ಜಿಲ್ಲಾ ಸುದ್ದಿತಾಜಾ ಸುದ್ದಿ

ನಾಳೆ ಹಿಂದೂ ಗಣಪತಿ ರಾಜಬೀದಿ ಉತ್ಸವ: ಕೇಸರಿಮಯವಾದ ಸ್ಮಾರ್ಟ್ ಸಿಟಿ…

Share Below Link

ಶಿವಮೊಗ್ಗ: ಸೆ.೨೮ರ ನಾಳೆ ನಡೆಯುವ ಹಿಂದು ಮಹಾಸಭಾ ಗಣಪತಿಯ ಮೆರವಣಿಗೆ ಹಿನ್ನೆಲೆ ಯಲ್ಲಿ ನಗರವಿಡೀ ಕೇಸರಿಮಯ ವಾಗಿದೆ. ನಗರದ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು. ಭಗವಾಧ್ವ ಜಗಳು, ಬಂಟಿಂಗ್ಸ್‌ಗಳು ರಾರಾಜಿ ಸುತ್ತಿವೆ.
ಗಾಂಧಿ ಬಜರ್ ಅಂತೂ ಕಣ್ಣಿಗೆ ಕಾಣುವಷ್ಟು ದೂರ ಕೇಸರಿಮಯವಾಗಿದೆ. ಗಾಂಧಿಬಜರಿನ ಪ್ರಮುಖ ದ್ವಾರದ ಲ್ಲಿಯೇ ಗಮನಸೆಳೆಯುವ ಉಗ್ರ ನರಸಿಂಹನ ಮೂರ್ತಿಯನ್ನು ಸ್ಥಾಪಿ ಸಲಾಗಿದೆ. ಸುಮಾರು ೩೦ ಅಡಿ ಎತ್ತರದ ಈ ಮೂರ್ತಿ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಇಂದು ಸಾವಿರಾರು ಜನರು ಮೂರ್ತಿಯ ಎದುರು ನಿಂತು ಸೆಲ್ಫಿ ತೆಗೆದುಕೊ ಳ್ಳುವ ದೃಶ್ಯ ಸಾಮಾನ್ಯವಾಗಿತ್ತು.


ಪ್ರತಿ ವರ್ಷವೂ ಹಿಂದೂ ಸಂಘಟನೆಯ ಮಹಾ ಮಂಡಳಿ ವಿಶೇಷ ಅಲಂಕಾರಗಳನ್ನು ಇಲ್ಲಿ ಮಾಡುತ್ತಾ ಬಂದಿದೆ. ಕಳೆದ ಬಾರಿಯೂ ಗೀತೋಪದೇಶದ ಸ್ತಬ್ಧ ಚಿತ್ರವನ್ನು ಮಾಡಲಾಗಿತ್ತು. ಈ ಬಾರಿಯ ವಿಶೇಷವೆಂದರೆ ಇದು ಕೇವಲ ಸ್ತಬ್ಧ ಚಿತ್ರವಲ್ಲದೆ ರೋಬೋಟ್ ಮೂಲಕ ಇದನ್ನು ಚಲನಸ್ಥಿತಿಯಲ್ಲಿ ಇಡಲಾಗಿದೆ. ಈ ಮೂರ್ತಿಯು ನೋಡುಗರ ಗಮನ ಸೆಳೆಯುತ್ತಿದೆ.ಸುಮಾರು ೨೦ಕ್ಕೂ ಹೆಚ್ಚು ಕಲಾವಿದರು ೩ ತಿಂಗಳ ಕಾಲ ಶ್ರಮವಹಿಸಿ ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಇದಲ್ಲದೆ ಶಿವಪ್ಪನಾಯಕ ವೃತ್ತದಲ್ಲಿ ಚಂದ್ರಯಾನ ರಾಕೆಟ್‌ನ ಪ್ರತಿಕೃತಿಯನ್ನು ಕೂಡ ನಿರ್ಮಿಸ ಲಾಗಿದೆ.ಇದು ಕೂಡ ನೋಡುಗರ ಗಮನ ಸೆಳೆಯುತ್ತಿದೆ. ಈ ಬಾರಿ ಚಂದ್ರಯಾನ -೩ರ ಯಶಸ್ಸಿನ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸ ಲಾಗಿದೆ. ಹಾಗೆಯೇ ಆಂಜನೇಯ ಮೂರ್ತಿಯನ್ನು ಕೂಡ ನಿರ್ಮಿ ಸಲಾಗಿದೆ.


