ಇತರೆತಾಜಾ ಸುದ್ದಿಲೇಖನಗಳು

ನನಗೊಂದು ಸುಂದರ ಬದುಕು ಕೊಟ್ಟ ಹಿರೇಕಲ್ ಮಠ ಕ್ಷೇತ್ರ…

Share Below Link

ತಪೋವನ ಸದೃಶವಾದ ಇಂದಿನ ದಾವಣಗೆರೆ ಜಿ, ಹೊನ್ನಾಳಿ ಹಿರೇಕಲ್‌ಮಠ ಪರಿಸರದಲ್ಲಿ ನಾನೊಬ್ಬ ವಿದ್ಯಾರ್ಥಿಯಾಗಿ ಕಳೆದ ಕಾಲವನ್ನು ನೆನೆದರೆ ಧನ್ಯತೆ ಕೃತಜ್ಞತಾ ಭಾವನೆ ಮೂಡುತ್ತದೆ. ಬಡತನದಿಂದಾಗಿ ವಿದ್ಯಾಭ್ಯಾಸವೇ ಗಗನಕುಸುಮವಾಗಿದ್ದ ನನ್ನಂಥವರು ಇಂದು ತಲೆ ಎತ್ತಿ ಬದುಕಲು ಸಾಧ್ಯವಾಗಿರುವುದು ಶ್ರೀ ಕ್ಷೇತ್ರ ಒದಗಿಸಿದ ವಸತಿಗಳ ಆಶ್ರಯದಿಂದಲೇ.
ಹಿರಿಯ ಕಲ್ಮಠದ ಸುತ್ತಮುತ್ತಲ ವಾಸಿಸುತ್ತಿರುವ ಹಿರಿಯರುಗಳು ಮತ್ತು ಶ್ರೀಮಠದೊಂದಿಗೆ ಅವಿನಾಭ ಸಂಬಂಧವಿಟ್ಟ ಭಕ್ತರುಗಳವರ ಪ್ರಕಾರ ಸುಮಾರು ೮೦೦ ವರ್ಷಗಳ ಹಿಂದೆ ಶ್ರೀಮಠವು ಶ್ರೀ ಚನ್ನಪ್ಪ ಸ್ವಾಮಿ ಅವರಿಂದ ಕಟ್ಟಲ್ಪಟ್ಟಿತು ಎಂದು ಗೊತ್ತಾಗಲಿದೆ. ಶ್ರೀಶೈಲ ಜಗದ್ಗುರು ಜಡೆಯರ್ ಶಂಕರ ಸ್ವಾಮಿಗಳು ತುಂಬಿದ ಹೊಳೆಯನ್ನು ತಮ್ಮ ಗದ್ದುಗೆಯ ಕಂಬಳಿಯನ್ನು ಹಾಸಿ ತಮ್ಮ ಬೆತ್ತವನ್ನೇ ಉಪಯೋಗಿಸಿ ತುಂಗಭದ್ರಾ ನದಿಯನ್ನು ದಾಟಿ ಪವಾಡಗೈದು ಇಂದಿನ ಹಿರಿಯಕಲ್ಮಟವಿರುವ ಪ್ರದೇಶಕ್ಕೆ ಬಂದು ಶ್ರೀ ಚನ್ನಪ್ಪ ಎಂಬ ವಟುವಿಗೆ ಮಠವನ್ನು ಕಟ್ಟುವಂತೆ ಆಶೀರ್ವದಿಸಿದ ಫಲವೇ ಇಂದು ಪ್ರಸಿದ್ಧ ಹಿರೇಕಲ್ ಮಠ ಕ್ಷೇತ್ರವಾಗಿ ನಮ್ಮೆದುರು ಗೋಚರವಾಗುತ್ತಿದೆ.

