ಆರ್ಎಸ್ಎಸ್ನಿಂದ ಹಿಂದೂ ಸಮಾಜ ಜಾಗೃತವಾಗಿದೆ….
ಶಿವಮೊಗ್ಗ : ಸಂಘ ಕಳೆದ ನೂರು ವರ್ಷಗಳಿಂದ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, ಹಿಂದೂ ಸಮಾಜ ಜಗೃತವಾಗುವ ಕೆಲಸ ಮಾಡಿದೆ. ಜನರ ಮಾನಸಿಕತೆ ಯಲ್ಲೂ ದೊಡ್ಡದಾದ ಪರಿವರ್ತನೆ ಯಾಗಿದೆ. ಮುಂದೆ ಇನ್ನಷ್ಟು ಕಾರ್ಯಕ್ಷೇತ್ರದ ವಿಸ್ತರಣೆ ಮಾಡಲು ಸ್ವಯಂ ಸೇವಕರು ತಮ್ಮ ಸಮಯ ನೀಡುವಂತೆ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಕರೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ವಿಜಯ ದಶಮಿ ಉತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಆಕರ್ಷಕ ಪಥಸಂಚಲನ ಬಳಿಕ ಅಲ್ಲಮ ಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸಭೆಯನ್ನುzಶಿಸಿ ಮಾತನಾಡಿದ ಅವರು, ಸಾಮಾಜಿಕ ಸಾಮರಸ್ಯಕ್ಕಾಗಿ ಸಂಘ ನೂರು ವರ್ಷಗಳಿಂದಲೂ ಕೆಲಸ ಮಾಡಿದ್ದರೂ ಇನ್ನೂ ಅಸ್ಪಶ್ಯತೆ ಹೋಗಿಲ್ಲ. ಮನೆಗಳಲ್ಲಿ, ಮಂದಿರ ಗಳಲ್ಲಿ, ಸ್ಮಶಾನಗಳಲ್ಲಿ ಸಾಮರಸ್ಯ ತರಲು ಎಲ್ಲರೂ ಶ್ರಮಿಸಬೇಕಿದೆ. ದೇಶದ ಪ್ರಗತಿಗೆ ಪೂರಕವಾಗಿ ಮಾತೃ ಭಾಷೆಯಲ್ಲಿ ಎಲ್ಲರೂ ವ್ಯವ ಹರಿಸುವುದು, ಸ್ವದೇಶಿ ವಸ್ತುಗಳ ಬಳಕೆ ಮಾಡುವುದು ಕಡ್ಡಾಯ ಮಾಡಬೇಕೆಂದು ಹೇಳಿದರು.
ನಾಗರಿಕ ಸಂಹಿತೆ ಬೆಳೆಸಲು ಮುಂದಾಗಬೇಕಿದೆ. ಹಿರಿಯವರಿಗೆ ಗೌರವ ನೀಡಬೇಕು. ಕಾನೂನು ಪಾಲನೆ ಕಟ್ಟುನಿಟ್ಟಾಗಿ ಮಾಡಬೇಕು. ಅದರಲ್ಲೂ ವಾಹನ ಚಾಲನೆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಬೇಕು. ಪಂಚ ಪರಿವರ್ತನೆಗೆ ಎಲ್ಲರೂ ಗಮನ ನೀಡಬೇಕಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಪ್ರಾಂತದ ಎ ಮಂಡಲದಲ್ಲೂ ಹಿಂದು ಸಮಾವೇಶ ನಡೆಸಬೇಕು. ಜಿ ಪ್ರಮುಖರನ್ನು ಸೇರಿಸಿ ಕಾರ್ಯ ಕ್ರಮ ಮಾಡಬೇಕಿದೆ. ತಾಲ್ಲೂಕು ಮಟ್ಟದಲ್ಲಿಯೂ ಜಗೃತಿ ಕಾರ್ಯ ಕ್ರಮ ಮಾಡಬೇಕಿದೆ ಎಂದರು.
