ಜಿಲ್ಲಾ ಸುದ್ದಿತಾಜಾ ಸುದ್ದಿ

ಮರಬನಹಳ್ಳಿಯ ಗುಡ್ಡದ ಬೆನಕೇಶ್ವರ ದೇವಸ್ಥಾನದವರೆಗೆ ದೊಡ್ಮನೆ ಕುಟುಂಬದಿಂದ ಪಾದಯಾತ್ರೆ …

Share Below Link

ಹೊನ್ನಾಳಿ: ಶಾಸಕ ಡಿ.ಜಿ. ಶಾಂತನಗೌಡರ ಕುಟುಂಬಸ್ಥರು ಚುನಾವಣೆ ಪೂರ್ವದಲ್ಲಿ ಶಾಂತನಗೌಡರ ಗೆಲುವಿಗಾಗಿ ಹರಕೆ ಹೊತ್ತಿದ್ದು ಇಂದು ಪಾದಯಾತ್ರೆ ಮೂಲಕ ಶಾಸಕರ ಸ್ವ-ಗ್ರಾಮವಾದ ಬೆನಕನಹಳ್ಳಿಯಿಂದ ಚನ್ನಗಿರಿ ತಾಲ್ಲೂಕಿನ ಮರಬಹನಹಳ್ಳಿಯ ಗುಡ್ಡದ ಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ತಮ್ಮ ಹರಕೆ ತೀರಿಸಿದರು.
ಬೆನಕನಹಳ್ಳಿಯ ಶ್ರೀ ವಿನಾಯಕ ದೇವಸ್ಥಾನದಿಂದ ಬೆಳಿಗ್ಗೆ ೫.೪೫ಕ್ಕೆ ಮಡಿ ಮತ್ತು ಉಪವಾಸ ದಿಂದ ಪಾದಯಾತ್ರೆ ಪ್ರಾರಂಭಿಸಿದ ಶಾಸಕರ ದೊಡ್ಡಮನೆ ಕುಟುಂಬ ಸ್ಥರು ಬೆಳಿಗ್ಗೆ ೧೦.೩೦ಕ್ಕೆ ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಗ್ರಾಮದ ತಮ್ಮ ಮನೆ ದೇವರಾದ ಗುಡ್ಡದ ಬಸವೇಶ್ವರ ದೇವಸ್ಥಾನಕ್ಕೆ ೧೩ ಕಿ.ಮೀ. ಕ್ರಮಿಸಿ ತಲುಪಿದರು. ತಮ್ಮ ಮನೆ ದೇವರಿಗೆ ಭಕ್ತಿ-ಭಾವ ದಿಂದ ವಿಶೇಷ ಪೂಜ- ಕೈಂಕರ್ಯಗಳನ್ನು ನೆರವೇರಿಸಿ ತಮ್ಮ ಹರಕೆ ತೀರಿಸಿದರು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಶಾಂತನಗೌಡರಿಗೆ ಕೊನೆ ಸಮಯದಲ್ಲಿ ಟಿಕೆಟ್ ಘೋಷಣೆಯಾಯ್ತು. ಚುನಾವಣಾ ಪ್ರಚಾರಕ್ಕೆ ಸಮಯ ಕಡಿಮೆ ಇದ್ದದ್ದರಿಂದ ಶಾಸಕರೇ ಹಲವಾರು ಬಾರಿ ತಮ್ಮ ಅಭಿನಂದನಾ ಕಾರ್ಯಕ್ರಮಗಳಲ್ಲಿ ೩೦ ಹಳ್ಳಿಗಳಿಗೆ ಮತ ಯಾಚನೆಗೆ ಹೋಗಲಾಗಲಿಲ್ಲ ವೆಂದು ಹೇಳಿದ್ದರು.