ಹಿಂದಿನ ಗುರುಗಳಾದ ಶ್ರೀ ಮೃತ್ಯುಂಜಯ ಅವರು ಸ್ವತಃ ಈ ಕ್ಷೇತ್ರಕ್ಕೆ ಬಂದು ಹೋಗುವ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಪ್ರಾರಂಭಿಸಿ ಕಾರ್ಯನಿಮಿತ್ತ ಬಂದು ದರ್ಶನ ಪಡೆದವರಿಗೆ ಪ್ರಸಾದ ಭಾಗ್ಯವನ್ನು ಕರುಣಿಸುತ್ತಿದ್ದರು. ಅದನ್ನೇ ಚಂದ್ರಶೇಖರ ಸ್ವಾಮೀಜಿಯವರು ಮುಂದುವರಿಸಿ ಯಾರೇ ಭಕ್ತರು ಮಠಕ್ಕೆ ಬಂದು ತಮ್ಮ ದರ್ಶನ ಪಡೆದಾಗ ಅವರಿಂದ ಹೊರಡುತಿದ್ದ ಮೊದಲ ಮಾತು ಪ್ರಸಾದ ಮಾಡಿಕೊಂಡು ಹೋಗ್ರಪ್ಪ. ನಾನು ಶ್ರೀಮಠದಲ್ಲಿ ಮೂರನೇ ತರಗತಿ ಓದಲು ಸೇರಿಕೊಂಡಂತ ಸಂದರ್ಭದಲ್ಲಿ ರಾತ್ರಿ ಹತ್ತರ ಘಂಟೆ ನಂತರ ಕೇಳುತ್ತಿದ್ದ ಘೋಷಣೆ ಊಟ ಮಾಡೋರು ಯಾರಾದ್ರೂ ಇದ್ರೆ ಬನ್ನಿ ಇಷ್ಟೊಂದು ಜನಕ್ಕೆ ಊಟ ಹಾಕಲು ಈ ಮಠದ ಅಕ್ಷಯಪಾತ್ರೆ ಎಂಬುದು ಸೂಜಿಗವಲ್ಲ ದಾಸೋಹ ಪ್ರಾರಂಭಿಸಿದ ಮೊದಲನೆ ಮೃತ್ಯುಂಜಯ ಸ್ವಾಮಿಗಳು ಅವರ ಶಿಷ್ಯಬಳಗ ಸೇರಿ ಸುತ್ತಲ ಹಳ್ಳಿಗಳಲ್ಲಿ ಅಡ್ಡಾಡಿ ಅವರಿಂದ ದವಸ ಧಾನ್ಯ ಸಂಗ್ರಹಿಸಿ ತರುತ್ತಿದ್ದರು. ಚಂದ್ರಶೇಖರ ಸ್ವಾಮಿಗಳು ಕಾರ್ಯಕ್ಷೇತ್ರ ವಿಸ್ತರಿಸಿದಾಗ ಮೊದಲು ಮಾಡಿದ ಕೆಲಸವೇ ಇಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಅರಿತು ತಮ್ಮ ಸಂಪೂರ್ಣ ಶಕ್ತಿಯನ್ನು ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಬಳಸಿದರು. ಇಲ್ಲಿನ ನಿತ್ಯ ದಾಸೋಹ ಶಿಕ್ಷಣ ಕಾರ್ಯ ಕಂಡವರು ತಾವಾಗಿಯೇ ಗಾಡಿಗಳಲ್ಲಿ ಉಗ್ರಾಣಕ್ಕೆ ಕಾಣಿಕೆಯಾಗಿ ಅರ್ಪಿಸುವುದನ್ನು ಚಿಕ್ಕವನಾಗಿzಗಲೇ ನಾನು ಕಂಡಿದ್ದೇನೆ. ಮಠದ ಸಾಮಾಜಿಕ ಜವಾಬ್ದಾರಿಯಲ್ಲಿ ತಮ್ಮ ಪಾತ್ರವು ಇದೆ ಎಂಬ ವಿಶ್ವಾಸವನ್ನು ಜನರಲ್ಲಿ ಉಳಿಸಿ ಬೆಳೆಸಿರುವುದು ಲಿಂಗೈಕ್ಯ ಚಂದ್ರಶೇಖರ ಗುರುಗಳವರ ವ್ಯಕ್ತಿತ್ವವೇ ನಾನು ಈ ಮಠದಲ್ಲಿzಗ ಇಲ್ಲಿ ಆಸರೆ ಪಡೆದವರ ಸಂಖ್ಯೆ ಸುಮಾರು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಷ್ಯ ಯಾವುದೇ ಸಂಸ್ಥೆ ಇಷ್ಟು ವಿದ್ಯಾರ್ಥಿಗಳಿಗೆ ಉಚಿತ ಆಶನ ವಸತಿಯ ಅವಕಾಶ ಕಲ್ಪಿಸಿದ ನಿದರ್ಶನ ಈ ಕಾಲಕ್ಕಂತು ಇರಲಿಲ್ಲ. ಈಗ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟು ಮಿಗಿಲಾಗಿದೆ ಚಂದ್ರಶೇಖರ ಗುರುಗಳಿಗೆ ಕೆಲಸದಕಡೆ ಒತ್ತಡವಿದ್ದರೂ ಶಿಷ್ಯರೊಂದಿಗೆ ಪ್ರಾರ್ಥನೆಗೆ ಕೊಡುವ ಈ ಸಂದರ್ಭವನ್ನು