್ಲಿ ವಿರಾಜಮಾನ ವಾಗಿದೆ. ಕೆಲವು ಪ್ರಾಚೀನ ಸಂತರು ಮತ್ತು ಅವರ ಶಿಷ್ಯರು ಈಗಲೂ ಈ ಭೂಮಿಯ ಮೇಲೆ ಉಪಸ್ಥಿತರಿzರೆ. ಈ ವಿಶ್ವರೂಪಿ ಶರೀರದ ಹೃದಯದ ರೋಗವನ್ನು ನಿವಾರಣೆ ಮಾಡಲು, ಆ ಧರ್ಮನಿಷ್ಠರ ಮಾರ್ಗದರ್ಶನದ ಅನುಸಾರ ನಾವು ನಮ್ಮ ವ್ಯಕ್ತಿತ್ವವನ್ನು ಅಧಿಕಾಧಿಕ ಸಾತ್ವಿಕ ಮಾಡಬೇಕು. ಆಗಲೇ ಈ ವಿಶ್ವರೂಪಿ ದೇಹದ ಸ್ವಾಸ್ಥ್ಯವು ಸುಧಾರಿಸುತ್ತದೆ.
೨. ಪಾಶ್ಚಾತ್ಯ ದೇಶದವರಿಂದ ಭಾರತದ ಮಹಾನತೆಯ ವರ್ಣನೆ
೧. ಸುಪ್ರಸಿದ್ಧ ಇತಿಹಾಸಕಾರ ಆರ್ನಾಲ್ಡ್ ಟಾಯ್ನ್ ಬಿಯವರು ಭಾರತವು ಅತ್ಯಂತ ಸುಂದರ ಮತ್ತು ಪರಿಪೂರ್ಣ ತತ್ವeನದಿಂದ ತುಂಬಿರುವ ದೇಶವಾಗಿದೆ. ವಿಶ್ವವನ್ನು ಉನ್ನತಿಯ ಕಡೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯು ಭಾರತದ ಮೇಲಿದೆ. ಹಾಗೇನಾದರೂ ಆಗದಿದ್ದರೆ ಇಡೀ ಮನುಷ್ಯ ಜತಿಯ ಭಾವೀ ಪೀಳಿಗೆಯ ಕಲ್ಯಾಣವು ತೊಂದರೆಗೆ ಸಿಲುಕುತ್ತದೆ. ಭಾರತದ ಮೇಲೆ ಇಷ್ಟು ದೊಡ್ಡ ಆಧ್ಯಾತ್ಮಿಕ ಜವಾಬ್ದಾರಿಯಿದೆ ಎಂದಿzರೆ.
೨. ವಿದೇಶಿ ಪ್ರಾಧ್ಯಾಪಕ ವಿದ್ವಾನ್ ಮ್ಯಾಕ್ಸ್ ಮುಲ್ಲರ ಸಂಪದ್ಭರಿತ ಶಕ್ತಿಯುತ ಮತ್ತು ಪ್ರಕೃತಿ ಸೌಂದರ್ಯದಿಂದ ಕೂಡಿದ ಪರಿಪೂರ್ಣ ದೇಶ ಯಾವುದು ಎಂದು ನನ್ನಲ್ಲಿ ಕೇಳಿದರೆ ನಾನು ಭಾರತದ ಹೆಸರನ್ನೇ ಹೇಳುತ್ತೇನೆ.
ಯಾರಾದರೂ ನನಗೆ ಯಾವ ದೇಶದ ಜನರು ಈಶ್ವರನ ಸೃಷ್ಟಿಯ ಪರಿಪೂರ್ಣ ವಿಕಾಸವನ್ನು ಮಾಡಿ ಜೀವನದಲ್ಲಿ ಬರುವ ಕಷ್ಟಗಳಿಗೆ ಉಪಾಯವನ್ನು ಹುಡುಕಿzರೆ ಎಂದು ಪ್ರಶ್ನೆಯನ್ನು ಕೇಳಿದರೆ ನಾನು ಭಾರತದ ಹೆಸರನ್ನೇ ಹೇಳುತ್ತೇನೆ.
ನಾನು ಭಾರತೀಯ ವಿಚಾರಧಾರೆಯ ಅನುಸರಣೆ ಮಾಡಲು ಇಚ್ಛಿಸುತ್ತೇನೆ. ಭಾರತೀಯ ವಿಚಾರಧಾರೆಯು ಜೀವನವನ್ನು ಅಧಿಕ ಸಫಲ, ಪರಿಪೂರ್ಣ, ಪ್ರೇಮಭಾವ ಹೆಚ್ಚಿಸುವಂತಹದ್ದು ಆದುದರಿಂದ ಭಾರತೀಯ ತತ್ವeನವನ್ನು ಅವಲಂಬಿಸುವುದು ಆವಶ್ಯಕವಾಗಿದೆ.
ಸಂಕಲನ : ವಿಜಯ ರೇವಣಕರ ಹಿಂದೂ ಜನಜಗೃತಿ ಸಮಿತಿ, ಶಿವಮೊಗ್ಗ