ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನಂಜಪ್ಪ ಲೈಫ್ ಕೇರ್‌ನಲ್ಲಿ ಹೃದಯದ ಮಾತು…

Share Below Link

ಶಿವಮೊಗ್ಗ : ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಇಂದು ವಿಶ್ವ ಹೃದಯ ದಿನದ ಅಂಗ ವಾಗಿ ಶಾಲಾ ಮಕ್ಕಳಿಗೆ ಆರೋಗ್ಯ ಅರಿವು ಮೂಡಿಸುವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರ ಮವನ್ನು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಸಿಇಒ ಡಾ.ಅವಿನಾಶ್, ಆಡಳಿತ ನಿರ್ದೇಶಕ ಡಾ.ಬೆನಕಪ್ಪ, ಹಾಗೂ ಡಾ.ನರೇಂದ್ರ ನಿಶಾನಿ ಮಠ ಅವರು ಉದ್ಘಾಟಿಸಿದರು.


ತಜ್ಞ ವೈದ್ಯರು ಹೃದಯದ ರಚನೆ ಮತ್ತು ಕಾರ್ಯ ವೈಖರಿ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಗರದ ೨೫ ಕ್ಕೂ ಹೆಚ್ಚು ಶಾಲೆಯ ಸುಮಾರು ೨೦೦ ಮಕ್ಕಳು ಆರ್ಟ್ ಫಾರ್ ಹಾರ್ಟ್ ಶೀರ್ಷಿಕೆಯಡಿ ಹೃದಯದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ಹೃದಯದ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ಡಾ. ಹರೀಶ್, ಡಾ.ಪ್ರವೀಣ್ ಹಾಗೂ ಡಾ.ಅರ್ಜುನ್ ಅವರುಗಳು ಪ್ಯಾತ್ಯ ಕ್ಷಿಕೆ ಮೂಲಕ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು.ಡಾ.ನರೇಂದ್ರ ಮತ್ತು ನರ್ಸಿಂಗ್ ಕಾಲೇಜಿನ ಪ್ರಾಚಾ ರ್ಯರಾದ ಉಮಾ ಅವರು ಬಹು ಮಾನ ವಿತರಣೆ ನೆರವೇರಿಸಿದರು. ಶಾಲಾ ಮಕ್ಕಳಿಗೆ ಹೃದಯದ ಬಗ್ಗೆ ಮಾಹಿತಿ ಮತ್ತು ಡ್ರಾಯಿಂಗ್ ಸ್ಪರ್ಧೆ ಕಾರ್‍ಯಕ್ರಮ ಆಯೋಜಿಸಿರು ವುದನ್ನು ಅತಿಥಿಗಳು ಪ್ರಶಂಸಿಸಿದರು.