ಚಂದ್ರಶೇಖರ ಸ್ವಾಮಿಗಳು ತಪ್ಪಿಸಿಕೊಳ್ಳುತ್ತಿರಲಿಲ್ಲ. ಬೆಳಗಿನ ಜವ ಸ್ವಾಮಿಗಳೇ ವಿದ್ಯಾರ್ಥಿಗಳು ಮಲಗಿದ ಕೊಠಡಿಗಳಿಗೆ ಬಂದು ಅವರನ್ನು ಎಚ್ಚರಿಸಿ ಓದಿಸುತ್ತಾ ಕುಳಿತುಕೊಳ್ಳುವುದು, ರಾತ್ರಿ ಮಲಗುವ ಪೂರ್ವದಲ್ಲಿ ಎ ವಿದ್ಯಾರ್ಥಿಗಳಿಗೆ ಓದಿಸಿ ಲೈಟ್ ಆಫ್ ಮಾಡಿಸಿ ಮಲಗಿಕೊಳ್ಳಲು ಹೇಳುತ್ತಿದ್ದದ್ದೂ ನನ್ನ ಕಣ್ಣ ಮುಂದೆ ಗೋಚರಿಸುತ್ತಿದೆ. ಜೊತೆಗೆ ಅಧ್ಯಯನ ಚಿಂತನೆ ಯಾವುದೇ ವಿಷಯದ ಕುರಿತು ಉಪನ್ಯಾಸಕ್ಕೆ ನಿಂತರೆ ತದ್ಭವ eನ ಕ್ಷೇತ್ರಗಳಲ್ಲಿನ ತಿಳುವಳಿಕೆ ತಮ್ಮ ಸಮಕಾಲೀನತೆಯಲ್ಲಿ ಅವುಗಳಿಗೆ ತೋರುವ ಪ್ರಕ್ರಿಯೆ ಮತ್ತು ಅವುಗಳ ಕುರಿತು ವ್ಯಾಖ್ಯಾನದಿಂದ ಬೆರಗುಗೊಳಿಸುತ್ತಿದ್ದರು ದಿನವೂ ಬರುವ ಭಕ್ತಾದಿಗಳ ಯೋಗ ಕ್ಷೇಮ ವಿಚಾರಿಸುವ ಗ್ರಾಮೀಣ ಜನರ ನಂಬಿಕೆಗಳನ್ನು ಆಘಾತಗೊಳಿಸದೆ ಅವರಿಗೆ ಅಂತ ತಂತ್ರಾದಿಗಳನ್ನು ಬರೆದುಕೊಟ್ಟು ಸಮಾಧಾನಗೊಳಿಸುವ ಸಮಯವಿದ್ದರೆ ತಾವೇ ಕೂಲಿಗಾರರಂತೆ ಕೆಲಸ ಮಾಡುವ ಊಟದ ಪಂಕ್ತಿಯ ನಡುವಿನಲ್ಲಿ ನಿಂತು ಮಕ್ಕಳು ಭಕ್ತಾದಿಗಳು ಊಟ ಮಾಡುವುದನ್ನು ಪ್ರೀತಿಯಿಂದ ವೀಕ್ಷಿಸುವ ಚಟುವಟಿಕೆಗಳಲ್ಲಿನ ಅವರ ತುಡಿಯುವ ಜೀವನ ಕಾರುಣ್ಯಕ್ಕೆ ಬೆರಗಾಗಿz ಸನ್ಯಾಸ ಎಂದರೆ ಸಂಸಾರ ಮತ್ತು ಸಮಾಜವನ್ನು ತೊರೆದು ಜನಸಂಘ ದೂರವಾದ ಕಾಡುಮೇಡಲ್ಲಿ ಯಾರು ಪ್ರವೇಶಿಸಲಾಗದ ಮಠ ಮಂದಿರಗಳಲ್ಲಿ ಧ್ಯಾನ ತಪಸ್ಸುಗಳಲ್ಲಿ ನಿರತರಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವುದು ಎಂಬ ಅರ್ಥವಿತ್ತು. ಆದರೆ ಧರ್ಮ ಎಂದರೆ ಬಹುಜನಹಿತ ಮತ್ತು ಸುಖಕ್ಕಾಗಿ ತಮ್ಮನ್ನು ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳುವಿಕೆ ಎಂಬ ಬುದ್ಧನ ಮಾತಿಗೆ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮೂರ್ತರೂಪವಾಗಿದ್ದರು. ಬುದ್ಧನ ಮಾನವ ಕಾರುಣ್ಯವನ್ನು ಬಸವನ ತೀವ್ರ ಸಾಮಾಜಿಕ ಕಾಳಜಿಗಳನ್ನು ಒಟ್ಟಿಗೆ ಕಾಣಬಹುದಾದದ್ದು ಹಿರೇಕಲ್ ಮಠದಂತ ಅಪರೂಪದ ಕ್ಷೇತ್ರಗಳಲ್ಲಿ ಹಾಗೂ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಂತವರ ವ್ಯಕ್ತಿತ್ವದಲ್ಲಿ ಮಾತ್ರ.

  • ಎಂ.ಪಿ.ಎಂ. ಷಣ್ಮುಖಯ್ಯ
    ರಾಜ್ಯಾಧ್ಯಕ್ಷರು
    ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ.) ಬೆಂಬಳೂರು.