ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿಂದುತ್ವಕ್ಕೆ ಧಕ್ಕೆ ಬಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ …

Share Below Link

ಶಿವಮೊಗ್ಗ: ಹಿಂದುತ್ವಕ್ಕೆ ಧಕ್ಕೆ ಬಂದರೆ ಈ ಈಶ್ವರಪ್ಪ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಈಶ್ವರಪ್ಪ ಗುಡುಗಿzರೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಡೆದ ವಿಜಯ ಸಂಕಲ್ಪ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುತ್ವದ ಉಳಿಸಲು ಸಾಧ್ಯವಾಗುವುದು ಈಶ್ವರಪ್ಪರವರಿಂದ ಮಾತ್ರ. ಇದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಹಿಂದುತ್ವದ ಪರ ಇರುವ ಎಲ್ಲ ಮತದಾರರು, ಕಾರ್ಯಕರ್ತರು ರಾಷ್ಟ್ರ ಭಕ್ತ ಬಳಗ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಲು ನಿರ್ಧರಿಸಿzರೆ ಎಂದರು.
ನನ್ನ ಗೆಲುವು ನಿಶ್ಚಿತ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ವಿಲ್ಲ. ಎರಡೂ ಪಕ್ಷಗಳ ನಾಯಕರ ವರ್ತನೆಯಿಂದ ಬೇಸತ್ತಿರುವ ಮತದಾರರು ಹೊಸ ಆಯ್ಕೆಯನ್ನು ಬಯಸಿzರೆ ಎಂದು ಹೇಳಿದರು.
ಇಲ್ಲಿಯವರೆಗೂ ಇದ್ದ ಸಂಸದರು ಇಲ್ಲಿನ ಮೀನುಗಾರರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲ ರಾಗಿzರೆ. ಆದ್ದರಿಂದ ಮೀನು ಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಬೆಂಬಲ ನೀಡುತ್ತಿzರೆ. ಚುನಾವಣೆಯಲ್ಲಿ ಗೆದ್ದ ನಂತರ ಮೀನುಗಾರರ ಸಮಸ್ಯೆ ಬಗೆ ಹರಿಸಿ ಅವರ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.
ಪೆನ್ ಡ್ರೈವ್ ಪ್ರಕರಣ ಒಂದು ದರಿದ್ರ ವಿಷಯ. ಅಂತಹ ವಿಷಯದ ಬಗ್ಗೆ ಮಾತನಾಡಿದ್ರೆ ನಮ್ಮ ಬಾಯಲ್ಲಿ ಹುಳ ಬೀಳುತ್ತೆ. ಸ್ತ್ರೀಯರನ್ನು ನಾವು ಸೀತೆ, ಸಾವಿತ್ರಿ ಯರಂತೆ ಪೂಜ್ಯ ಭಾವನೆಯಿಂದ ನೋಡುತ್ತೇವೆ. ದೇಶದಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆ. ದುಶ್ಯಾಸನ ಸ್ತ್ರೀಗೆ ಅವಮಾನ ಮಾಡುವ ಪ್ರಯತ್ನ ಮಾಡಿದಾಗ ಶಿಕ್ಷೆಯಾಗಿದ್ದು ದುಶ್ಯಾಸನನಿಗೆ. ಮಹಿಳೆಯರಿಗೆ ಅವಮಾನ ಮಾಡುವ ದುಶ್ಯಾಸನ ಮಾನಸಿಕತೆ ಇರುವಂತವರಿಗೆ ಇಡೀ ದೇಶ ಪ್ರಪಂಚವೇ ಚೀ ಥೂ ಎನ್ನುತ್ತಿದೆ. ಮಹಿಳೆಯರನ್ನು ದುರುಪಯೋಗ ಮಾಡಿಕೊಂಡದ್ದು ತಪ್ಪು. ಅಂತವರಿಗೆ ಖಂಡಿತ ಸರಿಯಾದ ಶಿಕ್ಷೆ ಆಗಲಿದೆ ಎಂದು ವಾಗ್ದಾಳಿ ನಡೆಸಿದರು.
ಈಗ ಚುನಾವಣಾ ಸಮಯದಲ್ಲಿ ನಮ್ಮ ಬಗ್ಗೆ ಅಪಮಾನ ಮಾಡಲು ಕುತಂತ್ರ ರಾಜಕಾರಣ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಕೋರ್ಟ್‌ನಿಂದ ಸ್ಟೇ ತರಲಾಗಿದೆ. ಕುತಂತ್ರ ರಾಜಕಾರಣಕ್ಕೆ ಹೇಗೆ ಉತ್ತರ ಕೊಡಬೇಕೆಂದು ನಮಗೆ ಗೊತ್ತಿದೆ ಎಂದು ಕಿಡಿಕಾರಿದರು.