ಈದ್‌ಮಿಲಾದ್ ಮತ್ತು ಗಣೇಶ ಹಬ್ಬ ಒಂದೇ ಬಾರಿ ಬಂದಿ ದ್ದರಿಂದ ಮೆರವಣಿಗೆಯ ಆತಂಕ ವಿತ್ತು. ಆದರೆ ಮುಸಲ್ಮಾನ ಬಾಂಧ ವರು ಮೆರವಣಿಗೆ ಮುಂದಕ್ಕೆ ಹಾಕಿದ್ದಾರೆ. ಈಗಾಗಲೇ ಶಾಂತಿ ಯುತವಾಗಿ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ ಅನೇಕ ಬಾರಿ ಶಾಂತಿ ಸಭೆಗಳು ನಡೆದಿವೆ. ಕೆಲವು ಸಂಘ- ಸಂಸ್ಥೆಗಳು ಕೂಡ ಶಾಂತಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಮುಸ್ಲಿಂ ಮುಖಂಡರು ಹಿಂದೂ ಮಹಾಸಭಾ ಪ್ರತಿಷ್ಠಾಪಿಸಿರುವ ಗಣಪತಿಯ ದರ್ಶನ ಪಡೆದು ಹಬ್ಬ ಶಾಂತಿಯುತವಾಗಿ ಹಾಗೂ ಸೌಹಾ ರ್ದಯುತವಾಗಿ ನಡೆಯಲೆಂದು ಆಶಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ನಾಳೆ ನಡೆಯುವ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು, ಹಿಂದು ಮಹಾ ಮಂಡಳಿ ಎಲ್ಲರೂ ಒಟ್ಟಾಗಿ ಶ್ರಮಿಸುತ್ತಿದ್ದಾರೆ. ಮೆರವಣಿಗೆ ಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಅದರಲ್ಲೂ ಸಾವಿರಾರು ಮಹಿಳೆಯರು ಕೂಡ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಧರ್ಮ ಉಳಿಯಲಿ;ದುಷ್ಟ ಶಕ್ತಿ ಅಳಿಯಲಿ: ಹಿಂದೂ ಧರ್ಮ ಉಳಿಯಬೇಕು ಎಂಬ ದೃಷ್ಟಿಯಿಂದ ಈ ಬಾರಿಯ ಗಣಪತಿ ಹಬ್ಬದಲ್ಲಿ ಹಿಂದೂ ಸಂಘಟನಾ ಕೇಸರಿ ಅಲಂಕಾರ ಸಮಿತಿಯು ವಿಶೇಷ ಅಲಂಕಾರಗಳನ್ನು ಮಾಡಿದೆ ಎಂದು ವಿಹೆಚ್‌ಪಿ ಪ್ರಮುಖ ದೀನದಯಾಳ್ ಹೇಳಿದರು.


ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ದುಷ್ಟ ಶಕ್ತಿಗಳು ಅಳಿಯಬೇಕು. ಶಿಷ್ಟ ಶಕ್ತಿಗಳು ಉಳಿಯಬೇಕು. ಹಿಂದೂ ಧರ್ಮ ಮೆರೆಯಬೇಕು ಎಂಬ ಉದ್ದೇಶ ದಿಂದಲೇ ಈ ಬಾರಿ ಇಡೀ ನಗರ ದಲ್ಲಿ ಕೇಸರಿ ಅಲಂಕಾರವನ್ನು ಮಾಡಲಾಗಿದೆ. ಜೊತೆಗೆ ಗಾಂಧಿಬಜರಿನಲ್ಲಿ ಉಗ್ರ ನರಸಿಂಹನ ವಿಶೇಷ ಮೂರ್ತಿಯನ್ನು ನಿರ್ಮಿಸ ಲಾಗಿದೆ. ಚಂದ್ರಯಾನದ ರಾಕೆಟ್ ಪ್ರತಿಕೃತಿ ನಿರ್ಮಿಸಲಾಗಿದೆ. ಧರ್ಮ ಮತ್ತು ದೇಶ ಪ್ರೇಮದ ಪ್ರತಿರೂ ಪವಾಗಿ ಈ ಬಾರಿಯ ಗಣಪತಿ ಹಬ್ಬವನ್ನು ಹಿಂದೂ ಸಂಘಟನಾ ಮಹಾ ಮಂಡಳಿ ಅತ್ಯಂತ ವಿಜೃಂ ಭಣೆಯಿಂದ ಆಚರಿಸುತ್ತಿದೆ ಎಂದರು.


ಮೆರವಣಿಗೆಯಲ್ಲಿ ಕೆಲವು ನಿಯಮಗಳನ್ನು ಪೊಲೀಸ್ ಇಲಾ ಖೆ ರೂಪಿಸಿದೆ. ಭಾಗವಹಿಸುವ ಸಾರ್ವಜನಿ ಕರು ಇದನ್ನು ಗಮನಿಸಬೇಕು. ಶಾಂತಿಯುತವಾಗಿ ಹಬ್ಬ ನಡೆ ಯಲು ಸಹಕರಿಸಬೇಕು. ಲಕ್ಷಾಂತರ ಜನರು ಸೇರುವ ಹಬ್ಬವಿದು. ತಿಂಗಳಿನಿಂದ ನಮ್ಮ ಹಿಂದೂ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಪಟ್ಟು ಬಂಟಿಂಗ್ಸ್, ಭಗವಾ ಧ್ವಜ, ಕೇಸರಿ ತೋರಣ ನಿರ್ಮಿಸಿ ದ್ದಾರೆ. ಎಲ್ಲಾ ಹಿಂದೂ ಕಾರ್ಯ ಕರ್ತರಿಗೆ ಅಭಿನಂದನೆಗಳು. ಹಿಂದುಗಳೆಲ್ಲರೂ ಈ ಹಬ್ಬದಲ್ಲಿ ಪಾಲ್ಗೊಂಡು ಮೆರವಣಿಗೆ ಯಶಸ್ವಿ ಗೊಳಿಸಬೇಕು ಎಂದರು.