ತಾಪಂ ಮಳಿಗೆ ಅವ್ಯವಹಾರ; ಕರವೇಯಿಂದ ಪ್ರತಿಭಟನೆಯ ಎಚ್ಚರಿಕೆ
ಬೇಲೂರು : ತಾಪಂಗೆ ಸೇರಿದ ೧೫ ಮಳಿಗೆಗಳು ಅವ್ಯವಹಾರದಿಂದ ಕೂಡಿದ್ದು ಅಧಿಕಾರಿಗಳು ಶಾಮೀಲಾಗಿzರೆ, ಶಾಮೀಲಾಗಿದ್ದವರನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಜಿಪಂ ಸಿಒಗೆ ಮನವಿ ಮಾಡಲಾಗಿದೆ ಎಂದು ಕರವೇ ಅಧ್ಯಕ್ಷ ಚಂದ್ರಶೇಖರ್ ಹಾಗು ಪ್ರಧಾನ ಕಾರ್ಯದರ್ಶಿ ಖಾದರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ತಾಪಂ ಪಕ್ಕದಲ್ಲಿರುವ ೧೦ ಮಳಿಗೆಗಳು ಹಾಗು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ೫ ಮಳಿಗೆಗಳ ಅವಧಿ ಮುಗಿದು ೬ ವರ್ಷಗಳು ಕಳೆದರೂ ಅವುಗಳನ್ನು ಮರು ಟೆಂಡರ್ ಮಾಡದೆ, ಬಾಡಿಗೆದಾರರ ಜೊತೆ ಅಲ್ಲಿರುವ ಕೆಲವರು ಶಾಮೀಲಾಗಿ ಸರ್ಕಾರಕ್ಕೆ ಕೋಟ್ಯಾಂತರ ಹಣ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಿದರು.
೨೦೨೨ರಲ್ಲಿ ನ್ಯಾಯಾಲಯದಿಂದ ತಡೆಯಾe ತಂದಿದ್ದು ಅದು ವಜಗೊಂಡು ೩ ವರ್ಷ ಕಳೆದರು ಮಳಿಗೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ನಾಟಕವಾಡುತ್ತಿzರಲ್ಲದೆ ಮರು ಹರಾಜು ಮಾಡಲು ಮೀನಾಮೇಷ ಏಣಿಸುತ್ತಿzರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ನ್ಯಾಯಾಲಯವು ಸಹ ಮಳಿಗೆದಾರರಿಂದ ಮಳಿಗೆಗಳನ್ನು ವಶಪಡಿಸಿಕೊಂಡು ಹರಾಜು ಮಾಡಲು ತೀರ್ಪು ನೀಡಿದೆ. ಕೆಲ ಅಧಿಕಾರಿಗಳು ಜಿಪಂಗೆ ತಪ್ಪು ಮಾಹಿತಿ ನೀಡಿ ತೀರ್ಪಿನ ಪ್ರತಿ ತೋರಿಸದೆ ೩ ವರ್ಷಗಳಿಂದ ಅಲ್ಲಿರುವ ಮಳಿಗೆದಾರರ ಜೊತೆ ಶಾಮೀಲಾಗಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ಇಒ ಬಳಿ ವಿಚಾರಿಸಿದಾಗ ಮಳಿಗೆದಾರರಿಗೆ ೧೫ನೇ ತಾರೀಖು ಮಳಿಗೆ ಖಾಲಿ ಮಾಡಲು ಅಂತಿಮ ಗಡುವು ನೀಡಿzವೆ ಎಂದು ತಿಳಿಸಿzರೆ. ಇದರಲ್ಲಿ ಕಾಣದ ಕೈ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ೧೫ರ ನಂತರ ಮಳಿಗೆಗಳನ್ನು ವಶಪಡಿಸಿ ಕೊಂಡು ಮರು ಹರಾಜು ಹಾಕದಿದ್ದರೆ ತಾಪಂ ಮುಂಭಾಗದಲ್ಕಿ ಸಾರ್ವಜನಿಕರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ತಾರನಾಥ್, ಮೋಹನ್, ಚಂದ್ರು, ಕುಮಾರ್ ಹಾಜರಿದ್ದರು.