ಸಂಘಕ್ಕೆ ನೂರು ವರ್ಷ ತುಂಬಿ ನೂರ ಒಂದನೇ ವರ್ಷಕ್ಕೆ ಕಾಲಿಟ್ಟಿದೆ. ಅನೇಕರು ನೂರು ವರ್ಷದಲ್ಲಿ ಸಂಘ ಏನು ಮಾಡಿದೆ ಎಂದು ಕೇಳುವವರಿzರೆ. ಇಂದು ಹಿಂದೂ ಸಮಾಜ ಜಗೃತವಾಗಿದೆ. ಹಿಂದೂ ಎಂದು ಹೇಳಿಕೊಳ್ಳಲು ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ವಿಶ್ವಾಸ, ನಂಬಿಕೆಯನ್ನು ಹೆಚ್ಚಿಸು ವಲ್ಲಿ ಸಂಘ ಕೆಲಸ ಮಾಡಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಖೆಗಳು ನಡೆಯುತ್ತಿವೆ ಎಂದರು.
ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳನ್ನು ನೀಡಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ನೀಡಿದೆ. ವನವಾಸಿಗಳನ್ನು ಸಂಘಟಿಸಿ ಅವರ ಏಳಿಗೆಗೆ ಶ್ರಮಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಸಂಘ ಕೆಲಸ ಮಾಡುತ್ತಿದೆ. ವಿಕಲಚೇತ ರಿಗೆ ಬೇಕಾದ ಸೌಲಭ್ಯಗಳನ್ನು ಕೊಡುತ್ತಿದೆ. ಹೀಗೆ ಅನೇಕ ಸ್ತರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂಘದ ಸಾಧನೆ ಎಂದರು.
ಹಿಂದೂ ಸಂಘಟಿತನಾಗಬಲ್ಲ. ಒಂದು ವಿಚಾರಕ್ಕಾಗಿ ಕೆಲಸ ಮಾಡ ಬಲ್ಲ ಎಂಬುದನ್ನು ತೋರಿಸಲಾ ಗಿದೆ. ಸಂಘ ನೂರು ವರ್ಷದಲ್ಲಿ ಎರಡಾಗಿಲ್ಲ. ಸ್ವಯಂ ಸೇವಕರು ದೇಶ ಮೊದಲು ಎಂಬ ನಿಸ್ವಾರ್ಥ ಭಾವನೆಯಲ್ಲಿ ಕೆಲಸ ಮಾಡುತ್ತಿ zರೆ. ಆಪತ್ತು, ವಿಪತ್ತು, ಯುದ್ಧ ಬಂದಾಗ ಸ್ವಯಂ ಸೇವಕರು ಕೆಲಸ ಮಾಡಿzರೆ. ನಗರ, ಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿಯೂ ಕೂಡ ಗಣವೇಷ ಧರಿಸಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿzರೆ ಎಂದರು.
ಇದಕ್ಕೂ ಮೊದಲು ಸುಮಾರು ೩೪೦೦ಕ್ಕೂ ಹೆಚ್ಚು ಸ್ವಯಂಸೇವಕರು ಗಣವೇಷದಲ್ಲಿ ಮಾರಿಕಾಂಬ ದೇವಸ್ಥಾನದಿಂದ ಅಲ್ಲಮಪ್ರಭು ಮೈದಾನದವರೆಗೆ ವಿಜಯ ದಶಮಿ ಪಥಸಂಚಲನ ಮಾಡಿದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಭಾರತ ಮಾತೆಯ ಅಲಂಕೃತ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಭಗವಾದ್ವಜಕ್ಕೆ ಅಲ್ಲಲ್ಲಿ ಪುಷ್ಪಾರ್ಚನೆ ಮಾಡಿದರು. ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಪಥಸಂಚಲನ ಮಾಡುವ ಸ್ವಯಂಸೇವಕರ ಮೇಲೆ ಪುಷ್ಪವೃಷ್ಟಿಗೈಯ್ದರು.
ವೇದಿಕೆಯಲ್ಲಿ ಶಿವಮೊಗ್ಗ ವಿಭಾಗ ಸಂಘಚಾಲಕ ದಿನೇಶ್ ಭಾರತೀಪುರ, ಜಿ ಸಂಘಚಾಲಕ ಬಿ.ಎ. ರಂಗನಾಥ್, ನಗರ ಸಂಘಚಾಲಕ ಲೋಕೇಶ್ವರರಾವ್ ಕಾಳೆ, ಪ್ರಾಂತ ಘೋಷ್ ಪ್ರಮುಖ ಗಿರೀಶ್, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಇದ್ದರು.