ಮೊದಲೇ ಚುನಾವಣಾ ಪ್ರಚಾರಕ್ಕೆ ಸಮಯ ಕಡಿಮೆ ಇದ್ದದ್ದರ ಕೊರತೆಯನ್ನು ಪ್ರಥಮ ಬಾರಿಗೆ ಶಾಂತನಗೌಡರ ಪುತ್ರರ ಪತ್ನಿಯರಾದ ಡಿ.ಎಸ್. ಸೌಮ್ಯ ಪ್ರದೀಪ್‌ಗೌಡ, ಡಿ.ಎಸ್.ವಾಣಿ ಸುರೇಂದ್ರಗೌಡ ಇವರ ನೇತೃತ್ವದಲ್ಲಿ ೧೬ಕ್ಕೂ ಹೆಚ್ಚು ಮಹಿಳೆಯರ ತಂಡವು ಚುನಾವಣಾ ಅಖಾಡಕ್ಕೆ ಧುಮುಕಿ ಚುನಾವಣಾ ಪ್ರಚಾರದ ಅನುಭವ ಇಲ್ಲದಿದ್ದರೂ ಅವಳಿ ತಾಲ್ಲೂಕಿನ ಪ್ರತೀ ಹಳ್ಳಿಗಳಲ್ಲೂ ಬೆಳಿಗ್ಗೆ ೭ ರಿಂದ ರಾತ್ರಿ ೧೦ ರವರೆಗೆ ಮಿಂಚಿನಂತೆ ಸಂಚರಿಸಿ ಅವಳಿ ತಾಲ್ಲೂಕಿನ ಮತದಾರರ ಮತ ಪಡೆಯುವಲ್ಲಿ ಯಶಸ್ವಿಯಾಗಿ ಕೊನೆಗೆ ಶಾಂತನಗೌಡರು ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಜಿ.ಶಾಂತನಗೌಡರ ಕುಟುಂಬದ ಮಹಿಳೆಯರು ಮೊದಲಿನಿಂದಲೂ ಚುನಾವಣಾ ಪ್ರಚಾರದಲ್ಲಿ ಭಾಗಿ ಯಾಗುತ್ತಿರಲಿಲ್ಲ ಎಂಬ ಅಪವಾದ ವನ್ನು ದೂರ ಮಾಡಿ ಅನುಭವವಿ ರುವವರಂತೆಯೇ ಚುನಾವಣಾ ರಣಕಣದಲ್ಲಿ ತಮ್ಮ ಅಭ್ಯರ್ಥಿಯ ನ್ನು ಗೆಲ್ಲಿಸಿ ಗೆಲುವಿನ ನಗೆ ಬೀರಿ ದರು.ಸೋಮವಾರ ಮನೆ ದೇವರ ವಾರ ಮತ್ತು ವಿಶೇಷವಾಗಿ ಗುರು ಪೂರ್ಣಿಮೆ ದಿನವಾಗಿದ್ದು ಇತ್ತ ಕುಟುಂಬಸ್ಥರು ಪಾದಾಯಾತ್ರೆ ಮೂಲಕ ಹರಕೆ ತೀರಿಸುತ್ತಿದ್ದಂ ತೆಯೇ ಅತ್ತ ಶಾಸಕ ಡಿ.ಜಿ. ಶಾಂತನ ಗೌಡ ಅವರು ಬೆಂಗಳೂರಿನ ರಾಜ್ಯ ಸಹಕಾರ ಮಂಡಳಿಯ ನೂತನ ನಿರ್ದೇಶಕರಾಗಿ ಸತತ ೫ನೇ ಬಾರಿಗೆ ಪುನರ್ ಆಯ್ಕೆಯಾಗಿರುವುದು ಕುಟುಂಬಸ್ಥರಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದೆ.
ಪಾದಯಾತ್ರೆ ತಂಡದಲ್ಲಿ ಡಿ.ಎಸ್. ಸೌಮ್ಯ ಪ್ರದೀಪ್‌ಗೌಡ, ಡಿ.ಎಸ್.ವಾಣಿ ಸುರೇಂದ್ರಗೌಡ, ಕವಿತಾಸುರೇಶ್, ದೀಪಾರಘು, ಲೀಲಾ ಮಂಜುನಾಥ್, ಲತಾ ಗಿರೀಶ್, ಎಚ್.ಜಿ.ಮುಂಜುಳಾ ಗಣೇಶ್, ಕೀರ್ತನಾ ಕಿರಣ್, ಶೀಲಾ ಅರುಣ್, ಮಂಜುಳಾ ಗಣೇಶ್, ರೂಪಾ ಸುನಿಲ್, ನಂದಾ ಏಕನಾಥ್ ದಂಪತಿಗಳು ಮತ್ತು ಶಾಸಕರ ಮೊಮ್ಮಕ್ಕಳಾದ ಮೇಘನಾ, ಪಾಲ್ಗೊಂಡಿದ್ದರು.